ಸೂರ್ಯ ದಂಪತಿ, ನಟನ ತಂದೆ ಶಿವಕುಮಾರ್​ 
ಕಾಲಿವುಡ್

ಸೂರ್ಯ-ಜ್ಯೋತಿಕಾ ಪ್ರೀತಿ ಒಪ್ಪಲಿಲ್ಲ ತಂದೆ ಶಿವಕುಮಾರ್! ಆದ್ರೆ, ಪುತ್ರನ ಅದೊಂದು ಮಾತು ಮದುವೆಗೆ ಸಾಕ್ಷಿಯಾಯ್ತು | Suriya

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ಸೂಪರ್​ ಜೋಡಿ ನಟ ಸೂರ್ಯ ಮತ್ತು ಜ್ಯೋತಿಕಾ ದಂಪತಿ
  • ಇವರಿಬ್ಬರದ್ದು ಲವ್​ ಕಮ್​ ಅರೆಂಜ್​ ಮ್ಯಾರೆಜ್​
  • ಸೂರ್ಯ ಅವರನ್ನು ಜ್ಯೋತಿಕಾ ಮದುವೆ ಆಗೋದು ನಟನ ತಂದೆಗೆ ಇಷ್ಟವಿರಲಿಲ್ಲ
  • ಇದಕ್ಕೆ ವಿರೋಧ ಕೂಡ ವ್ಯಕ್ತಪಡಿಸಿದ್ದರು ತಂದೆ! ಆದರೆ ಸೂರ್ಯ ಮಾತು ಅವರ ನಿರ್ಧಾರವನ್ನು ಬದಲಿಸಿತು
ಚೆನ್ನೈ: ತಮಿಳುನಾಡಿನ ಸ್ಟಾರ್ ನಟ ಸೂರ್ಯ ಅವರು ಯಾವ ಸಿನಿಪ್ರಿಯರಿಗೆ ಗೊತ್ತಿಲ್ಲ ಹೇಳಿ? ತಮ್ಮ ಖಡಕ್​ ನಟನೆ, ಗತ್ತು ಮತ್ತು ಬ್ಯಾಕ್ ಟು ಬ್ಯಾಕ್​ ಸೂಪರ್​ಹಿಟ್​ ಚಿತ್ರಗಳ ಮೂಲಕ ಇಂದು ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸೂರ್ಯ, ಕೇವಲ ತಮಿಳು ಮಾತ್ರವಲ್ಲದೇ, ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಸಿಕರಿಗೂ ಚಿರಪರಿಚಿತ. ಕಳೆದ ವರ್ಷ 'ರೆಟ್ರೋ' ಮುಖೇನ ಚಿತ್ರರಂಗಕ್ಕೆ ಎಂಟ್ರಿಕೊಟ್ಟ 'ಸಿಂಗಂ', ಈಗ ಮತ್ತೊಂದು ಹೊಸ ಸಿನಿಮಾ ಮುಖಾಂತರ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಈ ಮಧ್ಯೆ, ಅವರ ತಂದೆ ಬಿಚ್ಚಿಟ್ಟ ಕೆಲ ಕುತೂಹಲಕಾರಿ ಸಂಗತಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಸೂರ್ಯ-ಜ್ಯೋತಿಕಾ ಪ್ರೀತಿಗೆ ವಿರೋಧ

ಸೂರ್ಯ ಮತ್ತು ಅವರ ಪತ್ನಿ ಜ್ಯೋತಿಕಾ ಲವ್​ಸ್ಟೋರಿ ತುಂಬ ಜನಕ್ಕೆ ಗೊತ್ತೇ ಇದೆ. ಕಾಲಿವುಡ್​ನಲ್ಲಿ ದಿ ಬೆಸ್ಟ್​ ಕಪಲ್​ ಎಂದು ಕರೆಸಿಕೊಳ್ಳುವ ಈ ಜೋಡಿಯ ಪ್ರೀತಿಗೆ ಆರಂಭದಲ್ಲಿ ಭಾರೀ ಸಂಕಷ್ಟ ಎದುರಾಗಿತ್ತು ಎಂಬ ಸಂಗತಿ ನಟನ ಅಭಿಮಾನಿಗಳಿಗೆ ಪ್ರಾಯಶಃ ತಿಳಿದಿರಲಿಕ್ಕಿಲ್ಲ. ಇಬ್ಬರೂ ಸ್ಟಾರ್​ ನಟ-ನಟಿಯಾಗಿ ತಮಿಳು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಸೂರ್ಯ-ಜ್ಯೋತಿಕಾ, ಹಲವು ಬ್ಲಾಕ್​ಬಸ್ಟರ್​ ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಆದರೆ, ಇವರಿಬ್ಬರ ಪ್ರೇಮಕ್ಕೆ ಹೆತ್ತವರಿಂದ ಒಪ್ಪಿಗೆ ಸಿಕ್ಕಿರಲಿಲ್ಲ.

ಮಗನ ಬಗ್ಗೆ ಅಪ್ಪನ ಮನದಾಳ

'ಗಲಾಟ್ಟ' ನಡೆಸಿದ ಸಂದರ್ಶನದಲ್ಲಿ ಪುತ್ರನ ಪ್ರೀತಿ ಬಗ್ಗೆ ಮನಬಿಚ್ಚಿ ಮಾತನಾಡಿದ ತಂದೆ ಶಿವಕುಮಾರ್​, ಆರಂಭದಲ್ಲಿ ನಾನು ಸೂರ್ಯನ ಪ್ರೀತಿ ಒಪ್ಪಿಕೊಳ್ಳಲಿಲ್ಲ. ನಟಿ ಜ್ಯೋತಿಕಾ ಜತೆಗೆ ಪ್ರೇಮ ಸಂಬಂಧದಲ್ಲಿ ಇರುವುದಾಗಿ ಮಗ ಹೇಳಿದ. ಆ ಕ್ಷಣದಲ್ಲಿ ನನಗೆ ತುಂಬ ಮನಸ್ಸಿಗೆ ನೋವಾಯಿತು. ಹೀಗಾಗಿ, ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಆಗ ಸೂರ್ಯ ಹೇಳಿದ ಮಾತು ನಿಜಕ್ಕೂ ನನ್ನ ನಿರ್ಧಾರವನ್ನೇ ಬದಲಿಸುವಂತೆ ಮಾಡಿತು ಎಂದರು.

ಅವನ ಮಾತೇ...

ಈ ಬಗ್ಗೆ ನನ್ನೊಂದಿಗೆ ಮಾತಿಗಿಳಿದ ಸೂರ್ಯ, ನಾನು ಬದುಕಿದರೆ ಜ್ಯೋತಿಕಾ ಜತೆಗೆ ಮಾತ್ರ. ಇಲ್ಲವಾದರೆ, ಏಕಾಂಗಿಯಾಗಿ ಉಳಿದು ಜೀವನ ಮಾಡ್ತೇನೆ ಎಂದುಬಿಟ್ಟ. ಆಗ ನನಗೆ ಅನಿಸಿದ್ದು, ನನ್ನ ಇಡೀ ವೃತ್ತಿಯ ಬದುಕಿನಲ್ಲಿ ಸುಮಾರು 150 ಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಬಹುತೇಕ ಕಥೆಗಳು ಪ್ರೀತಿಗೆ ಸಂಬಂಧಿಸಿದ್ದೆ. ಹೀಗಾಗಿ, ಕಡೆಗೆ ಒಪ್ಪಿಗೆ ಸೂಚಿಸಿದೆ. ಈಗ ಬಹಳ ಸಿಂಪಲ್​ ಆಗಿ ಜೀವನ ಸಾಗಿಸುತ್ತಿರುವ ಮಗ, ಎರಡು ಮಕ್ಕಳ ತಂದೆ ಎಂದು ಹೇಳಿದ್ದಾರೆ.

'ಕರುಪ್ಪು' ರಿಲೀಸ್​?

ಆರ್​ಜೆ ಬಾಲಾಜಿ ನಿರ್ದೇಶನದ ಹಾಗೂ ಸೂರ್ಯ ಮತ್ತು ತ್ರಿಶಾ ಕೃಷ್ಣನ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಕರುಪ್ಪು', ಶೀಘ್ರವೇ ತೆರೆಗೆ ಬರಲು ಸಜ್ಜಾಗಿದೆ. ವಿಶೇಷ ಎಂದರೆ, 20 ವರ್ಷಗಳ ನಂತರ ಸೂರ್ಯ-ತ್ರಿಶಾ ಮತ್ತೊಮ್ಮೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ಆ್ಯಕ್ಷನ್​ ಆಧರಿತ ಹಾಗೂ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ವಕೀಲನ ರೋಚಕ ಕಥೆ ಇದಾಗಿದೆ,(ಏಜೆನ್ಸೀಸ್).