Samantha baby bump Instagram post
- ಬೇಬಿ ಬಂಪ್‌ನ ತಾಜಾ ನೋಟವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ನಟಿ ಸಮಂತಾ ರುತ್ ಪ್ರಭು.
- ನನ್ನ ಸಿಕ್ಸ್-ಪ್ಯಾಕ್. ನಿಮ್ಮನ್ನು ಮತ್ತೆ ಭೇಟಿಯಾಗುವೆ ಎಂದು ಪೋಸ್ಟ್ ಹಂಚಿಕೊಂಡ ಸಮಂತಾ
- ಮಾ ಇಂಟಿ ಬಂಗಾರಂ ಚಿತ್ರದ ಯಶಸ್ಸಿನ ಬಳಿಕ ಮಾತೃತ್ವದ ರಜೆ ತೆಗೆದುಕೊಳ್ಳಿವ ಬಗ್ಗೆ ಮಾಹಿತಿ ಕೊಟ್ಟಿದ್ದ ಸಮಂತಾ
Samantha baby bump Instagram post: ಮಾ ಇಂಟಿ ಬಂಗಾರಂ ಸಕ್ಸಸ್ ಮೀಟ್ನಲ್ಲಿ ನಟಿ ಸಮಂತಾ ಅವರು ಸಾರಿ ನಾನು ಮತ್ತೊಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೆರಿಗೆ ರಜೆ ಬಗ್ಗೆ ಪ್ರಸ್ತಾಪಿಸಿದ್ದರು. ಆ ಬೆನ್ನಲ್ಲೇ ಇನ್ಸ್ಟಾಗ್ರಾಮ್ನಲ್ಲಿ ಕ್ಯೂಟ್ ಆಗಿ ತಮ್ಮ ಬೇಬೆ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ನನ್ನ ಸಿಕ್ಸ್-ಪ್ಯಾಕ್
ಇದೇ ನನ್ನ ಸಿಕ್ಸ್-ಪ್ಯಾಕ್. ಮತ್ತೆ ಸಿಗೋಣ ಎಂದು ಅತ್ಯಂತ ತಮಾಷೆಯಾಗಿ ಬರೆದುಕೊಂಡು ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಕಾಮೆಂಟ್ ಸೆಕ್ಷನ್‌ನಲ್ಲಿ ಅಭಿನಂದನೆಗಳು ಮತ್ತು ಹಾರ್ಟ್ ಎಮೋಜಿಗಳ ಮಹಾಪೂರವೇ ಹರಿದುಬರುತ್ತಿದೆ.
ಸಕ್ಸಸ್ ಮೀಟ್ನಲ್ಲಿ ನಟಿ ಹೇಳಿದ್ದೇನು?
ಮಾ ಇಂಟಿ ಬಂಗಾರಂ ಸಿನಿಮಾಗೆ ಸಾಕಷ್ಟು ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾದಿಂದ ಮತ್ತೆ ಬ್ರೇಕ್ ತೆಗೆದುಕೊಳ್ಳಬೇಡಿ ಎಂದು ಪತ್ರಕರ್ತರೊಬ್ಬರು ಕೇಳಿಕೊಂಡರು ಈ ವೇಳೆ ಮಾತನಾಡಿದ ಅವರು, ಗಾಯ್ಸ್ ಸಾರಿ ನಾನು ಸಿನಿಮಾದಿಂದ ಮತ್ತೊಂದು ಬ್ರೇಕ್ ತೆಗೆದುಕೊಂಡು ಮರಳಿ ಬರುತ್ತೇನೆ. ಹೆಚ್ಚೆಚ್ಚು ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತೇನೆ. ಸದ್ಯ ನಾನು ಹೆರಿಗೆ ರಜೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು.
ನಿರ್ದೇಶಕಿ ನಂದಿನಿ ರೆಡ್ಡಿ ಅವರೊಂದಿಗೆ ಸಮಂತಾ ಅವರು ಕೆಲಸ ಮಾಡಿರುವ ಎರಡನೇ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ ಅವರು ನಟಿಸಿದ್ದ ಓ ಮೈ ಬೇಬಿ ಸಾಕಷ್ಟು ಹಿಟ್ ಕಂಡಿತ್ತು. ಸಮಂತಾ ಅವರು ಇಲ್ಲಿಯವರೆಗೂ ನಟಿಸಿರುವ ಸಿನಿಮಾಗಳಾದ ರಂಗಸ್ಥಳಂ, ಈಗ, ಸನ್ ಆಫ್ ಸತ್ಯಮೂರ್ತಿ ಸೇರಿದಂತೆ ನಾನಾ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲವೂ ಹಿಟ್ ಕಂಡಿವೆ. ಶುಭಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಅವರು ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದರು. ಆ ಮೂಲಕ ನಿರ್ಮಾಪಕಿಯಾಗಿ ಹೊರಹೊಮ್ಮಿದ್ದಾರೆ.
ಸಮಂತಾ ಮತ್ತು ರಾಜ್ ನಿಡಿಮೋರು ಮದುವೆ
ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ಅವರು ಡಿಸೆಂಬರ್ 1, 2025 ರಂದು ಕೊಯಮತ್ತೂರಿನ ಸದ್ಗುರುಗಳ ಇಶಾ ಫೌಂಡೇಶನ್‌ನಲ್ಲಿ ನಡೆದ ಆಪ್ತರ ಸಮ್ಮುಖದ ಸಮಾರಂಭದಲ್ಲಿ ವಿವಾಹವಾಗಿದ್ದರು. ಈ ದಂಪತಿಗಳು ಮೊದಲು ಪ್ರಸಿದ್ಧ ವೆಬ್ ಸರಣಿ 'ದಿ ಫ್ಯಾಮಿಲಿ ಮ್ಯಾನ್ 2' ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ನಂತರ 'ಸಿಟಾಡೆಲ್: ಹನಿ ಬನ್ನಿ' ಮತ್ತು ಈಗ 'ಮಾ ಇಂಟಿ ಬಂಗಾರಂ' ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ಅವರು ನೆಟ್‌ಫ್ಲಿಕ್ಸ್‌ನ 'ರಕ್ತ್ ಬ್ರಹ್ಮಾಂಡ್' ಸರಣಿಗಾಗಿ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಈ ಸರಣಿಯನ್ನು ರಾಜ್ ಅವರು ತಮ್ಮ ಆಪ್ತ ಸಹಯೋಗಿ ಡಿಕೆ ಅವರೊಂದಿಗೆ ಜೊತೆಯಾಗಿ ಬರೆದಿದ್ದಾರೆ.