ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತಾ
- ದಳಪತಿ ವಿಜಯ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ
- ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್ ನಟ ವಿಜಯ್ ದಾಂಪತ್ಯದಲ್ಲಿ ಬಿರುಕು
- ವಿಜಯ್ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ
- ಅರ್ಜಿಯಲ್ಲಿ ಹೇಳಿರುವ ವಿಷಯ ಅಚ್ಚರಿ ಮೂಡಿಸುವಂತಿದೆ
Thalapathy Vijay: ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ದಾಂಪತ್ಯದಲ್ಲಿ ದೊಡ್ಡ ಬಿರುಕು ಮೂಡಿದ್ದು, ನಟನ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ತಮಿಳುನಾಡು ರಾಜಕೀಯ ಮತ್ತು ಸಿನಿ ವಲಯದಲ್ಲಿ ಭಾರಿ ಸಂಚಲನ ಮೂಡಿದ್ದು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಟಿ ತ್ರಿಷಾ ಕೃಷ್ಣನ್ ಹೆಸರು ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿಚ್ಛೇದನ ಕೊಡಲು ಇದೇ ಮುಖ್ಯ ಕಾರಣ
ನಟ ವಿಜಯ್ ಮತ್ತು ತ್ರಿಷಾ ನಡುವೆ ಲವ್ ಅಫೇರ್ ಇದೆ ಅನ್ನೋ ಚರ್ಚೆ ಇಂದು, ನಿನ್ನೆಯದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ಕಾಲಿವುಡ್ನಲ್ಲಿ ಹರಿದಾಡುತ್ತಲೇ ಇದೆ. ಆದರೆ, ಯಾವಾಗ ವಿಜಯ್ ಅವರು ರಾಜಕೀಯ ಅಖಾಡಕ್ಕೆ ಇಳಿದರೋ ಅಂದಿನಿಂದಲೂ ಈ ಚರ್ಚೆ ಎಂದಿಗಿಂತ ಜೋರಾಗಿದೆ. ತಮಿಳುನಾಡಿನ ಕೆಲ ರಾಜಕೀಯ ನಾಯಕರು ಬಹಿರಂಗವಾಗಿಯೇ ವಿಜಯ್ ಮತ್ತು ತ್ರಿಷಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಈ ಹಿಂದೆ ತ್ರಿಷಾ, ವಿಜಯ್ ಅವರ ಹುಟ್ಟುಹಬ್ಬದ ಸಮಯದಲ್ಲಿ 'ಹ್ಯಾಪಿ ಬರ್ತ್ಡೇ ಟು ದಿ ಬೆಸ್ಟ್' ಎಂದು ಶೀರ್ಷಿಕೆ ನೀಡಿ, ಹಾಕಿದ್ದ ಪೋಸ್ಟ್ ಕೂಡ ಈಗ ಮುನ್ನೆಲೆಗೆ ಬಂದಿದೆ.
ಈ ಫೋಟೋ ನೋಡಿದರೆ ವಿಜಯ್ ಅವರು ತ್ರಿಷಾ ಮನೆಯಲ್ಲಿ ಇರುವಂತೆ ಕಾಣುತ್ತಿತ್ತು. ಆಗಲೂ ವಿಜಯ್-ತ್ರಿಷಾ ಸಂಬಂಧ ಚರ್ಚೆಯಾಗಿತ್ತು. ಅಲ್ಲದೆ, ಈ ಹಿಂದೆ, ಕೀರ್ತಿ ಸುರೇಶ್ ಅವರ ಮದುವೆಗೆ ವಿಜಯ್ ಮತ್ತು ತ್ರಿಷಾ ಪ್ರೈವೆಟ್ ಜೆಟ್ನಲ್ಲಿ ತೆರಳಿದ್ದರು. ಈ ವೇಳೆಯೂ ಭಾರಿ ಸುದ್ದಿಯಾಗಿತ್ತು ಮತ್ತು ಇವರಿಬ್ಬರ ನಡುವೆ ಲವ್ವಿಡವ್ವಿ ಇದೆ ಎಂಬ ಗುಮಾನಿಗಳು ಜೋರಾಗಿತ್ತು. ಆದ್ರೆ, ಇದ್ಯಾವುದಕ್ಕೂ ಇಬ್ಬರಿಂದ ಪ್ರತಿಕ್ರಿಯೆ ಅಥವಾ ಸ್ಪಷ್ಟನೆಯಾಗಲಿ ಸಿಗಲಿಲ್ಲ. ಇದೀಗ ವಿಜಯ್ ಪತ್ನಿ ಏಕಾಏಕಿ ವಿಚ್ಛೇದನ ನೀಡುವುದಾಗಿ ಕೋರ್ಟ್ ಮೆಟ್ಟಿಲೇರಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಸಂಗೀತಾ ಸಲ್ಲಿಸಿದ ವಿಚ್ಛೇದನ ಅರ್ಜಿಯಲ್ಲಿ ಹೀಗಿದೆ...
ವಿಜಯ್ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿರುವ ಡಿವೋರ್ಡ್ ಅರ್ಜಿಯಲ್ಲಿ, ವಿಜಯ್ ಆಕೆ (ಹೆಸರು ಉಲ್ಲೇಖಿಸಿಲ್ಲ) ಜೊತೆ ಅನೈತಿಕ ಸಂಬಂಧ ಹೊಂದಿರುವ ವಿಷಯ ನನಗೆ ಹಾಗೂ ನನ್ನ ಮಕ್ಕಳಿಗೆ ತೀರ ಘಾಸಿ ಮಾಡಿದೆ. ಇದು ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ, ಅವರಿಬ್ಬರು ಫಾರಿನ್ ಟ್ರಿಪ್ಗಳಿಗೆ ಹೋದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವುದು ತುಂಬ ನೋವುಂಟು ಮಾಡಿದೆ ಎಂದು ಉಲ್ಲೇಖಿಸಿದ್ದಾರೆ.
ಡಿವೋರ್ಸ್ಗೆ ಅರ್ಜಿ ವಿಚಾರಣೆ
ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಟ ವಿಜಯ್ ಅವರು ಚುನಾವಣಾ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿಜಯ್ ಮತ್ತು ಪತ್ನಿ ಸಂಗೀತಾ ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಫೆಬ್ರವರಿ 24ರಂದು ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯು ಇದೇ ಏಪ್ರಿಲ್ 20ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಪ್ರಕರಣದ ವಿಚಾರಣೆಗೆ ವಿಜಯ್ ಖುದ್ದಾಗಿ ಹಾಜರಾಗಬೇಕೆಂದು ಚೆಂಗಲ್ಪಟ್ಟು ನ್ಯಾಯಾಲಯ ಆದೇಶಿಸಿದೆ,(ಏಜೆನ್ಸೀಸ್).