ತಮಿಳು ಚಿತ್ರರಂಗದ ಸ್ಟಾರ್ ನಟ  
ಕಾಲಿವುಡ್

ಇವನ ಮುಖ ನೋಡಲು ಹಣ ಕೊಟ್ಟು ಥಿಯೇಟರ್​ಗೆ ಹೋಗ್ಬೇಕಾ? ಇಂಥಾ ಚುಚ್ಚು ಮಾತು ಕೇಳಿದ್ದ ನಟ ಇಂದು ಸೂಪರ್​ಸ್ಟಾರ್​ | Star Actor

ಪ್ರಮುಖ ಮುಖ್ಯಾಂಶಗಳು

  • ಆರಂಭದಲ್ಲಿ ಚುಚ್ಚು ಮಾತುಗಳು, ಇಂದು ಅಭಿಮಾನಿಗಳ ಅಭಿಮಾನಕ್ಕಿಲ್ಲ ಕೊನೆ
  • ತಮಿಳು ಚಿತ್ರರಂಗದ ಸ್ಟಾರ್​ ನಟನ ಆರಂಭದ ಕಥೆಯಿದು
  • ಅಪಾರ ಸಂಖ್ಯೆ ನೆಚ್ಚಿನ 'ಜನನಾಯಗನ್'​ ಈ ನಟ
ಚೆನ್ನೈ: ಚಿತ್ರರಂಗ ಅಂದಮೇಲೆ ಚುಚ್ಚು ಮಾತು, ಟೀಕೆಗಳು, ವ್ಯಂಗ್ಯಗಳು ತೀರ ಸಾಮಾನ್ಯ ಬಿಡಿ. ಈ ರೀತಿಯ ಕಹಿ ಅನುಭವಗಳು ಅನೇಕ ನಟ-ನಟಿಯರಿಗೆ ಆರಂಭದಲ್ಲಿ ಕಾಡಿರುವುದಂತು ಖಚಿತ. ಅಂತಹ ಹಲವಾರು ನಿದರ್ಶನಗಳು ಇಂದು ನಮ್ಮ ನಿಮ್ಮೆಲರ ಮುಂದಿದೆ.
ಚೊಚ್ಚಲ ಚಿತ್ರದಲ್ಲಿ ಹೀರೋ, ನಾಯಕ ನಟಿಯಾಗಿ ಹೊರಹೊಮ್ಮುವ ಆಸೆಯನ್ನು ಹೊತ್ತುಕೊಂಡು ಬರುವ ಅದೆಷ್ಟೋ ಕಲಾವಿದರು ಕೆಲವರು ಹಿಯಾಳಿಸುವ ರೀತಿಗೆ ಸೋತು, ವೃತ್ತಿಯಿಂದಲೇ ಎಕ್ಸಿಟ್​ ಆಗಿಬಿಡುತ್ತಾರೆ. ಚುಚ್ಚು ಮಾತುಗಳಿಗೆ ನಾಯಕರಾಗಿರುವ ಅಂಥವರ ಮಾತುಗಳನ್ನು ಮನಸ್ಸಿಗೆ ತೆಗೆದುಕೊಂಡು ತಮ್ಮ ಕನಸನ್ನೇ ಮೊಟಕುಗೊಳಿಸುತ್ತಾರೆ. ಇನ್ನು ಕೆಲವರು ಎಷ್ಟೇ ಅಣಕಿಸಿ ಮಾತನಾಡಿದರು, ಕುಗ್ಗಿಸಲು ಪ್ರಯತ್ನಿಸಿದರು, ಅದಕ್ಕೆ ಜಗ್ಗದೆ ತಮ್ಮ ಸಾಧನೆ ಮುಖೇನ ಉತ್ತರಿಸುತ್ತಾರೆ. ಅದಕ್ಕೆ ಈ ನಟ ಕೂಡ ಒಂದು ಅತ್ಯುತ್ತಮ ಉದಾಹರಣೆ.

ತಮಿಳಿನ ಸ್ಟಾರ್​ ಹೀರೋ

ಇಲ್ಲೊಬ್ಬ ಸ್ಟಾರ್​ ನಟ ತಮ್ಮ ಆರಂಭದ ದಿನಗಳಲ್ಲಿ ನೋಡಿದ ಕಷ್ಟದ ದಿನಗಳನ್ನು ಅವರ ಸ್ನೇಹಿತರೊಬ್ಬರು ನೇರವಾಗಿ ಕಂಡಿದ್ದು, ಅದನ್ನು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಯಾರು ಆ ಸೂಪರ್​ಸ್ಟಾರ್? ಇವರು ಯಾವ ಚಿತ್ರರಂಗದವರು? ಈ ಘಟನೆಗಳನ್ನು ಮುಕ್ತವಾಗಿ ತಿಳಿಸಿದ ಅವರ ಸ್ನೇಹಿತರು ಯಾರು? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
ತಮಿಳು ನಟ ವಿಶಾಲ್​, ತಮ್ಮ ಆಪ್ತ ಸ್ನೇಹಿತರಾದ ಕಾಲಿವುಡ್​​ನ ದಳಪತಿ ವಿಜಯ್​ ಅವರ ಕಷ್ಟದ ದಿನಗಳನ್ನು ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದರು. “ನಾನು ವಿಜಯ್​ ಅವರನ್ನು ಕಾಲೇಜು ದಿನಗಳಿಂದಲೂ ನೋಡಿದ್ದೇನೆ. ಯಾಕಂದ್ರೆ, ಕಾಲೇಜಿನಲ್ಲಿ ವಿಜಯ್​ ನನ್ನ ಸಹೋದರನ ಸೀನಿಯರ್​ ಆಗಿದ್ದರು. ಹಾಗಾಗಿ ಅಂದಿನಿಂದಲೂ ಅವರ ಜೀವನದ ಗ್ರಾಫ್​ ಹೇಗಿತ್ತು ಎಂಬುದನ್ನು ಹತ್ತಿರದಿಂದ ಕಂಡಿದ್ದೇನೆ” ಎಂದರು.

ಅವಮಾನ, ಸನ್ಮಾನ

“ವಿಜಯ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ಒಂದು ಪ್ರತ್ಯೇಕ ಮ್ಯಾಗ್​ಜೀನ್​ ಅವರ ಬಗ್ಗೆ ಕೆಟ್ಟದಾಗಿ ಬರೆದಿತ್ತು. ಇವನ ಮುಖ ನೋಡಲು ಚಿತ್ರಮಂದಿರಕ್ಕೆ ಹಣ ಕೊಟ್ಟು ಹೋಗಬೇಕಾ? ಎಂದು ವ್ಯಂಗ್ಯವಾಡಿತ್ತು. ಆದ್ರೆ, ಇದಕ್ಕೆ ತಲೆಕಡಿಸಿಕೊಳ್ಳದ ವಿಜಯ್​, ತನ್ನ ಕೆಲಸಗಳನ್ನು ಮುಂದುವರೆಸಿ, ಹಲವಾರು ಸಿನಿಮಾಗಳನ್ನು ಮಾಡಿದರು. ಸತತ ಸಿನಿಮಾಗಳನ್ನು ಮಾಡಿದ ಬಳಿಕ ಅದೇ ಮ್ಯಾಗ್​ಜೀನ್​ನವರು, ವಿಜಯ್​ ಬಗ್ಗೆ ಪಾಸಿಟಿವ್ ಆಗಿ​ ಬರೆದರು ಎಂದರು.

ಅಭಿಮಾನಿಗಳ 'ಜನನಾಯಗನ್​'

ಇದು ದಳಪತಿ ವಿಜಯ್​ ಅವರ ಯಶಸ್ಸು. ಇಷ್ಟು ವರ್ಷಗಳಿಂದ ನೋಡಿರುವಂತೆ ಅವರು ಏಣಿಯನ್ನು ಹಂತ ಹಂತವಾಗಿ ಹತ್ತಿಕೊಂಡು ಮತ್ತಷ್ಟು ಎತ್ತರಕ್ಕೆ ಬಂದಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ ಎಂದು ವಿಶಾಲ್​ ತಮ್ಮ ಗೆಳಯ ವಿಜಯ್ ಬಗ್ಗೆ ಗುಣಗಾನ ಮಾಡಿದ್ದು ವಿಶೇಷ. ಇನ್ನು ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ವಿಜಯ್, ತಮ್ಮ ಸಿನಿ ಪಯಣಕ್ಕೆ ಕೊನೆ ಚಿತ್ರ 'ಜನನಾಯಗನ್​' ಮೂಲಕ ಗುಡ್​ಬೈ ಹೇಳಲು ಸಜ್ಜಾಗಿದ್ದಾರೆ. ಆದ್ರೆ, ಒಂದಷ್ಟು ಅಡಚಣೆಗಳಿಂದ ಚಿತ್ರದ ರಿಲೀಸ್​ ವಿಳಂಬವಾಗಿದೆ,(ಏಜೆನ್ಸೀಸ್).