ನಟಿ ಕಯಾದು ಲೋಹರ್​  
ಕಾಲಿವುಡ್

ಎಲ್ಲರು ನನ್ನನ್ನೇಕೆ ಟಾರ್ಗೆಟ್​ ಮಾಡ್ತಿದ್ದಾರೆ: ಕ್ಯಾಮೆರಾ ಮುಂದೆ ಕಣ್ಣೀರಿಟ್ಟ ಡ್ರ್ಯಾಗನ್​ ಬ್ಯೂಟಿ ಕಯಾದು! Kayadu Lohar

ಪ್ರಮುಖ ಮುಖ್ಯಾಂಶಗಳು

  • ಕಲಾವಿದರು ಹೊಗಳಿಕೆಯನ್ನು ಮಾತ್ರವಲ್ಲದೆ ಟೀಕೆಯನ್ನೂ ಕೂಡ ಎದುರಿಸಬೇಕಾಗುತ್ತದೆ
  • ಹೊಗಳಿಕೆಯನ್ನು ಖುಷಿಯಿಂದ ಸ್ವೀಕರಿಸುವ ಕಲಾವಿದರು ಟೀಕೆಗಳನ್ನು ಸಹಿಸಲ್ಲ
  • ನಟಿ ಕಯಾದು ಲೋಹರ್​ ಪರಿಸ್ಥಿತಿ ಕೂಡ ಇದೇ ರೀತಿ ಇದೆ
  • ಎಲ್ಲರು ನನ್ನನ್ನೇಕೆ ಟಾರ್ಗೆಟ್​ ಮಾಡ್ತಿದ್ದಾರೆ ಎಂದು ಕಣ್ಣೀರಿಟ್ಟ ಡ್ರ್ಯಾಗನ್​ ಬ್ಯೂಟಿ
Kayadu Lohar : ಸಿನಿಮಾ ರಂಗದ ಕಲಾವಿದರು ಹೊಗಳಿಕೆಯನ್ನು ಮಾತ್ರವಲ್ಲದೆ ಟೀಕೆಯನ್ನೂ ಕೂಡ ಎದುರಿಸಬೇಕಾಗುತ್ತದೆ. ಹೊಗಳಿಕೆಯನ್ನು ತುಂಬಾ ಖುಷಿಯಿಂದ ಸ್ವೀಕರಿಸುವ ಕಲಾವಿದರು ಟೀಕೆಗಳನ್ನು ಮಾತ್ರ ಸಹಿಸಿಕೊಳ್ಳುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ನಟಿ ಕಯಾದು ಲೋಹರ್​ ಪರಿಸ್ಥಿತಿಯೂ ಇದೇ ರೀತಿ ಇದೆ.
ನಟಿ ಕಯಾದು ಲೋಹರ್​ ಹೆಸರು ಇತ್ತೀಚಗೆ ಸಾಕಷ್ಟು ಸದ್ದು ಮಾಡುತ್ತಿದೆ. ಡ್ರ್ಯಾಗನ್​ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಕಯಾದು ಖ್ಯಾತಿ ಹೆಚ್ಚಿದೆ. ಫಾಲೋವರ್ಸ್​ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಹಾಟ್​​ ಬ್ಯೂಟಿ 2021ರಲ್ಲಿ ತೆರೆಕಂಡ ಕನ್ನಡ ಸಿನಿಮಾ ಮುಗಿಲ್​ಪೇಟೆ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರಗಳು ಗಮನ ಸೆಳೆಯದಿದ್ದರೂ, ನಟ ಪ್ರದೀಪ್ ರಂಗನಾಥನ್ ಜೊತೆಗೆ ನಟಿಸಿದ ಡ್ರ್ಯಾಗನ್, ಕಯಾದು ಲೋಹರ್ ಅವರ ಸಿನಿ ಜೀವನವನ್ನೇ ಬದಲಿಸಿದೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ
ಇತ್ತೀಚೆಗೆ, ನಟಿಯೊಬ್ಬರ ಬಾಡಿ ಶೇಮಿಂಗ್​ ಕುರಿತಾದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಕಯಾದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ, ಅವರ ಹಿಂದಿನ ಘಟನೆಯನ್ನು ನೆನೆದು ಅನೇಕ ಮಂದಿ ಅವರನ್ನು ಟೀಕಿಸುತ್ತಿದ್ದಾರೆ. ಇದರಿಂದ ಮನನೊಂದಿರುವ ಕಯಾದು, ನನ್ನನ್ನೇಕೆ ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಬೇಸರ ಹೊರಹಾಕಿದ್ದಾರೆ.
ನನ್ನ ವಿರುದ್ಧ ಮಾಡುತ್ತಿರುವ ಟೀಕೆಗಳು ತುಂಬಾ ನೋವಿನಿಂದ ಕೂಡಿದೆ. ನಾನು ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದೇನೆ. ನನ್ನ ಬೆನ್ನ ಹಿಂದೆ ಟೀಕಿಸಿದರೂ ಅಥವಾ ನನ್ನ ಬಗ್ಗೆ ಕೆಟ್ಟದಾಗಿ ಭಾವಿಸಿದರೂ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತದೆ. ಎಲ್ಲರು ನನ್ನನ್ನೇಕೆ ಟಾರ್ಗೆಟ್​ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಕಯಾದು ಬೇಸರ ಹೊರ ಹಾಕಿದರು.

ಏನಿದು ವಿವಾದ?

ತಮಿಳುನಾಡಿನ ರಾಜ್ಯ ನಿಯಂತ್ರಿತ ಮದ್ಯ ಕಂಪನಿಯಾದ TASMACಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಕೆಲವು ತಿಂಗಳ ಹಿಂದೆ ಈ ತನಿಖೆಯಲ್ಲಿ ಕಯಾದು ಲೋಹರ್ ಹೆಸರು ಕೂಡ ಕೇಳಿಬಂದಿತ್ತು. ಈ ಭ್ರಷ್ಟಾಚಾರ ಪ್ರಕರಣದಲ್ಲಿ ಕಯಾದು ಲೋಹರ್​ಗೆ ಏನಾದರೂ ಸಂಬಂಧವಿದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. TASMAC ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳು ನಟಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆರೋಪಿಗಳು ಆಯೋಜಿಸಿದ್ದ ರಾತ್ರಿ ಪಾರ್ಟಿಗೆ ಕಯಾದು 35 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಕಯಾದು ಮೇಲೆ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಯಾದು ಅವರು ತಮಿಳಿನಲ್ಲಿ ನಟ ಅಥರ್ವ ಜೊತೆ 'ಇದಯಂ ಮುರಳಿ' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಅದೇ ರೀತಿ, ಜಿವಿ ಪ್ರಕಾಶ್ ಜೊತೆ 'ಇಮ್ಮಾರ್ಟಲ್' ಎಂಬ ಚಿತ್ರ ನಿರ್ಮಾಣ ಹಂತದಲ್ಲಿದೆ. ಅಲ್ಲದೆ, ನಟ ಸಿಂಬು ಜೊತೆ ಒಂದು ಚಿತ್ರದಲ್ಲಿ ನಟಿಸಲಿದ್ದಾರೆ, (ಏಜೆನ್ಸೀಸ್​).