Dorothy ಸಿನಿಮಾ ಬಾಯ್ಕಾಟ್ಗೆ ನೆಟ್ಟಿಗರಿಂದ ಅಭಿಯಾನ
ಸೆ.25ರಂದು ರಿಲೀಸ್ ಆಗಿರುವ ಕೀರ್ತಿ ಸುರೇಶ್ ಅಭಿನಯದ ಸಿನಿಮಾಕ್ಕೆ ಮೆಚ್ಚುಗೆ
ಜಾತಿ ವ್ಯವಸ್ಥೆ, ಲಿಂಗ ತಾರಮ್ಯದ ಸುತ್ತ ಸಿನಿಮಾದ ಕತೆ ಎಣೆಯಲಾಗಿದೆ
Dorothy: ಬೇಬಿ ಜಾನ್ ಸಿನಿಮಾದ ನಂತರ ಸೌತ್ ಇಂಡಿಯನ್ ಬ್ಯೂಟಿ ಕೀರ್ತಿ ಸುರೇಶ್ ಅವರು ಡೊರೋಥಿ ಮೂಲಕ ನಟನಾ ಲೋಕಕ್ಕೆ ಕಂಬ್ಯಾಕ್ ಆಗಿದ್ದಾರೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಸಿನಿಮಾ ಇಂದು ಸೆ.25ರಂದು ಸಿನಿಮಾ ಬೆಳ್ಳಿ ತೆರೆ ಮೇಲೆ ಅಬ್ಬರಿಸುತ್ತಿದ್ದು, ಚಿತ್ರದ ಬಗ್ಗೆ ನಟ, ನಿರ್ದೇಶಕ ಧನುಷ್ 'ಮಾಸ್ಟರ್ ಪೀಸ್' ಎಂದು ಕೊಂಡಾಡಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಸಿನಿಮಾ ಬಾಯ್ಕಾಟ್ಗೆ ಬೇಡಿಕೆ ಇಟ್ಟಿದ್ದಾರೆ.
1990ರಲ್ಲಿ ಗ್ರಾಮೀಣ ಪ್ರದೇಶದಲ್ಲಿದ್ದ ಜಾತಿ ವ್ಯವಸ್ಥೆ, ಸವರ್ಣೀಯರು ನಡೆಸುತ್ತಿದ್ದ ಹಿಂಸಾಚಾರ. ಪುರುಷ ಪ್ರಧಾನ ಸಮಾಜದ ವ್ಯವಸ್ಥೆ ಬಗ್ಗೆ ಕಟ್ಟಿಕೊಡಲಾಗಿದೆ. ಸಾಮಾಜಿಕ ಪಿಡುಗಿನ ಮಧ್ಯೆ ಕಾರ್ತಿ ಮತ್ತು ಸುಬ್ಬು ಸ್ನೇಹ ಬೆಳೆಯುತ್ತದೆ. ಸುಬ್ಬುವನ್ನು ಮದುವೆಯಾಗಿ ಡೊರೋಥಿ ಎಂಟ್ರಿಯಾಗುತ್ತಾಳೆ. ಡೊರೋಥಿ ಪಾತ್ರದಲ್ಲಿ ಕೀರ್ತಿ ಸುರೇಶ್ ಬಣ್ಣ ಹಚ್ಚಿದ್ದಾರೆ. ಡೊರೋಥಿ ಬಂದ ನಂತರ ಎದುರಾಗುವ ಸಮಸ್ಯೆ, ಪ್ರೀತಿ, ಲಿಂಗ ತಾರತಮ್ಯದ ಸುತ್ತ ಚಿತ್ರದ ಕತೆ ಹೆಣೆಯಲಾಗಿದೆ.
ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಸೆ.11ರಂದು ಟೊರೊಂಟೊ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಸಿನಿಮಾದಲ್ಲಿ ಕೀರ್ತಿ ಸುರೇಶ್, ಸನಂತ್, ರಿಷಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಇಳಯರಾಜರ ಸಂಗೀತವಿದೆ.
ಡೊರೋಥಿ ಒಂದು ಮಾಸ್ಟರ್ಪೀಸ್ ಸಿನಿಮಾ. ಸಿನಿಮಾದಲ್ಲಿನ ಪ್ರತಿಯೊಬ್ಬ ನಟ-ನಟಿ ಅದ್ಭುತವಾಗಿ ನಟಿಸಿದ್ದಾರೆ. ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಮಾಜದ ಸೂಕ್ಷ್ಮ ವಿಷಯವನ್ನು ಧೈರ್ಯವಾಗಿ ತೆರೆಯ ಮೇಲೆ ತಂದಿದ್ದಾರೆ. ಅದರಲ್ಲಿಯೂ ಈ ಸಿನಿಮಾಕ್ಕೆ ನಮ್ಮ ಇಳಯರಾಜ ಅವರ ಸಂಗೀತವು ಸಿನಿಮಾವನ್ನು ಯಾವುದೋ ಲೋಕದತ್ತ ಕೊಂಡೊಯ್ಯುವಂತೆ ಮಾಡುತ್ತದೆ. ಕಾರ್ತಿಕ್ ಸುಬ್ಬರಾಜ್ ಮತ್ತು ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ..ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದ್ದಾರೆ.
ಕಾರ್ತಿಕ್ ಎಂಬ ಎಕ್ಸ್ ಕಾತೆಯಿಂದ ಪೋಸ್ಟ್ ಹಂಚಿಕೊಂಡಿದ್ದು, ದಯವಿಟ್ಟು ಈ ಸಿನಿಮಾವನ್ನು ಪ್ರೋತ್ಸಾಹಿಸಬೇಡಿ ನಾವು ಡೊರೋಥಿ ಸಿನಿಮಾವನ್ನು ಬಹಿಷ್ಕರಿಸಬೇಕು LGBTQ+ ಬಗ್ಗೆ ಮಾತನಾಡುವುದು ಸರಿ, ಆದರೆ ಅದನ್ನು ಜನರ ಮೇಲೆ ಹೇರುವುದು ಸರಿಯಲ್ಲ ಎಂದು ಬರೆದುಕೊಂಡಿದ್ದಾರೆ.
ಸೆಕೆಂಡ್ ಹಾಫ್ ನಲ್ಲಿ LGBTQ+ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಚಿತ್ರಣ ಇದೆ. ಸಿನಿಮಾದ ಕೊನೆಯ ಸೀನ್ನಲ್ಲಿ ಮಹಿಳೆ ವೇಷ ಧರಿಸಿದ ಅಥವಾ ಲಿಂಗತ್ವ ಅಲ್ಪ ಸಂಖ್ಯಾತೆ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಪ್ರೇಕ್ಷಕರನ್ನು ಕೆರಳಿಸಿದೆ.
ಕಾರ್ತಿಕ್ ಸುಬ್ಬರಾಜ್ ಅವರು ಭಾವನಾತ್ಮಕ ಹಾಗೂ ಶಕ್ತಿಯುತವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಕತೆ ಹೇಳುವಿಕೆ, ಅದ್ಭುತ ಅಭಿನಯ ಹಾಗೂ ತೀವ್ರವಾದ ಭಾವನೆ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುವಂತೆ ಮಾಡುತ್ತದೆ. ಇಳಯರಾಜ ಅವರ ಸಂಗೀತವು ಸಿನಿಮಾವನ್ನು ಸ್ವರ ಸಾಮ್ರಾಜ್ಯದಲ್ಲಿರುವಂತೆ ಮಾಡತ್ತದೆ. ಅಲ್ಲಲ್ಲಿ ತಿರುವು, ಪರಾಕಾಷ್ಠೆಗಳು ಸಂಪೂರ್ಣ ಅನಿರೀಕ್ಷಿತ. ಈ ಸಿನಿಮಾವೊಂದು ದಿಟ್ಟ ಪ್ರಯತ್ನ ಎಂದು ತಾರಿಣಿ ಎಂಬುವವರು ಬರೆದುಕೊಂಡಿದ್ದಾರೆ.
ನಿತೀಶ್ ಎಂಬುವವರು ಸಿನಿಮಾ ಬಗ್ಗೆ ರಿವ್ಯೂಕೊಟ್ಟಿದ್ದು ಇಂತಹ ಸಿನಿಮಾವನ್ನು ಮಾಡಲು ಹೃದಯವಂತಿಕೆ ಬೇಕು. ಸಮಾಜದಲ್ಲಾಗುತ್ತಿರುವ ಸೂಕ್ಷ್ಮ ವಿಷಯ ತೋರಿಸುವ ಸಿನಿಮಾ ಎಲ್ಲರೂ ಮಾಡಲು ಸಾಧ್ಯವಿಲ್ಲ. ಆದರೆ, ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮಾಡಿದ್ದಾರೆ ನಿಮಗೆ ಧನ್ಯವಾದ ಎಂದು ಹೇಳಿದ್ದಾರೆ, (ಏಜೆನ್ಸೀಸ್).