ಸಿನಿವಾಣಿ

ಮಗನ ಬರ್ತ್​ಡೇ ಸ್ಪೆಷಲ್: ಚಿರತೆ ದತ್ತು ಪಡೆದ ಬಿಗ್​ಬಾಸ್ ಮಾಜಿ ಸ್ಪರ್ಧಿ ಧನಂಜಯ್

ಬೆಂಗಳೂರು: ಬಿಗ್​ಬಾಸ್ ಸೀಸನ್ 8 ಬಹಳಷ್ಟು ಜನರಿಗೆ ನೆನಪಿರುತ್ತದೆ. ಕವಿತಾ, ಧನರಾಜ್, ಶಶಿಕುಮಾರ್ ಹೀಗೆ ಅನೇಕರು ಆ ಸೀಸನ್​ನಲ್ಲಿ ಜನರ ಮನಸ್ಸನ್ನು ಗೆದ್ದಿದ್ದರು. ಟ್ರೋಫಿ ಮಿಸ್ ಮಾಡಿಕೊಂಡಿದ್ದರೂ, ಜನರ ಮನಸ್ಸಿನಲ್ಲಿ ಒಳ್ಳೆಯ ಪ್ಲೇಸ್ ಅನ್ನೇ ಗೆದ್ದಿದ್ದ ಧನರಾಜ್ ಇದೀಗ ಮತ್ತೊಂದು ಉತ್ತಮ ಕಾರ್ಯದ ಮೂಲಕ ಜನರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಧನರಾಜ್ ದಂಪತಿಯ ಮಗ ಅಗಸ್ತ್ಯನಿಗೆ ಇಂದು ಒಂದು ವರ್ಷದ ಸಂಭ್ರಮ. ಅದೇ ಖುಷಿಯಲ್ಲಿ ಧನರಾಜ್ ದಂಪತಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಚಿರತೆಯೊಂದನ್ನ ದತ್ತು ಪಡೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಸ್ಫೂರ್ತಿ ಪಡೆದು ಈ ರೀತಿ ಚಿರತೆ ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾಗಿ ಅವರು ಹೇಳಿದ್ದಾರೆ.

ನಟ ದರ್ಶನ್ ಅವರು ಒಂದು ವಿಡಿಯೋ ಮೂಲಕ ಪ್ರಾಣಿಗಳ ದತ್ತು ಪಡೆಯುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದರ ಪ್ರೇರಣೆಯಿಂದಾಗಿ ನಾನು ನನ್ನ ಮಗನ ಹುಟ್ಟುಹಬ್ಬ ಹಾಗೂ ವಿಶ್ವ ಹುಲಿ ದಿನದ ಅಂಗವಾಗಿ ಬನ್ನೇರುಘಟ್ಟಕ್ಕೆ ಕುಟುಂಬಸಮೇತರಾಗಿ ಭೇಟಿಕೊಟ್ಟು ಚಿರತೆಯೊಂದನ್ನು ದತ್ತು ಪಡೆದಿದ್ದೇನೆ, ಹುಟ್ಟುಹಬ್ಬವನ್ನ ಪಾರ್ಟಿ ಮಾಡಿ ಏಂಜಾಯ್ ಮಾಡುತಾ ಹಣ ವ್ಯಯ ಮಾಡುವ ಬದಲು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಕೆಲಸವನ್ನು ಮಾಡಬೇಕು, ದರ್ಶನ್ ಅವರ ವಿಡಿಯೋ ನೋಡಿ ಸಾಕಷ್ಟು ಜನ ಪ್ರಾಣಿಗಳನ್ನು ಅಡಾಪ್ಟ್ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ನಾನೂ ಮಾಡಿದ್ದೇನೆ. ಇದೇ ರೀತಿ ಎಲ್ಲರೂ ಪ್ರಾಣಿ, ಪಕ್ಷಿಗಳ ದತ್ತು ಪಡೆಯುವ ಮಹತ್ಕಾರ್ಯಕ್ಕೆ ಕೈಜೋಡಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)