ಕರೊನಾ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಹಾಗಾದರೆ ಆ ಮೆಂಟಲ್ ಹೆಲ್ತ್ ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಏನೆಲ್ಲ ಮಾಡಬೇಕು. ಕರೊನಾ ಹೊತ್ತಲ್ಲಿ ಮನಸ್ಸನ್ನು ಸದೃಢ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಹೇಳಲು ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಂ ಲೈವ್ ಬರಲಿದ್ದಾರೆ. ಕೇವಲ ಅವರಷ್ಟೇ ಅವರ ಜತೆ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆದ್ರೊಸ್ ಅಧಾನಮ್ ಗ್ಯಾಬ್ರಿಯಾಸಿಸ್ ಸಹ ಲೈವ್ನಲ್ಲಿರಲಿದ್ದಾರೆ. ಅಂದಹಾಗೆ ಆಫಿಶಿಯಲ್ ಇನ್ಸ್ಟಾಗ್ರಾಂನಲ್ಲಿ ಗುರುವಾರ ರಾತ್ರಿ 7.30ಕ್ಕೆ ಮಾನಸಿಕ ಆರೋಗ್ಯದ ಬಗ್ಗೆ ದೀಪಿಕಾ ಮಾತನಾಡಲಿದ್ದಾರೆ.
ಹಾಗಾದರೆ, ಡಬ್ಲೂಎಚ್ಒ ದೀಪಿಕಾ ಅವರನ್ನೇ ಆಯ್ದುಕೊಂಡಿದ್ದೇಕೆ? ಕೆಲ ವರ್ಷಗಳ ಹಿಂದೆ ದೀಪಿಕಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಡಿಪ್ರೆಷನ್ಗೆ ಒಳಗಾಗಿದ್ದರು. ಬಳಿಕ ಮಾನಸಿಕ ಆರೋಗ್ಯ ವೃದ್ಧಿಸಿಕೊಂಡು, ಡಿಪ್ರೆಷನ್ ನಿವಾರಣೆಗೆ ಎನ್ಜಿಒ ತೆರೆದಿದ್ದರು. ಆ ಕಾರಣಕ್ಕೆ ಡಬ್ಲೂಎಚ್ಒ ದೀಪಿಕಾ ಅವರನ್ನು ಈ ಕಾರ್ಯಕ್ಕೆ ಆಯ್ದುಕೊಂಡಿದೆ. (ಏಜೆನ್ಸೀಸ್)