CM Vijay, Trisha attend Ajith Kumar's Le Mans Cup Race at Silverstone. Watch 
ಕಾಲಿವುಡ್

ಇಂಗ್ಲೆಂಡ್​ನಲ್ಲಿ ನಡೆದ Le Mans Cup Raceನಲ್ಲಿ ಅಜಿತ್ ಭಾಗಿ; ನಟನಿಗೆ ಜೊತೆಯಾಗಿ ಚಿಯರ್ ಮಾಡಿದ ಸಿಎಂ ವಿಜಯ್-ತ್ರಿಷಾ, ವಿಡಿಯೋ ವೈರಲ್

CM Vijay, Trisha attend Ajith Kumar's Le Mans Cup Race at Silverstone :ಮತ್ತೆ ತಮಿಳುನಾಡಿನ ಸಿಎಂ ಸಿ ಜೋಸೆಫ್​ ವಿಜಯ್ ಅವರು ನಟಿ ತ್ರಿಷಾ  ಒಟ್ಟಾಗಿ ಕಾಣಿಸಿಕೊಂಡ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇಂಗ್ಲೆಂಡ್​ನ ಸಿಲ್ವರ್​ ಸ್ಟೋನ್​ನಲ್ಲಿ ನಡೆದ ಮೈಕೆಲಿನ್ ಲೇ ಮನ್ಸ್ ಕಪ್ ರೇಸ್‌ನಲ್ಲಿ ಭಾಗಿಯಾಗಿದ್ದ ನಟ ಅಜಿತ್​ ಅವರಿಗೆ ಒಟ್ಟಾಗಿ ಚಿಯರ್​ ಅಪ್ ಮಾಡಿದ ದೃಶ್ಯಗಳು ಸಾಕಷ್ಟು ವೈರಲ್​ ಆಗಿದೆ. 
ಶನಿವಾರ ಸಿಲ್ವರ್‌ಸ್ಟೋನ್‌ಗೆ ಆಗಮಿಸಿದ ತ್ರಿಶಾ ಜೀನ್ಸ್, ಟಿ-ಶರ್ಟ್ ಮತ್ತು ಮರೂನ್ ಬಣ್ಣದ ಜಾಕೆಟ್ ಧರಿಸಿ ರೇಸಿಂಗ್ ಸರ್ಕ್ಯೂಟ್‌ನ ಟೆಂಟ್‌ಗೆ ಪ್ರವೇಶಿಸುತ್ತಿರುವ  ವಿಡಿಯೋಗಳು ಇದೆ.  ಮತ್ತೊಂದರಲ್ಲಿ ವಿಜಯ್​​ ಅವರು ರೇಸ್​ ನೋಡುವ ಸ್ಥಳದಲ್ಲೇ ತ್ರಿಷಾ ಅವರು ನಿಂತಿರುವ ದೃಶ್ಯಗಳು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.  ಈ ವಿಡಿಯೋಗಳಿಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು, ನಾನು ಸಿಎಂ ವಿಜಯ್​ ಅವರನ್ನು ದ್ವೇಷಿಸುತ್ತೇನೆ  ಎಂದು ಹೇಳುತ್ತಿದ್ದಾರೆ.

ಅಜಿತ್​ರನ್ನು ಅಪ್ಪಿದ ವಿಜಯ್​

 ರೇಸಿಂಗ್ ಸ್ಥಳಕ್ಕೆ ಧಾವಿಸಿ ಬಂದ ವಿಜಯ್, ಅಜಿತ್ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡ ವಿಡಿಯೋ ಎಲ್ಲೆಡೆ ಹಂಚಿಕೆಯಾಗಿದೆ.  ರೇಸಿಂಗ್ ಸರ್ಕ್ಯೂಟ್‌ಗೆ ತಲುಪುವ ಮೊದಲು, ತ್ರಿಶಾ ಲಂಡನ್‌ನಲ್ಲಿ ಹಿರಿಯ ನಟಿ ರಾಧಿಕಾ ಶರತ್ಕುಮಾರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ರಾಧಿಕಾ ಅವರು ತ್ರಿಶಾ ಜೊತೆಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಕೂಡ ವೈರಲ್ ಆಗಿತ್ತು. ಅಜಿತ್ ಅವರ ರೇಸ್‌ಗಾಗಿ ರಾಧಿಕಾ ಕೂಡ ಲಂಡನ್‌ನಲ್ಲಿದ್ದಾರೆ. 

ವಿಜಯ್​​ರ ಪ್ರಮುಖ ಕಾರ್ಯಕ್ರಮದಲ್ಲಿ ತ್ರಿಷಾ ಭಾಗಿ

ವಿಜಯ್​ ಅವರು ಮೊದಲನೇ ಬಾರಿ ಚುನಾವಣೆಗೆ ಸ್ಪರ್ಧಿಸಿ,  ಗೆದ್ದು ಸಿಎಂ  ಪಟ್ಟಕ್ಕೇರಿದರು. ಚೆನ್ನೈನಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮಕ್ಕೆ ನಟಿ ತ್ರಿಷಾ ಅವರು ಬಂದ ಪರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿತ್ತು. ಅದಲ್ಲದೇ ಅಲ್ಲಿ ವಿಜಯ್​ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಹಾಗೂ ಇಬ್ಬರ ಮಕ್ಕಳ ಅನುಪಸ್ಥಿತಿ ಸಾಕಷ್ಟು ಟ್ರೋಲ್​​​ಗೊಳಗಾಗುವಂತೆ ಮಾಡಿತ್ತು. ಆಗಸ್ಟ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲೂ ಸಿಎಂ ಅವರ ಪೋಷಕರೊಂದಿಗೆ ತ್ರಿಷಾ ಉಪಸ್ಥಿತರಿದ್ದರು. 

ಡಿವೋರ್ಸ್​ ಅರ್ಜಿ ನಂತ್ರ ಹೆಚ್ಚಾದ ಡೇಟಿಂಗ್​ ವದಂತಿ

ವಿಜಯ್​ ಮತ್ತು ತ್ರಿಷಾ ಅವರು  ಜೋಡಿಯಾಗಿ ನಟಿಸಿ ಕಾಲವುಡ್​​ಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಧಾರಣಿ ನಿರ್ದೇಶನದ 2004ರ ಬ್ಲಾಕ್‌ಬಸ್ಟರ್ ಚಿತ್ರ 'ಗಿಲ್ಲಿ'ಯಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ವಿಜಯ್ ಮತ್ತು ತ್ರಿಶಾ, ನಂತರ 'ತಿರುಪಾಚಿ', 'ಆಧಿ', 'ಕುರುವಿ' ಮತ್ತು 'ಲಿಯೋ' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ ತಮಿಳು ಸಿನಿಮಾದ ಜನಪ್ರಿಯ ಜೋಡಿಯೆನಿಸಿಕೊಂಡರು. 
ಮಾರ್ಚ್ 2026 ರಲ್ಲಿ, ಚೆನ್ನೈನಲ್ಲಿ ನಡೆದ ನಿರ್ಮಾಪಕ ಕಲ್ಪತಿ ಎಸ್ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಗೆ ವಿಜಯ್ ಮತ್ತು ತ್ರಿಶಾ ಒಟ್ಟಿಗೆ ಬಂದರು. ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ಒಟ್ಟಾಗಿ ಕಾಣಿಸಿಕೊಳ್ಳುವ ಪರಿ ಹೆಚ್ಚಾಯ್ತು ಎನ್ನಲಾಗಿದೆ, (ಏಜೆನ್ಸೀಸ್).