ತಮಿಳು ನಟ ದಳಪತಿ ವಿಜಯ್​ 
ಕಾಲಿವುಡ್

ದಳಪತಿಗೆ ಒಂದಲ್ಲ, ಎರಡಲ್ಲ... ನಟ ವಿಜಯ್​ ಬೆನ್ನತ್ತಿವೆ ಈ 4 ಸಮಸ್ಯೆಗಳು | Thalapathy Vijay

ಪ್ರಮುಖ ಮುಖ್ಯಾಂಶಗಳು

  • ಟಿವಿಕೆ ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ಸೂಪರ್​ ಸ್ಟಾರ್​ ದಳಪತಿ ವಿಜಯ್
  • ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಸೇರಿದಾಗಿನಿಂದ ಒಂದಲ್ಲ ಒಂದು ತೊಂದರೆ
  • ಒಂದಲ್ಲ, ಎರಡಲ್ಲ ನಾಲ್ಕು ಕಡೆಯಿಂದ ಸಮಸ್ಯೆಗಳು ವಿಜಯ್​ ಬೆನ್ನತ್ತಿವೆ
Thalapathy Vijay: ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ಸೂಪರ್​ ಸ್ಟಾರ್​ ದಳಪತಿ ವಿಜಯ್​ ದಾಂಪತ್ಯದಲ್ಲಿ ದೊಡ್ಡ ಬಿರುಕು ಮೂಡಿದ್ದು, ನಟನ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ತಮಿಳುನಾಡು ರಾಜಕೀಯ ಮತ್ತು ಸಿನಿ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಟಿ ತ್ರಿಷಾ ಕೃಷ್ಣನ್​ ಹೆಸರು ಪದೇ ಪದೇ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ಇಬ್ಬರು ಒಟ್ಟಿಗೆ ಮದುವೆ ಸಮಾರಂಭದಲ್ಲಿ ಪ್ರತ್ಯಕ್ಷವಾಗಿದ್ದು, ವದಂತಿಗಳೇ ಸತ್ಯ ಎನ್ನುವಂತಾಗಿದೆ. 
ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸೂಪರ್​ಹಿಟ್​ ಸಿನಿಮಾಗಳನ್ನು ಕೊಟ್ಟಿರುವ ದಳಪತಿ, ಇಂದು ತಾವು ಅಭಿನಯಿಸುವ ಒಂದೇ ಒಂದು ಚಿತ್ರಕ್ಕೆ ಬರೋಬ್ಬರಿ 250 ಕೋಟಿ ರೂ. ಮೊತ್ತದ ಸಂಭಾವನೆ ಪಡೆಯುವ ರೇಂಜಿಗಿದ್ದಾರೆ. ಹೀಗಿರುವಾಗಲೇ, ತಮ್ಮ ದಿಕ್ಕನ್ನು ರಾಜಕೀಯದತ್ತ ತಿರುಗಿಸಿರುವ ದಳಪತಿ, 'ಜನನಾಯಗನ್'​ ಬಳಿಕ ಇನ್ಯಾವುದೇ ಚಿತ್ರ ಮಾಡುವುದಿಲ್ಲ, ಪರಿಪೂರ್ಣವಾಗಿ ರಾಜಕಾರಣಿಯಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು. ಇಲ್ಲಿಂದ ಶುರುವಾಯಿತು ನೋಡಿ ವಿಜಯ್​ಗೆ ಬಿಕ್ಕಟ್ಟಿನ ಸಮಯ.

1. ರಾಜಕೀಯ ಸಂಕಷ್ಟ

ಟಿವಿಕೆ ಪಕ್ಷವನ್ನು ಘೋಷಿಸಿ, ಅಭಿಮಾನಿಗಳ ಎದುರು ಜನ ನಾಯಕನಾಗಿ ನಿಲ್ಲಲು ಸಜ್ಜಾದ ವಿಜಯ್​, ಕರೂರಿನಲ್ಲಿ ಚುನಾವಣೆಯ ಸಲುವಾಗಿ ಬೃಹತ್​ ರ್ಯಾಲಿಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದರು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ವಿಜಯ್ ಆಗಮಿಸಿದ್ದೇ ತಡ, ದೊಡ್ಡ ಕಾಲ್ತುಳಿತ ಸಂಭವಿಸಿತು. ಈ ದುರಂತದಲ್ಲಿ ಬರೋಬ್ಬರಿ 41 ಅಭಿಮಾನಿಗಳು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡರು. ಅಲ್ಲಿಂದ ಪ್ರತಿಪಕ್ಷಗಳು ವಿಜಯ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಹೇರಿತು. ಇದರೊಟ್ಟಿಗೆ ನಟನಿಗೆ ಕಾನೂನು ಸಂಕಷ್ಟ ಕೂಡ ಎದುರಾಯಿತು. 

2. ದಾಂಪತ್ಯದಲ್ಲಿ ಬಿರುಕು

2021ರಿಂದ ಪತಿಯಿಂದ ದೂರವಿರುವ ವಿಜಯ್ ಪತ್ನಿ ಸಂಗೀತಾ, ಲಂಡನ್​ನಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ, ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​​ ಅರ್ಜಿ ಸಲ್ಲಿಸಿದ ಅವರು, ವಿಜಯ್​ ಆಕೆ (ಹೆಸರು ಉಲ್ಲೇಖಿಸಿಲ್ಲ) ಜೊತೆ ಅನೈತಿಕ ಸಂಬಂಧ ಹೊಂದಿರುವ ವಿಷಯ ನನಗೆ ಹಾಗೂ ನನ್ನ ಮಕ್ಕಳಿಗೆ ತೀರ ಘಾಸಿ ಮಾಡಿದೆ. ಇದು ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ, ಅವರಿಬ್ಬರು ಫಾರಿನ್​ ಟ್ರಿಪ್​ಗಳಿಗೆ ಹೋದ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಾಕಿಕೊಂಡಿರುವುದು ತುಂಬ ನೋವುಂಟು ಮಾಡಿದೆ ಎಂದು ಹೇಳುವ ಮೂಲಕ ಪತಿಯಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. 

3. ತ್ರಿಷಾ ಜೊತೆಗಿನ ಫೋಟೋ

ಕಳೆದ ಹಲವು ವರ್ಷಗಳಿಂದ ನಟಿ ತ್ರಿಷಾ ಕೃಷ್ಣನ್ ಜೊತೆ ವಿಜಯ್ ಅವರ ಹೆಸರು ಆಗಾಗ್ಗೆ ಕೇಳಿಬರುತ್ತಲೇ ಇತ್ತು. ಇದು ಕಾಲಿವುಡ್​ ಅಂಗಳದಲ್ಲಿ ದೊಡ್ಡ ವದಂತಿಯಾಗಿ ಹರಿದಾಡುತ್ತಿತ್ತು. ಆದರೆ, ಇದಕ್ಕೆ ಯಾವುದೇ ರೀತಿಯಲ್ಲೂ ವಿಜಯ್ ಅಥವಾ ತ್ರಿಷಾ ಆಗಲಿ, ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ, ವಿಜಯ್ ಡಿವೋರ್ಸ್​ ಸುದ್ದಿ ಹೊರಬಿದ್ದಾಗಿನಿಂದಲೂ ನಟಿಯ ಹೆಸರು ಮತ್ತೆ ಜೋರಾಗಿ ಸದ್ದು ಮಾಡಲಾರಂಭಿಸಿದೆ. ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದ್ದು, ಇತ್ತೀಚಿಗೆ ಅವರಿಬ್ಬರು ಮದುವೆ ಸಮಾರಂಭಕ್ಕೆ ಭೇಟಿ ಕೊಟ್ಟ ಕ್ಷಣ. ಈ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

4. 'ಜನ ನಾಯಗನ್​' ರಿಲೀಸ್​ಗೆ ಸಂಕಷ್ಟ

ತಮಿಳು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಜನನಾಯಗನ್​ ವಿಜಯ್​ ಅವರ ಕೊನೆಯ ಚಿತ್ರವಾಗಿದೆ. ಸದ್ಯ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಕಾರಣ, ವಿಜಯ್​ ಸದ್ಯ ತಮ್ಮ ಬಹುಪಾಲು ಸಮಯವನ್ನು ಜನ ಸೇವೆಗೆ ಮೀಸಲಿಡಲು ಮುಂದಾಗಿದ್ದಾರೆ. ಈ ಮಧ್ಯೆ, ಕಡೆಯ ಚಿತ್ರವನ್ನು ವಿಜಯ್​ ಮುಗಿಸಿಕೊಟ್ಟಿದ್ದೇ ಆದರೂ, ಕಾನೂನಿನ ಸಂಕಷ್ಟ ಎದುರಾಗಿ ಚಿತ್ರದ ರಿಲೀಸ್​ ಮುಂದೋಗಿದೆ. ಸೆನ್ಸಾರ್​ ಮಂಡಳಿಯಿಂದ ಉಂಟಾಗಿರುವ ಅಡಚಣೆ ಇನ್ನೂ ಬಗೆಹರಿಯದ ಹಿನ್ನೆಲೆ ಸದ್ಯ ಯಾವ ದಿನಾಂಕಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂಬುದರ ಬಗ್ಗೆ ಸ್ಪಷ್ಟನೆಯೇ ಇಲ್ಲದಂತಾಗಿದೆ,(ಏಜೆನ್ಸೀಸ್).