Rajinikanth Jailer 2  
ಕಾಲಿವುಡ್

ರಜನೀಕಾಂತ್​ ಫ್ಯಾನ್ಸ್​ಗೆ ಬ್ಯಾಡ್​ ನ್ಯೂಸ್;​ Jailer 2 ಸಿನಿಮಾ ಬಿಡುಗಡೆ ಡೇಟ್​ ಮತ್ತೆ ಮುಂದೂಡಿಕೆ, ಎಂದು ರಿಲೀಸ್ ಆಗಲಿದೆ?

ಪ್ರಮುಖ ಮುಖ್ಯಾಂಶಗಳು

  • ರಜನೀಕಾಂತ್​ ನಟನೆಯ ಜೈಲರ್​2 ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೆ.
  • ಸೆಪ್ಟೆಂಬರ್ 11ರಂದು ಥಿಯೇಟರ್​​ನಲ್ಲಿ ರಿಲೀಸ್ ಆಗಲಿರುವ ತಲೈವಾ ಸಿನಿಮಾ.
  • ಪೋಸ್ಟ್​ ಪ್ರೊಡಕ್ಷನ್ ಕೆಲಸ ಬಾಕಿ ಇರುವ ಕಾರಣ ಸಿನಿಮಾ ಸೆಪ್ಟೆಂಬರ್​ನಲ್ಲಿ ರಿಲೀಸ್ ಆಗಲಿದೆ.
Rajinikanth Jailer 2: ಜೈಲರ್​​ ಸಿನಿಮಾದ ಮುಂದುವರೆದ ಭಾಗವಾದ ಜೈಲರ್​2( Jailer 2 ) ಬಿಡುಗಡೆ ದಿನಾಂಕದ ಬಗ್ಗೆ ಸಿನಿಮಾ ತಂಡ ಬಿಗ್​ ಅಪಡೇಟ್​ವೊಂದನ್ನು ಕೊಟ್ಟಿದೆ. ಸೂಪರ್​ ಸ್ಟಾರ್​ ರಜನೀಕಾಂತ್​ ನಟನೆಯ, ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಆಕ್ಷನ್​​ ಕಾಮಿಡಿ ಸಿನಿಮಾವು ನಿಗದಿತ ದಿನಾಂಕಕ್ಕಿಂತ ಕೊಂಚ ತಡವಾಗಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ?

ಜೈಲರ್​2 ಸಿನಿಮಾವು ಆಗಸ್ಟ್​​ನಲ್ಲಿ ರಿಲೀಸ್ ಆಗಲಿದೆ ಎನ್ನುವ ವರದಿಯಾಗಿತ್ತು. ಸೂಪರ್​ ಸ್ಟಾರ್​ ರಜನೀಕಾಂತ್​ ಅವರು ತಮ್ಮ ಭಾಗದ ಶೂಟಿಂಗ್​ ಮುಗಿಸಿದ್ದಾರೆ. ಆದರೆ, ಪೋಸ್ಟ್ ಪ್ರೊಡಕ್ಷನ್​ ಕೆಲಸ ಬಾಕಿ ಇರುವ ಕಾರಣ ಇದೇ ವರ್ಷದ ಗಣೇಶ ಹಬ್ಬದಂದು ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕಮ ಆಂಧ್ರಪ್ರದೇಶ, ಗೋವಾದಲ್ಲಿ ಅಬ್ಬರಿಸಲಿದೆ.
ಸೆಪ್ಟೆಂಬರ್ 11ರಂದು ರಿಲೀಸ್
ಜೈಲರ್​ 2 ಸಿನಿಮಾದಲ್ಲಿ ಬಿಡುಗಡೆ ದಿನಾಂಕವನ್ನು ಸಿನಿಮಾ ತಂಡ ಅಂತಿಮಗೊಳಿಸಿದ್ದು, ಈ ಪ್ಯಾನ್​ ಇಂಡಿಯಾ ಸಿನಿಮಾ 2026 ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆಯಾಲಿದೆ ಎಂದು ಚಿತ್ರದ ನಿರ್ಮಾಣದ ಹೊಣೆಯೊತ್ತ ಸನ್​ ಪಿಕ್ಚರ್​ ಅಧಿಕೃತಗೊಳಿಸಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಇರುವ ಕಾರಣ ರಜೆಯ ದಿನ ಸೂಪರ್​ ಸ್ಟಾರ್​ ಅಭಿಮಾನಿಗಳು ಥಿಯೇಟರ್​ಗೆ ಲಗ್ಗೆ ಇಡುತ್ತಾರೆ. ಇದು ಶುಭದಿನವೂ ಹೌದು ಎಂದು ಸನ್​ಪಿಕ್ಚರ್ಸ್​ ಹೇಳಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
2023ರಲ್ಲಿ ರಿಲೀಸ್ ಆಗಿದ್ದ ಜೈಲರ್​ ಸಿನಿಮಾ ಪ್ಯಾನ್​ ಇಂಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆರು ನೂರು ಕೋಟಿ ಗಳಿಕೆ ಕಂಡಿತ್ತು. ಇದಕ್ಕೆ ಅನಿರುದ್ಧ ಸಂಗೀತ ನಿರ್ದೇಶಿಸಿದ್ದರು. ತಮನ್ನಾ ಹೆಜ್ಜೆ ಹಾಕಿದ್ದ ನುವ್ವು ಕಾವಲಯ್ಯ ಹಾಡು ಸಖತ್​ ಫೇಮಸ್​ ಕಂಡಿತ್ತು. ಇದರ ಮತ್ತೊಂದು ಭಾಗಾವಾದ ಜೈಲರ್ 2ದಲ್ಲಿ ಶಿವರಾಜ್​ ಕುಮಾರ್​, ಮೋಹನ್​ ಲಾಲ್, ನಂದಮೂರಿ ಬಾಲಕೃಷ್ಣ ಸೇರಿದಂತೆ ದಕ್ಷಿಣ ಚಿತ್ರರಂಗದ ಘಟಾನುಘಟಿ ಸಿನಿ ತಾರೆಯರು ಮಿಂಚಲಿದ್ದಾರೆ. ಈ ಸಿನಿಮಾ ಸದ್ಯ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳಲು ಸಜ್ಜಾಗುತ್ತಿದೆ, (ಏಜೆನ್ಸೀಸ್).