Dalapathy Vijay (ಚಿತ್ರ Instagram)
- ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಜನ ನಾಯಗನ್ ಸೋರಿಕೆ
- ಪೂರ್ಣಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ವಿಜಯ್ ನಟನೆಯ ಕೊನೆಯ ಚಿತ್ರ
- ಈ ಸೋರಿಕೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ನಟ ಸಿಬಿ ಸತ್ಯರಾಜ್
Dalapathy Vijay: ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜನ ನಾಯಗನ್, ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಇದೀಗ ತಮಿಳು ಚಿತ್ರರಂಗ ಮತ್ತು ವಿಜಯ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದಾಗ್ಯೂ, ಪೂರ್ಣಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ವಿಜಯ್ ನಟನೆಯ ಕೊನೆಯ ಚಿತ್ರ ಎನ್ನಲಾದ ಈ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂಬ ವರದಿಗಳು ಅಭಿಮಾನಿಗಳಿಗೆ ಶಾಕ್ ನೀಡಿವೆ.
ಚಿತ್ರದ ಸೋರಿಕೆ ಬೆಳಕಿಗೆ ಬರುವ ಮೊದಲೇ, ಶೀರ್ಷಿಕೆ ಕ್ರೆಡಿಟ್‌ಗಳು, ಪರಿಚಯಾತ್ಮಕ ದೃಶ್ಯ ಮತ್ತು ಕ್ಲೈಮ್ಯಾಕ್ಸ್ ಸೇರಿದಂತೆ ಕೆಲವೊಂದು ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಈ ಸುದ್ಧಿ ಸದ್ಯ ಅಭಿಮಾನಿಗಳಲ್ಲಿ ಕಳವಳ ಹುಟ್ಟುಹಾಕಿದೆ. ಆದಾಗ್ಯೂ, ಸೋರಿಕೆಯ ಬಗ್ಗೆ ನಿರ್ಮಾಪಕರಿಂದ ಯಾವುದೇ ಅಧೀಕೃತ ಮಾಹಿತಿ ಬಂದಿಲ್ಲ.
ಸಿಡಿದೆದ್ದ ನಟ ಸಿಬಿ ಸತ್ಯರಾಜ್!
ನಟ ಸಿಬಿ ಸತ್ಯರಾಜ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಸೋರಿಕೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸಿನಿಮಾ ಎನ್ನುವುದು ಕೇವಲ ಮನರಂಜನೆಯಲ್ಲ, ಅದು ನೂರಾರು ಜನರ ಕಠಿಣ ಪರಿಶ್ರಮ. ಹಾಗೆಯೇ ಒಂದು ಚಿತ್ರವನ್ನು ನಿರ್ಮಿಸಲು ಎಷ್ಟು ಶ್ರಮ ಮತ್ತು ಹಣ ಬೇಕಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ದಯವಿಟ್ಟು ಪೈರಸಿಯನ್ನು ಪ್ರೋತ್ಸಾಹಿಸಬೇಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಸೋರಿಕೆ ಆರೋಪಕ್ಕೆ ಅಭಿಮಾನಿಗಳ ಪ್ರತಿಕ್ರಿಯೆ..
ಜನ ನಾಯಗನ್ ಸಿನಿಮಾ ಸೋರಿಕೆಯಾಗಿದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ವಿಜಯ್ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಹಣ, ಸಮಯ ಮತ್ತು ಶ್ರಮವನ್ನು ಹೂಡಿಕೆ ಮಾಡಿದ ನಿರ್ಮಾಪಕರ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಒಬ್ಬ ಬಳಕೆದಾರರು ಈ ರೀತಿ ಸೋರಿಕೆಯಾಗುವುದನ್ನು ನೋಡಿ ತುಂಬಾ ಬೇಸರವಾಗಿದೆ. ಇದು ನಿಜಕ್ಕೂ ಪಿತೂರಿಯ ಭಾಗವೆಂದು ಅನಿಸುತ್ತದೆ. ಚಲನಚಿತ್ರವನ್ನು ನಿರ್ಮಿಸಲು ತುಂಬಾ ಉತ್ಸಾಹ, ಸಮಯ ಮತ್ತು ನಿರಂತರ ಕಠಿಣ ಪರಿಶ್ರಮ ಬೇಕಾಗುತ್ತದೆ. ಆದರೆ, ಈ ರೀತಿ ಸಿನಿಮಾ ಸೋರಿಕೆಯಾದರೆ, ನಿರ್ಮಾಪಕರಿಗೆ ತುಂಬಾ ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).