ಸಿನಿವಾಣಿ

ಬಾಲಿವುಡ್​ನತ್ತ ಸಮಂತಾ ಅಕ್ಕಿನೇನಿ

Webdesk - Ravikanth

‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್​ಸರಣಿಯ ಯಶಸ್ಸಿಗೆ ಕಾರಣರಾದವರಲ್ಲಿ ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಸಹ ಒಬ್ಬರು. ರಾಜಿ ಎಂಬ ಪಾತ್ರದಲ್ಲಿ ನಟಿಸಿದ ಸಮಂತಾ, ಇದೀಗ ಮೋಸ್ಟ್ ವಾಂಟೆಡ್ ನಟಿಯಾಗಿಬಿಟ್ಟಿದ್ದಾರೆ. ಅದರಲ್ಲೂ ಬಾಲಿವುಡ್ ಮಂದಿಯಂತೂ ಸಮಂತಾ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಪಾತ್ರಗಳನ್ನು ಬರೆಯುತ್ತಿದ್ದಾರಂತೆ. ಇದು ಸಮಂತಾಗೆ ಗೊತ್ತಿಲ್ಲದೇನಲ್ಲ. ಹಾಗಾಗಿ, ಅವರು ಸಹ ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾರೆ.

ಒಂದೊಳ್ಳೆಯ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡಲು ಮುಂದಾಗಿರುವ ಸಮಂತಾ, ಅದಕ್ಕಾಗಿ ಹಲವು ಕಥೆಗಳನ್ನು ಕೇಳುತ್ತಿದ್ದಾರಂತೆ. ಈ ಮಧ್ಯೆ ಸಮಂತಾ, ಮುಂಬೈನಲ್ಲೊಂದು ಮನೆ ಹುಡುಕುತ್ತಿದ್ದಾರಂತೆ. ಮುಂದೊಂದು ದಿನ ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಾಗ, ಪದೇಪದೆ ಹೈದರಾಬಾದ್​ನಿಂದ ಮುಂಬೈಗೆ ಪ್ರಯಾಣ ಮಾಡುವುದಕ್ಕಾಗುವುದಿಲ್ಲ, ಅಲ್ಲೇ ಇದ್ದರೆ ಅನುಕೂಲವಾಗುತ್ತದೆ ಎಂಬ ದೂರದೃಷ್ಟಿಯಿಂದ ಅವರು ಮುಂಬೈನಲ್ಲಿ ಮನೆ ಹುಡುಕಾಟದಲ್ಲಿದ್ದಾರಂತೆ.