ಸಿನಿವಾಣಿ

ಯುವ 2 ಶೂಟಿಂಗ್​ಗಾಗಿ, ಡಾಲಿ ಧನಂಜಯ್​​ 'ಉತ್ತರಕಾಂಡ' ಶೂಟಿಂಗ್ ನಿಲ್ಲಿಸಿದ್ಯಾಕೆ?! ಹೀಗ್ಯಾಕೆ ಮಾಡ್ತು ಕೆಆರ್​ಜಿ ಸ್ಟುಡಿಯೋ?!

ಡಾಲಿ ಧನಂಜಯ್, ಶಿವರಾಜ್‌ಕುಮಾರ್, ದಿಗಂತ್ ಸೇರಿದಂತೆ ದಿಗ್ಗಜರೇ ನಟಿಸುತ್ತಿರುವ ಉತ್ತರಕಾಂಡ ಸಿನಿಮಾದ ಮೇಲು ಪ್ರೇಕ್ಷಕರು ಬಹು ದೊಡ್ಡ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ಯಾವಾಗ ರಿಲೀಸ್​​ ಆಗಲಿದೆ ಎಂದು ಕಾದು ಕುಳಿತಿದ್ದಾರೆ. ಅಲ್ಲದೇ ಈ ಸಿನಿಮಾದದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖ ನಟರು ಮತ್ತಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಕೆಆರ್​ಜಿ ಸ್ಟುಡಿಯೋ ಈ ಸಿನಿಮಾಗೆ ಹಣ ಹೂಡಿಕೆಯನ್ನೂ ಮಾಡಿದೆ. ಆದ್ರೆ ಇದೀಗ ಉತ್ತರಕಾಂಡ ಸಿನಿಮಾ ಯಾಕೆ ಸದ್ದು ಮಾಡುತ್ತಿಲ್ಲವೆಂಬ ಪ್ರಶ್ನೆ ಮುಂದಾಗಿದೆ. ಅಲ್ಲದೇ ಈ ಪ್ರಶ್ನೆಗೆ ಸ್ಯಾಂಡಲ್​​ವುಡ್​​​​ ಕೊಟ್ಟ ಉತ್ತರ ಅಚ್ಚರಿ ಮೂಡಿಸಿದೆ.

'ಉತ್ತರಕಾಂಡ' ಸಿನಿಮಾ ಸೆಟ್ಟೇರಿ ಸಾಕಷ್ಟು ತಿಂಗಳೇ ಕಳೆದು ಹೋಗಿದೆ. ಸಿನಿಮಾದ ಕೆಲ ಸೀನ್​ಗಳ ಶೂಟಿಂಗ್​ ಸಹಿತ ಆಗಿ ಹೋಗಿದೆ. ಆದ್ರೆ ಈ ಮಧ್ಯೆ ಕೆಆರ್​​​ಜಿ ಸ್ಟುಡಿಯೋ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಉತ್ತರಕಾಂಡ ಸಿನಿಮಾಗೆ ಧನಂಜಯ್ ನಿರ್ಮಾಣ ಸಂಸ್ಥೆಯಿಂದ ಏನನ್ನೂ ಬಯಸಿರಲಿಲ್ಲ. ಸಿನಿಮಾದ ಕಥೆ ಇಷ್ಟ ಆಗಿದ್ದರಿಂದ ಡಾಲಿ ಒಪ್ಪಿಕೊಂಡಿದ್ದರು ಎನ್ನಲಾಗಿತ್ತು. ಈ ಬಗ್ಗೆ ಧನಂಜಯ್​​​ ಯಾವ ವಿಚಾರವನ್ನೂ ಮಾತನಾಡದೇ ಇದ್ದರೂ ಇಂಥಹದ್ದೊಂದು ಸುದ್ದಿ ಎಲ್ಲೆಡೆ ಹರಡಿತ್ತು.

ಆದ್ರೀಗ ಕೆಆರ್‌ಜಿ ಸ್ಟುಡಿಯೋ 'ಉತ್ತರಕಾಂಡ' ಸಿನಿಮಾ ಮೇಕಿಂಗ್ ಮೇಲೆ ಆಸಕ್ತಿ ಕಳೆದುಕೊಂಡಿದೆ ಅನ್ನೋ ವಿಷಯ ಓಡಾಡುತ್ತಿದೆ. ಇದರೊಂದಿಗೆ ಧನಂಜಯ್ ಹಾಗೂ ಕೆಆರ್‌ಜಿ ಸ್ಟುಡಿಯೋ ನಡುವೆ ಸಂಬಂಧ ಈಗ ಚೆನ್ನಾಗಿಲ್ಲ ಅಂತ ಹೇಳಾಗುತ್ತಿದೆ.

ಕೆಆರ್‌ಜಿ ಸ್ಟುಡಿಯೋ ಡಾಲಿ ಧನಂಜಯ್ ಸಿನಿಮಾ ಬಿಟ್ಟು ಯುವ ರಾಜ್‌ಕುಮಾರ್ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರಂತೆ. ಇನ್ನೇನು ಹೊಸ ಸಿನಿಮಾ ಶೀಘ್ರದಲ್ಲಿಯೇ ಅನೌನ್ಸ್ ಮಾಡುವುದಕ್ಕೆ ಮುಂದಾಗಿದೆ ಅನ್ನೋ ವಿಷಯ ಕೂಡ ಓಡಾಡುತ್ತಿದೆ. ಕೆಆರ್‌ಜಿ ಸ್ಟುಡಿಯೋ ಡಾಲಿ ಧನಂಜಯ್ ಸಿನಿಮಾ ಬಿಟ್ಟು ಯುವ ರಾಜ್‌ಕುಮಾರ್ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಹಾಗಿದ್ಮೇಲೆ ಯುವರಾಜ್‌ಕುಮಾರ್ ಸಿನಿಮಾ ಹೇಗೆ ಶುರುವಾಗುತ್ತಿದೆ? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಅದಕ್ಕೆ ದೊಡ್ಮೆನೆಯಿಂದ ಹಣ ಹೂಡಿಕೆ ಆಗುತ್ತಿದೆ ಅನ್ನೋ ಉತ್ತರ ಸಿಗುತ್ತಿದೆ.

ಕೆಆರ್‌ಜಿ ಸ್ಟುಡಿಯೋ ಆಗಲಿ, ಡಾಲಿ ಧನಂಜಯ್ ಆಗಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ. ಇಷ್ಟೆಲ್ಲ ವಿಷಯಗಳು ಗಾಂಧಿನಗರದ ನಿರ್ಮಾಪಕರ ವಲಯದಲ್ಲಂತೂ ಓಡಾಡುತ್ತಿದೆ.