ಇದು ನಡೆಯುತ್ತಿರುವುದು ಮೂರನೇ ಬಾರಿ... ನಿಜಕ್ಕೂ ಅಸಹ್ಯಕರ ಎಂದು ಆಕ್ರೋಶ ಹೊರಹಾಕಿದ ನಟಿ ತ್ರಿಷಾ! Actress Trisha  
ಕಾಲಿವುಡ್

ಇದು ನಡೆಯುತ್ತಿರುವುದು ಮೂರನೇ ಬಾರಿ... ನಿಜಕ್ಕೂ ಅಸಹ್ಯಕರ ಎಂದು ಆಕ್ರೋಶ ಹೊರಹಾಕಿದ ನಟಿ ತ್ರಿಷಾ! Actress Trisha

ಪ್ರಮುಖ ಮುಖ್ಯಾಂಶಗಳು

  • ಸಿದ್ಧ ಫ್ಯಾಷನ್ ಬ್ರ್ಯಾಂಡ್ 'ಝಾರಾ' ವಿರುದ್ಧ ನಟಿ ತ್ರಿಷಾ ಕೃಷ್ಣನ್ ತೀವ್ರ ಆಕ್ರೋಶ
  • ಪ್ಯಾಕ್ ಮಾಡುವ ಮುನ್ನ ಒಮ್ಮೆ ವಾಸನೆ ನೋಡಿ ಎಂದ ಕಾಲಿವುಡ್​ ಬ್ಯೂಟಿ
  • ಬಳಸಿದ ಬಟ್ಟೆಗಳನ್ನು ಮರುಮಾರಾಟ ಮಾಡುತ್ತಿದೆಯೇ 'ಝಾರಾ'? ನೆಟ್ಟಿಗರ ಆಕ್ರೋಶ
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ( Actress Trisha ) ಅವರು ಪ್ರಸಿದ್ಧ ಫ್ಯಾಷನ್ ರಿಟೇಲರ್ ಬ್ರ್ಯಾಂಡ್ 'ಝಾರಾ' ವಿರುದ್ಧ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ತಾವು ಸತತವಾಗಿ ಮೂರು ಬಾರಿ ಆರ್ಡರ್ ಮಾಡಿ ತರಿಸಿಕೊಂಡ ಬಟ್ಟೆಗಳು ತೀವ್ರವಾದ ದೈಹಿಕ ದುರ್ವಾಸನೆ ಹೊಂದಿದ್ದವು ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಆದರೆ, ನಟಿ ತ್ರಿಶಾ ಅವರು ಯಾವ ನಿರ್ದಿಷ್ಟ ಬಟ್ಟೆಗಳನ್ನು ಆರ್ಡರ್ ಮಾಡಿದ್ದರು ಎಂಬ ವಿವರಗಳನ್ನು ಮಾತ್ರ ತಮ್ಮ ಪೋಸ್ಟ್‌ನಲ್ಲಿ ಎಲ್ಲೂ ಉಲ್ಲೇಖಿಸಿಲ್ಲ.
ಡಿಯರ್ @zara, @zaracare, ನನದೊಂದು ಸಣ್ಣ ವಿನಂತಿ. ಮುಂದಿನ ಬಾರಿ ನೀವು ಮನೆಗೆ ಬಟ್ಟೆಗಳನ್ನು ಡೆಲಿವರಿ ಮಾಡುವಾಗ, ದಯವಿಟ್ಟು ಆ ಬಟ್ಟೆಗಳಲ್ಲಿ ಸ್ವಲ್ಪವೂ ದೈಹಿಕ ದುರ್ವಾಸನೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ. ನನಗೆ ಸತತವಾಗಿ ಮೂರನೇ ಬಾರಿಗೆ ಈ ರೀತಿ ಆಗುತ್ತಿದೆ. ಇದು ನಿಜಕ್ಕೂ ಅತ್ಯಂತ ಅಸಹ್ಯಕರವಾಗಿದೆ. ಕನಿಷ್ಠ ಪ್ಯಾಕ್ ಮಾಡುವ ಮುನ್ನವಾದರೂ ಒಮ್ಮೆ ವಾಸನೆ ನೋಡಿ ಎಂದು ನಟಿ ತ್ರಿಷಾ ಕೃಷ್ಣನ್ ಬರೆದುಕೊಂಡಿದ್ದಾರೆ.
ನಟಿ ತ್ರಿಷಾ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಹತ್ತಾರು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಯಾರೋ ಧರಿಸಿ ಮರಳಿಸಿದ ಬಟ್ಟೆಗಳನ್ನು ಈ ಬ್ರ್ಯಾಂಡ್ ಮರುಮಾರಾಟ ಮಾಡುತ್ತಿರಬಹುದು ಎಂಬ ಅನುಮಾನಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ, ನಟಿಯ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸದರಿ ಫ್ಯಾಷನ್ ಬ್ರ್ಯಾಂಡ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.
ಅಂದಹಾಗೆ, ದಕ್ಷಿಣ ಭಾರತದ ಖಾತ ನಟಿಯಾಗಿರುವ ತ್ರಿಷಾ ಕೃಷ್ಣನ್ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳ ಯಶಸ್ಸು ಹಾಗೂ ಕೆಲವು ಸದ್ದು ಮಾಡಿದ ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿದ್ದಾರೆ. ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಅವರು ಮಣಿರತ್ನಂ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಸರಣಿಯಲ್ಲಿ ಕುಂದವೈ ಪಾತ್ರದ ಮೂಲಕ ಜಾಗತಿಕವಾಗಿ ಗಮನ ಸೆಳೆದರು. ತದನಂತರ ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ 'ಲಿಯೋ' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡರು. ಅಜಿತ್ ಕುಮಾರ್ ಅವರ 'ವಿಡಾ ಮುಯರ್ಚಿ' ಹಾಗೂ ಕಮಲ್ ಹಾಸನ್ ಅವರ 'ಥಗ್ ಲೈಫ್' ನಂತಹ ಬಿಗ್​ ಬಜೆಟ್ ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ತೆರೆಕಂಡ ಸೂರ್ಯ ನಟನೆಯ ಕರುಪ್ಪು ಸಿನಿಮಾ ತ್ರಿಷಾ ಅವರು ಮತ್ತೊಂದು ಯಶಸ್ಸನ್ನು ತಂದುಕೊಟ್ಟಿತು.
ಸಿನಿಮಾಗಳಷ್ಟೇ ಅಲ್ಲದೆ ಇತ್ತೀಚೆಗೆ ತ್ರಿಷಾ ಅವರ ಹೆಸರು ಕೆಲವು ವಿವಾದಗಳಲ್ಲೂ ಕೇಳಿಬಂದಿದೆ. ನಟ ಹಾಗೂ ತಮಿಳುನಾಡು ಸಿಎಂ ವಿಜಯ್​ ಅವರೊಂದಿಗೆ ತ್ರಿಷಾ ಅವರಿಗೆ ಸಂಬಂಧವಿದೆ ಎಂಬ ಆರೋಪ ಕೇಳಿಬಂದಿತು. ಅಲ್ಲದೆ, ವಿಜಯ್​ ವಿರುದ್ಧ ಅವರ ಪತ್ನಿ ಸಂಗೀತಾ ಅವರು ಡಿವೋರ್ಸ್​ ಕೋರಿ ಕೋರ್ಟ್​ ಮೆಟ್ಟಿಲೇರಿದ್ದಾರೆ ಎಂಬ ಸುದ್ದಿಯು ಕೂಡ ಹೊರಬಿದ್ದಿತು. ಅದಕ್ಕೆ ಕಾರಣ ತ್ರಿಷಾ ಎಂದು ಸಂಗೀತಾ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಈ ವಿವಾದದ ನಡುವೆ ತ್ರಿಷಾ ಅವರು ವಿಜಯ್​ ಜೊತೆ ಕಾಣಿಸಿಕೊಳ್ಳುವ ಮೂಲಕ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದರು. ಹೀಗೆ ತ್ರಿಷಾ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ, (ಏಜೆನ್ಸೀಸ್​).