ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್​' 
ಕಾಲಿವುಡ್

'ಜನ ನಾಯಗನ್​'ಗೆ ಒಂದೆರೆಡಲ್ಲ ಸಂಕಷ್ಟ! ದಳಪತಿ ವಿಜಯ್​ ಚಿತ್ರಕ್ಕೆ ಮತ್ತೊಂದು ಹೊಡೆತ | Jana Nayagan

ಪ್ರಮುಖ ಮುಖ್ಯಾಂಶಗಳು

  • ಜ.09ಕ್ಕೆ ತೆರೆ ಕಾಣಬೇಕಿತ್ತು ದಳಪತಿ ವಿಜಯ್ ಅಭಿನಯದ 'ಜನ ನಾಯಗನ್​'
  • ವಿಜಯ್ ನಟನೆಯ ಕೊನೆಯ ಹಾಗೂ ಬಹುನಿರೀಕ್ಷಿತ ಚಿತ್ರವಿದು
  • ಈ ವರ್ಷದ ಆರಂಭದಿಂದ ಚಿತ್ರಕ್ಕೆ ಒಂದರ ಮೇಲೊಂದು ಸಮಸ್ಯೆಗಳು
ಚೆನ್ನೈ: ಹೊಸ ವರ್ಷದ ಆರಂಭದಿಂದಲೇ ತಮಿಳು ಚಿತ್ರರಂಗದ​ ಸೂಪರ್​ ಸ್ಟಾರ್​ ದಳಪತಿ ವಿಜಯ್​ಗೆ ಒಂದಲ್ಲ ಒಂದು ಸಂಕಷ್ಟಗಳು ಹೆಗಲೇರುತ್ತಿವೆ. ವಿಜಯ್​ ನಟನೆಯ ಬಹುನಿರೀಕ್ಷಿತ ಹಾಗೂ ಕೊನೆಯ ಸಿನಿಮಾ 'ಜನನಾಯಗನ್'​ ರಿಲೀಸ್​ ಜ.09ರಂದೇ ರಿಲೀಸ್​ ಆಗಬೇಕಿತ್ತು. ಆದರೆ, ಅದೇನಾಯಿತೋ ಏನೋ, ಚಿತ್ರಕ್ಕೆ ಸೆನ್ಸಾರ್​ ಮಂಡಳಿಯಿಂದ ಅಡಚಣೆ ಉಂಟಾಯಿತು. ಯಾವಾಗ ಚಿತ್ರತಂಡ ಕೋರ್ಟ್​ ಮೆಟ್ಟಿಲೇರಿತೋ ಅಲ್ಲಿಂದ ಸಿನಿಮಾದ ಇಡೀ ದಿಕ್ಕೇ ಬದಲಾಗಿ ಹೋಗಿದೆ.
ಜ.09ರಂದು ಸಂಕ್ರಾಂತಿ ಹಬ್ಬಕ್ಕೆ ತೆರೆ ಕಾಣಬೇಕಿದ್ದ ಜನನಾಯಗನ್ ಚಿತ್ರಕ್ಕೆ ಸದ್ಯ ಸಿಬಿಎಫ್​ಸಿ ಇನ್ನೂ ರಿಲೀಸ್​ ಭಾಗ್ಯ ನೀಡಿಲ್ಲ. ಇದಕ್ಕೆ ಕೋರ್ಟ್​ ಕೂಡ ಅಸ್ತು ಎಂದಿಲ್ಲ. ಸಿನಿಮಾದಲ್ಲಿ ಒಂದಷ್ಟು ಬದಲಾವಣೆಗಳನ್ನು ತನ್ನಿ ಎಂಬ ಆದೇಶಗಳ ಮೇರೆಗೆ ಚಿತ್ರತಂಡ ತೆರೆ ಹಿಂದೆ ಸಾಕಷ್ಟು ಪ್ರಯತ್ನಗಳಲ್ಲಿ ತೊಡಗಿದೆ. ಇಷ್ಟಾದರೂ ಸಿಬಿಎಫ್​ಸಿ ಮಾತ್ರ ಚುರುಕಾಗಿ ಕೆಲಸ ಮುಗಿಸದೆ, ಚಿತ್ರದ ವಿಳಂಬಕ್ಕೆ ನೇರವಾಗಿ ಕಾರಣವಾಗುತ್ತಿದೆ. ಒಂದಷ್ಟು ವರದಿಗಳು ನಟನ ಸಿನಿಮಾ ಜೂನ್​ ಅಥವಾ ಜುಲೈಗೆ ಬರಬಹುದು ಎಂದು ತಿಳಿಸಿವೆ. ಸದ್ಯದ ಮಟ್ಟಿಗೆ ಜನನಾಯಗನ್​ ರಿಲೀಸ್​ ದಿನಾಂಕದ ಬಗ್ಗೆ ಮಾಹಿತಿ ಇರಲಿ, ಒಂದು ಸಣ್ಣ ಸುಳಿವು ಕೂಡ ಇಲ್ಲದಂತಾಗಿದೆ.
ಹಲವು ಸಿನಿ ವರದಿಗಳ ಪ್ರಕಾರ, ದಳಪತಿ ವಿಜಯ್ ಚಿತ್ರದ ಒಟಿಟಿ ಹಕ್ಕುಗಳನ್ನು ಪಡೆಯಲು ಅಮೆಜಾನ್​ ಪ್ರೈಮ್​ ವಿಡಿಯೋ ಸಂಸ್ಥೆ ಮುಂಚೂಣಿಯಲ್ಲಿತ್ತು. ಆದರೆ, ಸದ್ಯದ ಪರಿಸ್ಥಿತಿಗಳಿಂದ ಗೊಂದಲಕ್ಕೊಳಗಾದ ಹೆಸರಾಂತ ಒಟಿಟಿ ಪ್ಲಾಟ್​ಫಾರ್ಮ್​, ತನ್ನ ಡೀಲ್​ನಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ. ಇದಕ್ಕೆ ಚಿತ್ರತಂಡ ರಿಲೀಸ್​ ದಿನಾಂಕ ಯಾವಾಗ ಎಂದು ಸ್ಪಷ್ಟಪಡಿಸದೆ ಇರುವುದೇ ಮುಖ್ಯ ಕಾರಣ ಎನ್ನಲಾಗಿದೆ.
ಎಚ್​. ವಿನೋತ್​ ನಿರ್ದೇಶನದ ಹಾಗೂ ಕೆವಿಎನ್​ ಸಂಸ್ಥೆ ನಿರ್ಮಿಸಿರುವ ಜನ ನಾಯಗನ್ ಚಿತ್ರದಲ್ಲಿ ದಳಪತಿ ವಿಜಯ್​​, ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಬಿ ಡಿಯೋಲ್​, ಮಮಿತಾ ಬಿಜ್ಜು, ಗೌತಮ್ ವಾಸುದೇವ್ ಮೆನೆನ್​, ಪ್ರಕಾಶ್ ರಾಜ್​, ಪ್ರಿಯಾಮಣಿ ಮತ್ತು ನರೈನ್​ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).