- ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಯನತಾರಾ, ಶಿವ ವಿಘ್ನೇಶನ್
- ಎಲ್ಐಕೆ ಸಿನಿಮಾ ರಿಲೀಸ್ಗೂ ಮುನ್ನ ಟೆಂಪಲ್ ರನ್
- ಏ.10ರಂದು ರಿಲೀಸ್ ಆಗಲಿರುವ ಲವ್ ಇನ್ಶುರೆನ್ಸ್ ಕಂಪನಿ ಸಿನಿಮಾ
LIK Cinema: ವಿಘ್ನೇಶ್ ಶಿವನ್ ನಿರ್ದೇಶನದ ಪ್ರದೀಪ್ ರಂಗನಾಥನ್ ಅಭಿನಯದ Love Insurance Kompany (LIK) ಸಿನಿಮಾ ದೇಶದಾದ್ಯಂತ ರಿಲೀಸ್ ಆಗಲೂ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಅದಕ್ಕೂ ಮುನ್ನವೇ ನಯನತಾರ ಮತ್ತು ವಿಘ್ನೇಶ್ ಶಿವನ್ ಟೆಂಪಲ್ ರನ್ ನಡೆಸಿರುವ ವಿಡಿಯೋಗಳು ಎಕ್ಸ್ನಲ್ಲಿ ಹರಿದಾಡುತ್ತಿದೆ.
ಹೌದು ನಟಿ ನಯನತಾರ ಮತ್ತು ಚಲನಚಿತ್ರ ನಿರ್ಮಾಪಕ ವಿಘ್ನೇಶನ್ ಅವರು ಆಂಧ್ರದ ಪ್ರಸಿದ್ಧ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಮಧ್ಯೆ ಅವರು ಧರಿಸಿದ್ದ ಸಾಂಪ್ರಾದಾಯಿಕ ಉಡುಗೆ ಫ್ಯಾನ್ಸ್ನ ಗಮನ ಸೆಳೆಯಿತು.
ಗಮನ ಸೆಳೆದ ಡ್ರೆಸ್ಸಿಂಗ್ ಸೆನ್ಸ್
ತಿರುಪತಿ ದರ್ಶನ ಪಡೆಯಲು ನಯನತಾರಾ ದಂಪತಿ ಸಾಲಿನಲ್ಲಿ ನಿಂತಿದ್ದಾರೆ, ವಿಘ್ನೇಶ್ ಶಿವನ್ ಅವರು ಕೇಸರಿಯ ರೇಷ್ಮೆ ಜುಬ್ಬಾ ಧರಿಸಿದ್ದರೆ, ನಯನತಾರಾ ಅವರು ಬಿಳಿ ಕುರ್ತಾಗೆ ಹಸಿರು ದುಪ್ಪಟ್ಟ ಧರಿಸಿ ಗಮನ ಸೆಳೆದರು. ದೇವಸ್ಥಾನದ ಒಳಗೆ ಪ್ರವೇಶಿಸುವಾಗ ತಮ್ಮ ಅಭಿಮಾನಿ ದೇವರುಗಳಿಗೆ ಕೈ ಮುಗಿದು ನಮಸ್ಕರಿಸಿರುವದು ಮತ್ತಷ್ಟು ಅವರನ್ನು ಮೆಚ್ಚಿಕೊಳ್ಳುವಂತೆ ಮಾಡಿದೆ.
ಎಲ್ಐಕೆ ಸಿನಿಮಾ ಏನಿದರ ವಿಶೇಷತೆ?
ಏಪ್ರಿಲ್ 10ರಂದು ರಿಲೀಸ್ಗೆ ಸಜ್ಜಾಗಿರುವ ಸಿನಿಮಾ ಒಂದು ವೈಜ್ಞಾನಿಕ ಕಾಲ್ಪನಿಕ ಪ್ರಣಯ ಮನರಂಜನಾ ಕತೆಯ ಹಂದರವನ್ನು ಹೊಂದಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸಿದ್ದರೆ, ಪ್ರದೀಪ್ ರಂಗನಾಥನ್ ಹಿರೋ ಆಗಿ ಮಿಂಚಲು ಮುಂದಾಗಿದ್ದಾರೆ. ಇನ್ನು ಎಸ್ಜೆ ಸೂರ್ಯ, ಗೌರಿ ಕಿಶನ್, ಯೋಗಿ ಬಾಬು, ಸೀಮನ್,ಮಾಳವಿಕಾ ಬಣ್ಣ ಹಚ್ಚಿದ್ದಾರೆ.
2040ರ ಹೊತ್ತಿಗೆ ವಿಮಾ ಕಂಪನಿಗಳು ಪ್ರೀತಿಗಾಗಿಯೂ ಒಂದು ಇನ್ಶುರೆನ್ಸ್ ತೆರೆಯಲಾಗುತ್ತದೆ. ಹಳೆಯ ಶೈಲಿಯ ಪ್ರೀತಿಯ ನಂಬಿ ಲವ್ ಅಪ್ಲಿಕೇಶನ್ ವಿರುದ್ಧ ಹೋರಾಡುವ ಕತೆ ಇದಾಗಿದೆ. ಮೊದಲು ಈ ಸಿನಿಮಾ ಟೈಟಲ್LIC ಎಂದು ಇರಿಸಲಾಗಿತ್ತು. ಆದರೆ ಇದು ಲೈಫ್ ಇನ್ಶುರೆನ್ಸ್ ಕಾರ್ಪೋರೇಶನ್ ಎಂದು ಬಿಂಬಿಸುತ್ತದೆ ಎಂದು ನೋಟಿಸ್ ಜಾರಿ ಮಾಡಲಾಗಿತ್ತು. ನಂತರ ಚಿತ್ರತಂಡವು LIK ಎಂದು ಸಿನಿಮಾದ ಹೆಸರನ್ನು ಬದಲಿಸಿತು.
ಮೇಯಲ್ಲಿ ಓಟಿಟಿನಲ್ಲಿ ಸಿನಿಮಾ ರಿಲೀಸ್?
ಇದರ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಮೇಯಲ್ಲಿ ಓಟಿಟಿಗೆ ಬರುವ ಸಾಧ್ಯತೆ ಇದೆ, (ಏಜೆನ್ಸೀಸ್).