ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್ 
ಕಾಲಿವುಡ್

'ಜನ ನಾಯಗನ್' ನೋಡಲು ಬಂದರಾ ವಿಜಯ್ ಪತ್ನಿ ಸಂಗೀತಾ? ವೈರಲ್ ವಿಡಿಯೋ ಹಿಂದಿನ ಸತ್ಯವೇನು? Sangeetha Watched Jana Nayagan

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್
  • ನಿಮಾ ನೋಡಲು ಪತ್ನಿ ಸಂಗೀತಾ ಥಿಯೇಟರ್‌ಗೆ ಬಂದಿದ್ದರು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
  • ಆದರೆ ಈ ವೈರಲ್ ವಿಡಿಯೋದ ಅಸಲಿ ಸತ್ಯವೇನು?
ಚೆನ್ನೈ: ಸಿನಿಮಾ ತಯಾರಿ ಹಂತದಿಂದ ಹಿಡಿದು ಬಿಡುಗಡೆಯಾಗುವ ತನಕ ಸದಾ ಕಾಂಟ್ರವರ್ಸಿಯಲ್ಲೇ ಇದ್ದ ಸಿನಿಮಾ ಎಂದರೆ ಅದು ತಮಿಳುನಾಡು ಸಿಎಂ ದಳಪತಿ ವಿಜಯ್ ಅಭಿನಯದ ಜನ ನಾಯಗನ್​.
ಈ ಸಿನಿಮಾ ದಳಪತಿಯ ಕೊನೆಯ ಸಿನಿಮಾ ಎಂಬ ಕ್ರೇಜ್​​ ಅವರ ಅಭಿಮಾನಿಗಳಲ್ಲಿ ಸ್ವಲ್ಪ ಹೆಚ್ಚಿನ ಮಟ್ಟಿನಲ್ಲೇ ಇದ್ದರೂ, ಸೆನ್ಸಾರ್​ ಮಂಡಳಿ ಈ ಸಿನಿಮಾ ಬಿಡುಗಡೆಗೆ ಒಪ್ಪಿಗೆ ನೀಡಿರಲಿಲ್ಲ. ನಂತರ ನಿರಂತರ ಹೋರಾಟದ ಫಲವಾಗಿ ನಿನ್ನೆ (ಗುರುವಾರ, ಜು.23) ಈ ಸಿನಿಮಾ ಬಿಡುಗಡೆಯಾಗಿದೆ.
ಈಗ ಈ ಸಿನಿಮಾ ತೆರೆಕಂಡ ಮೇಲೂ ಸಹ ಮತ್ತೊಂದು ಚರ್ಚೆ ಶುರುವಾಗಿದ್ದು, ವಿಜಯ್​ನಿಂದ ವಿಚ್ಛೇದನ ಪಡೆಯಲು ಮುಂದಾಗಿರುವ ಪತ್ನಿ ಸಂಗೀತಾ (Sangeetha Watched Jana Nayagan) ಜನ ನಾಯಗನ್​ ಸಿನಿಮಾವನ್ನು ವೀಕ್ಷಿಸಿದ್ದಾರೆ ಎಂಬ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ಚರ್ಚೆಗೆ ವೇದಿಕೆಯಾಗಿದೆ.

ಸಂಗೀತಾ ಸಿನಿಮಾ ನೋಡಿದ್ದು ನಿಜವೇ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಪ್ರಕಾರ, ಕಾರಿನಲ್ಲಿ ಸಿನಿಮಾ ಥಿಯೇಟರ್​ಗೆ ಬಂದಿರುವ ಸಂಗೀತಾ ಮುಖಕ್ಕೆ ಮಾಸ್ಕ್​ ಧರಿಸಿ, ಜನ ನಾಯಗನ್​ ಸಿನಿಮಾವನ್ನು ತರೆಕಂಡ ಮೊದಲ ದಿನವೇ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಈ ವಿಡಿಯೋ ಸಂಪೂರ್ಣ ಸುಳ್ಳಾಗಿದ್ದು, ಸಂಗೀತಾ ನಿನ್ನೆ ಯಾವುದೇ ಸಿನಿಮಾ ಮಂದಿರಕ್ಕೆ ಬೇಟಿಯೇ ನೀಡಿಲ್ಲ ಎಂದು ತಿಳಿದು ಬಂದಿದೆ. ಈಗ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ಬಳಹ ವರ್ಷಗಳ ಹಿಂದೆ ಸಂಗೀತಾ, ಯಾವುದೋ ಬೇರೆ ಸಿನಿಮಾವನ್ನು ನೋಡಲು ಹೋಗಿದ್ದಾಗಿ ತಿಳಿದು ಬಂದಿದೆ.

ಜನ ನಾಯಗನ್​ ನೋಡಿದ ತ್ರಿಷಾ!

ವಿಜಯ್​ ಪತ್ನಿ ಸಿನಿಮಾ ನೋಡಲು ಬರದಿದ್ದರು, ಅವರ ನೆಚ್ಚಿನ ಗೆಳತಿ ತ್ರಿಷಾ ಕೃಷ್ಣನ್​ ರೋಹಿಣಿ ಥಿಯೇಟರ್​ಗೆ ಆಗಮಿಸಿ ಜನ ನಾಯಗನ್​ ಸಿನಿಮಾವನ್ನು ನೋಡಿದ್ದಾರೆ ಎಂದು ವರದಿಯಾಗಿದೆ. ವಿಜಯ್​​ ಸಿನಿಮಾವನ್ನು ನೋಡಲು ಅವನ ಹೆಂಡತಿಯೇ ಬರಲಿಲ್ಲ ಎಂದು ಕೆಲವರು ಮೂಗು ಮುರಿಯುತ್ತಿದ್ದರೆ, ಇನ್ನು ಕೆಲವರು ವಿಜಯ್​​ನ ಎಲ್ಲಾ ಕಷ್ಟ-ಸುಖದ ಸಮಯದಲ್ಲಿ ನಿಲ್ಲುವುದು ತ್ರಿಷಾ ಒಬ್ಬರೇ ಎಂದು ಹೊಗಳುತ್ತಿದ್ದಾರೆ,(ಏಜನ್ಸೀಸ್​).