ಕಾವ್ಯಾ ಮಾರನ್-ಅನಿರುದ್ಧ್ ರವಿಚಂದರ್ ಮದುವೆ ಫಿಕ್ಸ್?
- ಕಾವ್ಯಾ ಮಾರನ್-ಅನಿರುದ್ಧ್ ರವಿಚಂದರ್ ಮದುವೆ ಫಿಕ್ಸ್?
- ಸನ್‌ರೈಸರ್ಸ್ ಹೈದರಾಬಾದ್ (SRH) ಮಾಲೀಕರ ಮಗಳು ಕಾವ್ಯಾ ಮಾರನ್
- ಖ್ಯಾತ ತಮಿಳು ಗಾಯಕ ಅನಿರುದ್ಧ್ ರವಿಚಂದರ್
ಚೆನ್ನೈ: ಕೂಲಿ, ಜನನಾಯಗನ್, ಜೈಲರ್ ಮೊದಲಾದ ಸಿನಿಮಾಗಳಲ್ಲಿ ತನ್ನ ಹಿನ್ನಲೆ ಗಾಯನದ ಮೂಲಕ ಜನರ ಹೃದಯವನ್ನು ಗೆದ್ದಿರುವ ಗಾಯಕನೆಂದರೆ ಅದು ಅನಿರುದ್ಧ್ ರವಿಚಂದರ್.
ಈಗ ಈ ಅನಿರುದ್ಧ್ ರವಿಚಂದರ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕನ ಮಗಳಾದ ಕಾವ್ಯಾ ಮಾರನ್ಳನ್ನು ಮದುವೆ (Kavya Maran Anirudh Ravichander Marriage) ಆಗುತ್ತಾರೆಂಬ ವದಂತಿ ಎಲ್ಲೆಡೆ ಹಬ್ಬಿದ್ದು, ಇದಕ್ಕೆ ಗಾಯಕನ ಮಾವವ ಹೇಳಿಕೆ ಇನ್ನಷ್ಟು ಪುಷ್ಟಿ ನೀಡಿದೆ.
ಅವರಿಬ್ಬರ ಜೋಡಿ ಸೂಪರ್!
ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅನಿರುದ್ಧ್ ರವಿಚಂದರ್ ಬಗ್ಗೆ ಮಾತನಾಡಿರುವ ಅವರ ಮಾವ ವಾಯ್.ಜಿ. ಮಹೇಂದ್ರನ್ ನನ್ನ ಸೋದರಳಿಯ ತುಂಬಾ ಮೃದು ಸ್ವಭಾವದವನು. ಅವನು ಇನ್ನು ಕೆಲ ಸಮಯದಲ್ಲಿ ಮದುವೆಯಾಗಲಿದ್ದಾನೆ ಎಂದಿದ್ದಾನೆ.
ನನಗೆ ದೊರೆತಿರುವ ಮಾಹಿತಿ ಪ್ರಕಾರ ಅವನು, ಮದುವೆ ಆಗುವುದು ಬಹುತೇಕ ಖಚಿತವಾಗಿದೆ. ಆದರೆ ಯಾವಾಗ? ಎಲ್ಲಿ ಎಂದು ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಕಾವ್ಯಾ ಮಾರನ್ ಏನು ಸಾಮಾನ್ಯ ಹುಡುಗಿಯಲ್ಲ. ಅವಳು ಒಬ್ಬ ಯಶಸ್ವಿ ಉದ್ಯಮಿ ಮಗಳು ಹಾಗೂ ಆಕೆ ಕೂಡ ಉತ್ತಮ ನಾಯಕತ್ವ ಹೊಂದಿದ್ದಳೆ. ಅವಳು ಮತ್ತು ಅನಿರುದ್ಧ್ ಇಬ್ಬರಿಗೂ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಅನುಭವ ಹಾಗೂ ಆಸಕ್ತಿ ಇರುವ ಕಾರಣ ಇಬ್ಬರು ಉತ್ತಮ ಜೋಡಿ ಆಗಲಿದ್ದಾರೆ ಎಂದಿದ್ದಾರೆ.
ಮೌನ ಮುರಿಯದ ಅನಿರುದ್ಧ್, ಕಾವ್ಯಾ!
ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ಮದುವೆಯಾಗಲಿದ್ದಾರೆ ಎಂದು ಕಳೆದ ಕೆಲ ವರ್ಷಗಳಿಂದ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅನಿರುದ್ಧ್ ಆಗಲೀ ಅಥವಾ ಕಾವ್ಯಾ ಆಗಲೀ ಇಲ್ಲಿವರೆಗೆ ಅಧಿಕೃತ ಹೇಳಿಕೆಯನ್ನು ಎಲ್ಲಿ ಸಹ ನೀಡಿಲ್ಲ. ಈಗ ಅನಿರುದ್ಧ್ ಮಾವ ನೀಡಿರುವ ಹೇಳಿಕೆ ಈ ವದಂತಿಗೆ ಇನ್ನಷ್ಟು ರೆಕ್ಕೆ-ಪುಕ್ಕ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ, (ಏಜನ್ಸೀಸ್).