Dhurandhar 2 OTT Release: ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೆಂಜ್ ಸಿನಿಮಾ ಸದ್ಯ ದೇಶ ಮತ್ತು ವಿದೇಶದಲ್ಲೂ ಭಾರಿ ಸಕ್ಸಸ್ ಕಂಡಿದೆ. ವಿಶ್ವಾದ್ಯಂತ ಒಟ್ಟಾರೆಯಾಗಿ 1800 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ಸೃಷ್ಟಿಸಿದೆ. ಸದ್ಯ ಅಭಿಮಾನಿಗಳು ಅದರ OTT ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ, ಈ ಬಾರಿ Dhurandhar 2 ನೆಟ್‌ಫ್ಲಿಕ್ಸ್‌ನಲ್ಲಿ ಅಲ್ಲ ಜಿಯೋ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ.
ದುರಂಧರ್ ಎಲ್ಲಿ ನೋಡಬಹುದು?
ದುರಂಧರ್ ಮೊದಲ ಭಾಗ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಜನರು ಈ ಸಿನಿಮಾನ್ನು ನೆಚ್ಚಿಕೊಂಡು ಅಪ್ಪಿಕೊಂಡಿದ್ದರು. ರೀಲ್ಸ್ನಲ್ಲಿ ಸ್ಪೈ ಬಗ್ಗೆ ಕಾಂಟೆಂಟ್ ಕ್ರಿಯೇಟ್ ಮಾಡಿ ಗೇಲಿ ಮಾಡಿದ್ದರು. ಆದರೆ, ಈ ಬಾರಿ . ವಿಶ್ವಾದ್ಯಂತ, ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ, ಭಾರತದಲ್ಲಿ, ಭಾರತದಲ್ಲಿ ಜಿಯೋ ಹಾಟ್ಸ್ಟಾರ್ ಸಂಸ್ಥೆ ಬರೋಬ್ಬರಿ 150 ಕೋಟಿ ರೂಪಾಯಿಗಳಿಗೆ ಒಟಿಟಿ ಹಕ್ಕನ್ನು ಖರೀದಿಸಿದೆ ಎಂದು ಮಾಹಿತಿ ಹೊರಬಿದ್ದಿದೆ.
ಎಂದು ರಿಲೀಸ್?
ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2: ದಿ ರಿವೆಂಜ್' ಪ್ರಾದೇಶಿಕ ಸಮಯ ವಲಯಗಳನ್ನು ಅವಲಂಬಿಸಿ ಮೇ 14 ಮತ್ತು 15, 2026 ರ ನಡುವೆ ನೆಟ್‌ಫ್ಲಿಕ್ಸ್‌ನಲ್ಲಿ ಅಂತರರಾಷ್ಟ್ರೀಯವಾಗಿ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ವಿದೇಶಿ ವೀಕ್ಷಕರಿಗೆ, ವೇದಿಕೆಯು ಧುರಂಧರ್: ದಿ ರಿವೆಂಜ್ (ರಾ ಆ್ಯಂಡ್ ಅನ್ಸಿನ್) ಎಂಬ ಪರ್ಯಾಯ ಶೀರ್ಷಿಕೆಯಡಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ ಎಂದು ವರದಿಯಾಗಿದೆ,
3 ಗಂಟೆ 52 ನಿಮಿಷ ಇರಲಿದೆ ಸಿನಿಮಾ
ಚಿತ್ರಮಂದಿರದಲ್ಲಿ 3 ಗಂಟೆ 49 ನಿಮಿಷಗಳಿದ್ದ ಧುರಂದರ್: ದಿ ರಿವೇಂಜ್ ಒಟಿಟಿಯಲ್ಲಿ 3 ಗಂಟೆ 52 ನಿಮಿಷಗಳ ಕಾಲ ಇರಲಿದೆ. ಸೆನ್ಸಾರ್ ಮಂಡಳಿಯಿಂದ ಕತ್ತರಿ ಬಿದ್ದಿದ್ದ ಹಿಂಸಾತ್ಮಕ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಈ ಆವೃತ್ತಿಯಲ್ಲಿ ಮರುಸೇರ್ಪಡೆ ಮಾಡಲಾಗಿದೆ. ಇಂದು ಸಿನಿಮಾ ಪ್ರಸಾರ ಆಗುವ ಸಾಧ್ಯತೆ ಇದೆ. ಆದರೆ, ಇನ್ನು ಈ ಬಗ್ಗೆ ಯಾವುದೇ ನಿಖರ ಮಾಹಿತಿ ಹೊರಬಿದ್ದಿಲ್ಲ