ಸಿನಿವಾಣಿ

ಕಾಮಿಡಿ ಕಿಲಾಡಿಗಳು ಮತ್ತೆ ಬರ್ತಿದ್ದಾರೆ

lakshmihegde

ಬೆಂಗಳೂರು: ಜೀ ಕನ್ನಡ ವಾಹಿನಿಯು ಕಾಮಿಡಿ ಕಿಲಾಡಿಗಳು ಕಲಾವಿದರ ಮೂಲಕ ಕಳೆದ ಬಾರಿಗಿಂತ ಮತ್ತಷ್ಟು ವಿನೂತನ ಪ್ರಯೋಗಗಳ ಜತೆ ‘ಕಾಮಿಡಿ ಕಿಲಾಡಿಗಳು ಚಾಂಪಿಯನ್​ಶಿಪ್’ ಕಾರ್ಯಕ್ರಮವನ್ನು ಮತ್ತೆ ಅದ್ಧೂರಿಯಾಗಿ ನಿಮ್ಮ ಮುಂದೆ ತರುತ್ತಿದೆ. ಕಾಮಿಡಿ ಕಿಲಾಡಿಗಳು ಸೀಸನ್ 1 ಮತ್ತು ಸೀಸನ್ 2ರ ಕಿಲಾಡಿಗಳ ಜತೆ ಸೀಸನ್ 3ರರ ಕಿಲಾಡಿಗಳು ಈ ಸಲದ ಕಾರ್ಯಕ್ರಮದಲ್ಲಿ ಸೇರ್ಪಡೆಗೊಂಡಿದ್ದಾರೆ. 36 ಜನ ಕಲಾವಿದರು, 6 ತಂಡಗಳಾಗಿ ಫೀಲ್ಡ್​ಗೆ ಇಳಿದು ಭರ್ಜರಿಯಾಗಿ ಬ್ಯಾಟಿಂಗ್ ಮಾಡಿ ನಗುವಿನ ಬೌಂಡರಿ, ಸಿಕ್ಸರ್​ಗಳನ್ನು ಬಾರಿಸಲಿದ್ದಾರೆ.

ಶಿವರಾಜ್ ಕೆ.ಆರ್. ಪೇಟೆ, ಗೋವಿಂದೇಗೌಡ, ನಯನ, ಮಡೇನೂರು ಮನು, ಅಪ್ಪಣ್ಣ ಹಾಗೂ ಸೂರಜ್ ತಂಡದ ಕ್ಯಾಪ್ಟನ್​ಗಳಾಗಿ ಕಾಣಿಸಲಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಮುಕುಟಗಳಾದ ನವರಸ ನಾಯಕ ಜಗ್ಗೇಶ್, ಕ್ರೇಜಿಕ್ವೀನ್ ರಕ್ಷಿತಾ ಹಾಗೂ ನಿರ್ದೇಶಕ ವಿಕಟಕವಿ ಯೋಗರಾಜ್ ಭಟ್ ಈ ಬಾರಿಯೂ ಚಾಂಪಿಯನ್​ಶಿಪ್​ನ ತೀರ್ಪಗಾರರಾಗಿ ಹಾಗೂ ತಲಾ ಎರಡು ತಂಡಗಳ ಮಾಲೀಕರಾಗಿ ಹುರಿದುಂಬಿಸಲಿದ್ದಾರೆ. ಮಾಸ್ಟರ್ ಆನಂದ್ ಕಾರ್ಯಕ್ರಮದ ಸಾರಥಿಯಾಗಿ ನಿರೂಪಣೆ ಮಾಡಲಿದ್ದಾರೆ. ಈ ನಗುವಿನ ಮಳೆ ಸುರಿಸುವ ಕಾರ್ಯಕ್ರಮ ಶನಿವಾರ (ಸೆ. 12) ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಶನಿವಾರ ರಾತ್ರಿ 7.30ರಿಂದ 10.30ರ ವರೆಗೆ ಸರಿಗಮಪ ಸೀಸನ್ 17 ಹಾಗೂ ಕಾಮಿಡಿ ಕಿಲಾಡಿಗಳು ಚಾಂಪಿಯನ್​ಶಿಪ್ ಮೂಲಕ ಬರುತ್ತಿದ್ದಾರೆ.