ಡೇಟಿಂಗ್ ವದಂತಿಯ ನಡುವೆಯೇ ಹೊರಬಿತ್ತು ಬ್ರೇಕಪ್ ಸುದ್ದಿ: ಧನುಷ್-ಮೃಣಾಲ್ ಸಂಬಂಧದ ಸತ್ಯಾಸತ್ಯತೆ ಏನು? Dhanush and Mrunal Thakur 
ಸಿನಿವಾಣಿ

ಡೇಟಿಂಗ್ ವದಂತಿಯ ನಡುವೆಯೇ ಹೊರಬಿತ್ತು ಬ್ರೇಕಪ್ ಸುದ್ದಿ: ಧನುಷ್-ಮೃಣಾಲ್ ಸಂಬಂಧದ ಸತ್ಯಾಸತ್ಯತೆ ಏನು? Dhanush and Mrunal Thakur

ಪ್ರಮುಖ ಮುಖ್ಯಾಂಶಗಳು

  • ಧನುಷ್-ಮೃಣಾಲ್ ಠಾಕೂರ್ ನಡುವೆ ಬಿರುಕು? ಡೇಟಿಂಗ್ ವದಂತಿಯ ಬೆನ್ನಲ್ಲೇ ಬ್ರೇಕಪ್ ಸುದ್ದಿ!
  • ಧನುಷ್ ಆಗಲಿ ಅಥವಾ ಮೃಣಾಲ್ ಆಗಲಿ ಈವರೆಗೆ ಯಾವುದೇ ರೀತಿಯ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ
  • ತಮ್ಮ ಪ್ರೇಮ ಸಂಬಂಧವನ್ನು ಎಲ್ಲಿಯೂ ಒಪ್ಪಿಕೊಂಡಿಲ್ಲ ಅಷ್ಟರಲ್ಲೇ ಇಬ್ಬರ ಬ್ರೇಕಪ್​ ಸುದ್ದಿ ಹೊರಬಿದ್ದಿದೆ
  • ಈ ವಿಚಾರವಾಗಿ ಇಬ್ಬರು ಕಲಾವಿದರು ಸ್ಪಷ್ಟನೆ ನೀಡಬೇಕೆಂದು ಫ್ಯಾನ್ಸ್​ ಆಗ್ರಹಿಸುತ್ತಿದ್ದಾರೆ
Dhanush and Mrunal Thakur : ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಹಾಗೂ ಬಾಲಿವುಡ್ ಬ್ಯೂಟಿ ಮೃಣಾಲ್ ಠಾಕೂರ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಹಾಗೂ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿದ್ದು ಡೇಟಿಂಗ್​ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದ್ದವು. ಆದರೆ, ಈ ಪ್ರೇಮ ವದಂತಿಗಳಿಗೆ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಖ್ಯಾತ ಚಲನಚಿತ್ರ ನಿಯತಕಾಲಿಕೆ 'ಫಿಲ್ಮ್ ಫೇರ್' ಪ್ರಕಟಿಸಿರುವ ಇತ್ತೀಚಿನ ಲೇಖನದ ಪ್ರಕಾರ, ಧನುಷ್ ಹಾಗೂ ಮೃಣಾಲ್ ಠಾಕೂರ್ ತಮ್ಮ ನಡುವಿನ ಸಂಬಂಧವನ್ನು ಈಗ ಮುರಿದುಕೊಂಡಿದ್ದಾರೆ (ಬ್ರೇಕಪ್ ಮಾಡಿಕೊಂಡಿದ್ದಾರೆ) ಎಂದು ವರದಿಯಾಗಿದೆ.
ಧನುಷ್ ಮತ್ತು ಮೃಣಾಲ್ ಠಾಕೂರ್ ಇಬ್ಬರಿಗೂ ಹತ್ತಿರವಿರುವ ಆಪ್ತ ಮೂಲಗಳ ಪ್ರಕಾರ, ಅವರಿಬ್ಬರೂ ಈಗ ತಮ್ಮ ಹಾದಿಗಳನ್ನು ಬದಲಾಯಿಸಿಕೊಳ್ಳಲು ಅಂದರೆ ಪರಸ್ಪರ ದೂರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಬ್ರೇಕಪ್ ನಿರ್ಧಾರದ ಹಿಂದಿರುವ ನಿಖರವಾದ ಕಾರಣಗಳೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಮತ್ತೊಂದೆಡೆ, ತಮ್ಮ ಬ್ರೇಕಪ್ ಕುರಿತಾಗಿ ಹರಿದಾಡುತ್ತಿರುವ ಈ ಸುದ್ದಿಗೆ ಸಂಬಂಧಿಸಿದಂತೆ ನಟ ಧನುಷ್ ಆಗಲಿ ಅಥವಾ ನಟಿ ಮೃಣಾಲ್ ಆಗಲಿ ಈವರೆಗೆ ಯಾವುದೇ ರೀತಿಯ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ನಟ ಧನುಷ್ ಹಾಗೂ ಮೃಣಾಲ್ ಠಾಕೂರ್ ನಡುವಿನ ಲವ್​ ಅಫೇರ್​ ಕುರಿತಾದ ಚರ್ಚೆಗಳು ಮೊದಲ ಬಾರಿಗೆ ಶುರುವಾಗಿದ್ದು 'ಸನ್ ಆಫ್ ಸರ್ದಾರ್ 2' ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ. ಆ ಕಾರ್ಯಕ್ರಮದಲ್ಲಿ ಧನುಷ್ ಅವರು ಮೃಣಾಲ್ ಅವರೊಂದಿಗೆ ಅತ್ಯಂತ ಆಪ್ತವಾಗಿ ಮಾತನಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ ಅಭಿಮಾನಿಗಳು ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಊಹಿಸಲು ಪ್ರಾರಂಭಿಸಿದರು.
ಅದಾದ ನಂತರ, ಧನುಷ್ ನಟನೆಯ 'ತೇರೆ ಇಷ್ಕ್ ಮೇನ್' ಚಿತ್ರದ ಶೂಟಿಂಗ್ ಮುಕ್ತಾಯದ ಪಾರ್ಟಿಯಲ್ಲಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದು ವದಂತಿಗಳಿಗೆ ಮತ್ತಷ್ಟು ಬಲ ತುಂಬಿತು. ಅಷ್ಟೇ ಅಲ್ಲದೆ, ಮೃಣಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಧನುಷ್ ಅವರ ಸಹೋದರಿಯರನ್ನು ಫಾಲೋ ಮಾಡಲು ಪ್ರಾರಂಭಿಸಿದ್ದು, ಇವರಿಬ್ಬರ ಸಂಬಂಧದ ಕುರಿತು ಹರಿದಾಡುತ್ತಿದ್ದ ಸುದ್ದಿಗಳು ನಿಜವಿರಬಹುದು ಎಂಬ ಚರ್ಚೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಇನ್ನಷ್ಟು ತೀವ್ರಗೊಳಿಸಿತ್ತು.
ಆದರೆ, ಈ ಹಿಂದೆಯೇ ನಟಿ ಮೃಣಾಲ್ ಠಾಕೂರ್ ಈ ಎಲ್ಲಾ ಡೇಟಿಂಗ್ ವದಂತಿಗಳಿಗೆ ಸ್ಪಷ್ಟನೆ ನೀಡಿ, ಇವುಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಈ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಧನುಷ್ ತಮಗೆ ಕೇವಲ ಒಬ್ಬ ಒಳ್ಳೆಯ ಸ್ನೇಹಿತ ಮಾತ್ರ ಎಂದು ಅವರು ಹೇಳಿದ್ದರು. ಅಜಯ್ ದೇವಗನ್ ಅವರ ಆಹ್ವಾನದ ಮೇರೆಗಷ್ಟೇ ತಾವು 'ಸನ್ ಆಫ್ ಸರ್ದಾರ್ 2' ಕಾರ್ಯಕ್ರಮಕ್ಕೆ ಹೋಗಿದ್ದಾಗಿ ವಿವರಿಸಿದ್ದ ಮೃಣಾಲ್, ಜನರು ತಮ್ಮ ವೈಯಕ್ತಿಕ ಜೀವನಕ್ಕಿಂತ ಸಿನಿಮಾಗಳು ಮತ್ತು ನಟನೆಯ ಬಗ್ಗೆ ಹೆಚ್ಚು ಮಾತನಾಡಬೇಕೆಂದು ಬಯಸುವುದಾಗಿ ಹಾಗೂ ತಮಗೇನಾದರೂ ಪ್ರೀತಿಯಾದರೆ ಅದನ್ನು ಬಚ್ಚಿಡದೆ ತಾವೇ ಖುದ್ದಾಗಿ ಪ್ರಕಟಿಸುವುದಾಗಿ ತಿಳಿಸಿದ್ದರು.
ಅಂದಹಾಗೆ, ಧನುಷ್​ ಆಗಲಿ ಮೃಣಾಲ್​ ಆಗಲಿ ತಮ್ಮ ಪ್ರೇಮ ಸಂಬಂಧವನ್ನು ಎಲ್ಲಿಯೂ ಒಪ್ಪಿಕೊಂಡಿಲ್ಲ ಅಷ್ಟರಲ್ಲೇ ಇಬ್ಬರ ಬ್ರೇಕಪ್​ ಸುದ್ದಿ ಹೊರಬಿದ್ದಿರುವುದು ಅಭಿಮಾನಿಗಳನ್ನು ಒಂದು ರೀತಿಯ ಗೊಂದಲಕ್ಕೆ ದೂಡಿದೆ. ಈ ವಿಚಾರವಾಗಿ ಇಬ್ಬರು ಕಲಾವಿದರು ಸ್ಪಷ್ಟನೆ ನೀಡಬೇಕೆಂದು ಫ್ಯಾನ್ಸ್​ ಆಗ್ರಹಿಸುತ್ತಿದ್ದಾರೆ, (ಏಜೆನ್ಸೀಸ್​).