- ಚೆನ್ನೈನ ಫ್ಯಾನ್ಲಿ ಎಂಟರ್ಟೈನ್ಮೆಂಟ್ ಪ್ಲಾಟ್‌ಫಾರ್ಮ್ ಉದ್ಘಾಟನೆ ಕಾರ್ಯಕ್ರಮ
- ನನಗಿಂತ ಹೆತ್ತವರು, ದೇವರು ಮೊದಲು
- ಅಭಿಮಾನಿಗಳಿಗೆ ಕಿವಿಮಾತು ಹಾಗೂ ಬುದ್ಧಿ ಮಾತು ಹೇಳಿದ ನಟ
ತಮಿಳುನಾಡು: 'ರೆಮೋ', 'ಅಮರನ್', 'ಮದರಾಸಿ' ಸೇರಿ ಹಲವಾರು ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿ, ಅವರಿಂದ ಮೆಚ್ಚುಗೆ ಪಡೆದಿರುವ ತಮಿಳು ಚಿತ್ರರಂಗದ ಸ್ಟಾರ್ ನಟ ಶಿವಕಾರ್ತಿಕೆಯನ್, ಇದೀಗ ತಮ್ಮ ಫ್ಯಾನ್ಸ್ಗೆ ವಿಶೇಷ ಮನವಿ ಹಾಗೂ ಸಂದೇಶವನ್ನು ನೀಡಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಫ್ಯಾನ್ಲಿ ಎಂಟರ್ಟೈನ್ಮೆಂಟ್ ಪ್ಲಾಟ್‌ಫಾರ್ಮ್ ಉದ್ಘಾಟನೆಯಲ್ಲಿ ಮನಬಿಚ್ಚಿ ಮಾತನಾಡಿದ ಶಿವಕಾರ್ತಿಕೆಯನ್, "ನನ್ನನ್ನು ಪೂಜಿಸುವ ಅಭಿಮಾನಿಗಳು ನನಗೆ ಬೇಡ. ಯಾರೆಲ್ಲ ನನ್ನ ಫ್ಯಾನ್ ಎನ್ನುತ್ತಿರೋ, ಅವರೆಲ್ಲ ದೇವರು ಮತ್ತು ಹೆತ್ತವರನ್ನು ಮಾತ್ರ ಪೂಜಿಸಬೇಕು. ಅವರೇ ನಿಮಗೆ ಮೊದಲು. ಸೋಷಿಯಲ್ ಮೀಡಿಯಾದಿಂದ ದಿಕ್ಕು ತಪ್ಪಬೇಡಿ. ಆದಷ್ಟು ಒಳ್ಳೆಯ ರೀತಿಯಲ್ಲಿ ಅದನ್ನು ಬಳಕೆ ಮಾಡಿಕೊಳ್ಳಿ" ಎಂದು ಬುದ್ಧಿ ಮಾತುಗಳನ್ನು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ, ಶಿವಕಾರ್ತಿಕೆಯನ್ ಜತೆ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲ ಗೋಪಿಚಂದ್ ಮತ್ತು ಚೆಸ್ ಚಾಂಪಿಯನ್ ಗುಕೇಶ್ ದೊಮ್ಮರಾಜು ಉಪಸ್ಥಿತರಿದ್ದರು. ಪ್ರಸ್ತುತ, ತಮ್ಮ ಮುಂಬರುವ ಚಿತ್ರಗಳ ಕೆಲಸಗಳಲ್ಲಿ ನಿರತರಾಗಿರುವ ನಟ, ಸುಧಾ ಕೊಂಗಾರ ಅವರ 'ಪರಾಶಕ್ತಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು 2026ರ ಜ.14ರಂದು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಲು ಸಜ್ಜಾಗಿದೆ,(ಏಜೆನ್ಸೀಸ್).