Rajinikanth 173rd film Dharman The Deadly Doctor  
ಸಿನಿವಾಣಿ

'ಧರ್ಮನ್ - ದಿ ಡೆಡ್ಲಿ ಡಾಕ್ಟರ್' ರಜನಿಕಾಂತ್; ಸೂಪರ್ ​​ಸ್ಟಾರ್​ 173ನೇ ಚಿತ್ರದ ರಕ್ತಸಿಕ್ತ ಫಸ್ಟ್ ಲುಕ್ ರಿಲೀಸ್..Rajinikanth

ಪ್ರಮುಖ ಮುಖ್ಯಾಂಶಗಳು

  • ಸೂಪರ್‌ಸ್ಟಾರ್ ರಜನಿಕಾಂತ್ ಅವರ 173ನೇ ಸಿನಿಮಾದ ಹೆಸರು, ಫಸ್ಟ್​ ಲುಕ್​ ರಿಲೀಸ್
  • 'ಧರ್ಮನ್' ಮೂಲಕ ರಜನಿಕಾಂತ್ ಮತ್ತು ಕಮಲ್ ಹಾಸನ್ ಮುಖಾಮುಖಿ
  • ಧರ್ಮನ್​ ದಿ ಡೆಡ್ಲಿ ಡಾಕ್ಟರ್​ ಫಸ್ಟ್​​ ಲುಕ್ ರಿಲೀಸ್ ಮಾಡಿದ ಕಮಲ್​ ಹಾಸನ್​ ನಿರ್ಮಾಣ ಸಂಸ್ಥೆ
Dharman First Look: ಕಾಲಿವುಡ್​ನ ಸೂಪರ್​ಸ್ಟಾರ್​ ರಜನೀಕಾಂತ್​ರ 173ನೇ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಕಮಲ್​ ಹಾಸನ್​​​ ಕಮಲ್​ ಹಾಸನ್​ರ ನಿರ್ಮಾಣ ಸಂಸ್ಥೆಯಾದ 'ರಾಜ್ ಕಮಲ್ ಫಿಲ್ಮ್ಸ್  ಹಂಚಿಕೊಂಡಿದೆ.
ರಜನೀಕಾಂತ್​ ಅವರ ಸಿನಿಮಾ ಬೆಳ್ಳೆತೆರೆ ಮೇಲೆ ಅಬ್ಬರಿಸಲು ಘೋಷಣೆಗಳ ಅಗತ್ಯವಿಲ್ಲ. ಕಾರ್ಯಕ್ರಮಗಳ ಅವಶ್ಯಕತೆ ಇಲ್ಲ. ಅವರ ಪೋಸ್ಟ್​​, ಫಸ್ಟ್​ ಲುಕ್​​ ಸಾಕು ಅಭಿಮಾನಿಗಳಿಗೆ ಹಬ್ಬದೂಟ ಇದ್ದಂತೆ. ಈಗ ರಜನಿಕಾಂತ್ ಅವರ 173ನೇ ಚಿತ್ರ 'ಧರ್ಮನ್​ ದಿ ಡೆಡ್ಲಿ ಡಾಕ್ಟರ್'​ ಸಹ ಸೋಶಿಯಲ್​ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ.

ಧರ್ಮನ್​ ದಿ ಡೆಡ್ಲಿ ಡಾಕ್ಟರ್​ ಫಸ್ಟ್​​ ಲುಕ್

ಧರ್ಮನ್​ ದಿ ಡೆಡ್ಲಿ ಡಾಕ್ಟರ್​ ಎನ್ನುವುದು ಸಿನಿಮಾದ ಟೈಟಲ್​ ಆಗಿದ್ದು, ರಜನೀಕಾಂತ್​ ಅವರ ರಕ್ತಸಿಕ್ತ ಫಸ್ಟ್ ಲುಕ್ ಪೋಸ್ಟರ್​ ಅನ್ನು ಕಮಲ್​ ಹಾಸನ್​ರ ನಿರ್ಮಾಣ ಸಂಸ್ಥೆಯಾದ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್'  ಆನ್​ಲೈನ್​ ಪ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಂಡಿದ್ದಾರೆ ಇದಕ್ಕೆ ಜಸ್ಟೀಸ್​ ವಿಲ್​ ಪ್ರಿವೇಲ್​ ನ್ಯಾಯವೇ ಗೆಲ್ಲುವುದು ಎನ್ನುವ ಶೀರ್ಷಿಕೆ ಕೊಟ್ಟುಕೊಂಡಿದ್ದಾರೆ. 

ದಿಗ್ಗಜ ನಟರ ಮುಖಾಮುಖಿ

ಇದು ರಜನೀಕಾಂತ್​ ಅವರ 173ನೇ ಚಿತ್ರವಾಗಿರುವುದರಿಂದ ಮಾತ್ರವಲ್ಲದೆ, ಚಿತ್ರರಂಗದ ಇಬ್ಬರು ದಿಗ್ಗಜರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಅಪರೂಪದ ಕಾಂಬಿನೇಷನ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಚಿತ್ರದ ಪೋಸ್ಟರ್​ನಲ್ಲಿ ಏನಿದೆ?

ರಜನೀಕಾಂತ್​ ಅವರು ಪೋಸ್ಟರ್​​ನಲ್ಲಿ ಸರ್ಜಿಕಲ್​ ಚಾಕು ಹಿಡಿದು, ಬಿಳಿ ಕ್ಲಿನಿಕಲ್ ಕೋಟ್​ ಧರಿಸಿದ್ದಾರೆ. ವ್ಯಕ್ತಿಯೊಬ್ಬನ ಮೇಲೆ ಕಾಲಿಟ್ಟಿರುವಂತೆ ಕಂಡಿದ್ದು, ಶೂ ಅಲ್ಲಲ್ಲಿ ರಕ್ತಸಿಕ್ತವಾಗಿದೆ. ಅವರ ಮುಖದ ಮೇಲಿನ ವಿಶಿಷ್ಟ ನಗು, ಸಿಗ್ನೇಚರ್ ಸನ್‌ಗ್ಲಾಸ್ ಹಾಗೂ ಆಪರೇಷನ್ ಥಿಯೇಟರ್‌ನ ಹಿನ್ನೆಲೆ ನೋಡುಗರಲ್ಲಿ ತೀವ್ರ ಕುತೂಹಲ ಮೂಡಿಸಿದೆ. 

ನಿರ್ದೇಶಕರ ಬದಲಾವಣೆ

2025ರಲ್ಲಿ ಈ ಚಿತ್ರ ಘೋಷಣೆಯಾದಾಗಿನಿಂದ ಹಲವು ಮಹತ್ವದ ಬೆಳವಣಿಗೆಗಳನ್ನು ಕಂಡಿದೆ. ಆರಂಭದಲ್ಲಿ ಈ ಬಿಗ್ ಬಜೆಟ್ ಚಿತ್ರವನ್ನು ಖ್ಯಾತ ನಿರ್ದೇಶಕ ಸುಂದರ್ ಸಿ ನಿರ್ದೇಶಿಸಬೇಕಿತ್ತು. ಆದರೆ, ಘೋಷಣೆಯಾದ ಕೆಲವೇ ದಿನಗಳಲ್ಲಿ ಅನಿವಾರ್ಯ ಮತ್ತು ಅನಿರೀಕ್ಷಿತ ಕಾರಣಗಳಿಂದಾಗಿ ಸುಂದರ್ ಸಿ ಈ ಪ್ರಾಜೆಕ್ಟ್‌ನಿಂದ ಹೊರನಡೆದರು.
ಅವರ ನಿರ್ಗಮನದ ನಂತರ, 'ಡಾನ್' ಚಿತ್ರದ ಖ್ಯಾತಿಯ ನಿರ್ದೇಶಕ ಸಿಬಿ ಚಕ್ರವರ್ತಿ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಯಿತು. ಅವರು ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಸಾಕಷ್ಟು ಸಮಯವನ್ನು ವಿನಿಯೋಗಿಸಿದ್ದರು. ಆದರೆ ನಂತರದ ದಿನಗಳಲ್ಲಿ ಅವರೂ ಸಹ ಚಿತ್ರದಿಂದ ಹೊರನಡೆದಿದ್ದರು.  ಕೊನೆಗೂ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಈಗ ಯುವ ನಿರ್ದೇಶಕ ಅಶ್ವತ್ ಮಾರಿಮುತ್ತು ಈ ಮೆಗಾ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಯಾರು ಈ ಅಶ್ವಥ್​ ಮಾರಿಮುತ್ತು

ಅಶ್ವಥ್​ ಮಾರಿಮುತ್ತು ಒಬ್ಬ ಯುವ ನಿರ್ದೇಶಕ ಇವರು, 2020 ರ ಓ ಮೈ ಕಡವುಲೆ ಸಿನಿಮಾದ ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಇದು  ಒರಿ ದೇವುಡ ಎಂದು ಟಾಲಿವುಡ್​ಗೆ ರಿಮೇಕ್​ ಆಯಿತು. ವೆಂಕಟೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.  ಸಿನಿಮಾದಲ್ಲಿ ಮೌನಿಕಾ ರೆಡ್ಡಿ ಆಶಾ ಭಟ್​​ ನಟಿಸಿದ್ದರು. ನಂತರ ಡ್ರ್ಯಾಗನ್​ ಸಿನಿಮಾವನ್ನು ಇದರಲ್ಲಿ ಪ್ರದೀಪ್​​ ರಂಗನಾಥನ್​, ಕಯಾದು ಲೋಹರ್​, ಅನುಪಮಾ ಪರಮೇಶ್ವರನ್​​​ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದರು.