ಸಿನಿವಾಣಿ

ನೇತ್ರಾಣಿಯಲ್ಲಿ ಸ್ನೇಹಿತರ ಜೊತೆ ಡಾಲಿ ಸ್ಕೂಬಾ ಡೈವಿಂಗ್ |Daali Dhananjay Scuba dive

ನಟ ಡಾಲಿ ಧನಂಜಯ್​ ಡಾಕ್ಟರ್​ ಮತ್ತು ಧನ್ಯತಾ ಮದುವೆಯ ದಿನಾಂಕ ಹತ್ತಿರವಾಗುತ್ತಿದೆ. ಸಿನಿಮಾ ಕೆಲಸದಲ್ಲಿ ಬ್ರೇಕ್ ಸಿಕ್ಕ ಬೆನ್ನಲ್ಲೇ ಡಾಲಿ ಧನಂಜಯ್​ ಸ್ನೇಹಿತರ ಜತೆಗೆ ಟ್ರಿಪ್​ ಹೋಗಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು 45 ನಿಮಿಷಗಳ ಕಾಲ ಡಾಲಿ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಡಾಲಿ ಟ್ರಿಪ್‌ಗೆ ಮೈಸೂರಿನ ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ. ಮುರುಡೇಶ್ವರದಿಂದ 10 ಕಿ.ಮೀ ದೂರವಿರುವ ನೇತ್ರಾಣಿ ದ್ವೀಪಕ್ಕೆ ಡಾಲಿ ಭೇಟಿ ನೀಡಿದ್ದಾರೆ.

ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಹಾಗೂ ಧನ್ಯತಾ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಮದುವೆ ಸಿದ್ಧತೆ ಶುರುವಾಗಿದೆ. ದೀಪಾವಳಿ ಸಂಭ್ರಮದಲ್ಲಿ ನಟ ಧನಂಜಯ್ ತಮ್ಮ ಪ್ರೀತಿ ಹಾಗೂ ಮದುವೆ ಸಂಗತಿ ಬಿಚ್ಚಿಟ್ಟಿದ್ದರು.

ಕಲರ್‌ಫುಲ್ ಫೋಟೊಶೂಟ್ ನಡೆಸಿ ತಮ್ಮ ಭಾವಿ ಪತ್ನಿಯನ್ನು ಪರಿಚಯಿಸಿದ್ದರು. ಆಗ ಮದುವೆ ಮಾತುಕತೆ ನಡೆದಿತ್ತು. ನಿಶ್ಚಿತಾರ್ಥವೂ ನೆರವೇರಿದೆ.