ಕಾಲಿವುಡ್

"ಮೂಕುತಿ ಅಮ್ಮ" ನಾಗಿ ಲೇಡಿ ಸೂಪರ್​ಸ್ಟಾರ್​! Nayanthara

Nayanthara: ಲೇಡಿ ಸೂಪರ್​​ ಸ್ಟಾರ್​ ಎಂದೇ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಖ್ಯಾತಿ ಗಳಿಸಿರುವ ನಟಿ ಎಂದರೆ ಅದು ನಯನತಾರಾ ಆಗಿದ್ದಾರೆ. ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಗೂ ಬಾಲಿವುಡ್​ನಲ್ಲಿ ಕೂಡ ನಟಿಸಿರುವ ನಯನತಾರಾ, ಈಗ ಮೂಕುತಿ ಅಮ್ಮನ್​ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆಯಾಗುತ್ತಿದ್ದು, ನಟಿ ನಯನತಾರಾ ಕಪ್ಪು ಬಣ್ಣದ ಸೀರೆಯಲ್ಲಿ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದ್ದು, ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ