ಸಿನಿವಾಣಿ

OTT ಬಿಡುಗಡೆ ನಂತರವೂ ಚಿತ್ರಮಂದಿರದಲ್ಲಿ 'ಬಡವ ರಾಸ್ಕಲ್' ಗೆ ಹೌಸ್ ಫುಲ್! 6ನೇ ವಾರದಲ್ಲೂ ಡಾಲಿ ಹವಾ...

ನಟ ರಾಕ್ಷಸ ಡಾಲಿ ಧನಂಜಯ್ ಅವರು ನಟಸಿ ಜೊತೆಗೆ ಮೊದಲ ಬಾರಿ ನಿರ್ಮಿಸಿದ ಸಿನಿಮಾ 'ಬಡವ ರಾಸ್ಕಲ್' ಡಿ. 24ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ 'ಬಡವ ರಾಸ್ಕಲ್' ಯಶಸ್ವಿಯಾಗಿದೆ. ನಿರ್ದೇಶಕ ಶಂಕರ್ ಗುರು ಅವರು ಒಂದೊಳ್ಳೆ ಮದ್ಯಮ ವರ್ಗ ಕುಟುಂಬದ ಸಂಕಷ್ಟಗಳನ್ನು ಕುರಿತ ಈ ಸಿನಿಮಾವನ್ನು ತುಂಬಾ ಚೆನ್ನಾಗಿ ತೆಗೆದಿದ್ದಾರೆ ಎನ್ನಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಬಹುತೇಕ ಎಲ್ಲಾ ಕನ್ನಡ ಸಿನಿಮಾಗಳಿಗಿಂತ ಈ ಸಿನಿಮಾ ಉತ್ತಮ ಎನಿಸಿಕೊಂಡಿದ್ದು, ಕಲೆಕ್ಷನ್ ವಿಚಾರದಲ್ಲೂ 'ಬಡವ ರಾಸ್ಕಲ್' ಸೈ ಎನಿಸಿಕೊಂಡಿರುವುದು ಗಮನಾರ್ಹ.
ಆದರೆ, ಸದ್ಯ ಈ ಸಿನಿಮಾ ಮತ್ತೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಇತ್ತೀಚೆಗೆ, ಯಾವುದೇ ಸಿನಿಮಾ ಅಥವಾ ಎಂತಹ ಒಳ್ಳೆಯ ಸಿನಿಮಾವಾದರೂ ಮಿನಿಮಮ್ 10 ದಿನ ಹೌಸ್​ಫುಲ್ ಆಗುತ್ತೆ. ನಂತರ, ಆ ಸಿನಿಮಾಗಳು OTT ವೇದಿಕೆಯಲ್ಲಿ ಬಿಡುಗಡೆಯಾದರೆ ಆಗ ಚಿತ್ರಮಂದಿರಗಳಿಗೆ ಬಂದು ಜನ ಸಿನಿಮಾ ನೋಡುವುದು ಬಹಳಷ್ಟು ವಿರಳ. ಆದರೆ, 'ಬಡವ ರಾಸ್ಕಲ್' ಚಿತ್ರ VOOT ವೇದಿಕೆಯಲ್ಲಿ ರಿಲೀಸ್ ಆದ ನಂತರವೂ ಚಿತ್ರಮಂದರಿಗಳಲ್ಲಿ ಹೌಸ್​ಫುಲ್ ಬೋರ್ಡ್ ಗಿಟ್ಟಿಸಿಕೊಂಡಿದೆ.
ಹೌದು, ಕರೊನಾದ ನಡುವೆಯೂ, ಚಿತ್ರಮಂದಿರಗಳ ಮೇಲಿನ ನಿಯಮಗಳ ನಡುವೆಯೂ ಸಿನಿಪ್ರೇಕ್ಷಕರು ಮತ್ತು ಕರುನಾಡ ಜನತೆ ಈ ಸಿನಿಮಾವನ್ನು ಆಧರಿಸಿದ್ದಾರೆ. ಸಿನಿಮಾಗೆ 6ನೇ ವಾರದಲ್ಲೂ ಹಲವು ಕಡೆ ಹೌಸ್​ಫುಲ್ ಬೋರ್ಡ್ ಹಾಕಿರುವ ವಿಷಯವನ್ನು ಸ್ವತಃ ಡಾಲಿ ಅವರೇ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ನಟನ ಈ ಪೋಸ್ಟ್​ಗೆ ಸಾವಿರ ಸಾವಿರ ಲೈಕ್ಸ್​ಗಳ ಸುರಿ ಮೆಳೆಯೆ ಸುರಿದಿದೆ. 'ಬಡವ ರಾಸ್ಕಲ್'ನ ಯಶಸ್ಸು ಎಂಜಾಯ್ ಮಾಡುತ್ತಿರುವ ಡಾಲಿ ಹಲವು ಕಡೆ ಪ್ರವಾಸ ಮಾಡಿ ಪ್ರೇಕ್ಷಕ ದೇವರುಗಳಿಗೆ ಧನ್ಯವಾದಗಳನ್ನು ಹೇಳುತ್ತಿರುವುದು ವಿಶೇಷ.