ನಟಿ ತ್ರಿಷಾ ಕೃಷ್ಣನ್​  
ಕಾಲಿವುಡ್

'ಕರುಪ್ಪು' ಕೊನೆಯ ಚಿತ್ರ... ವಿವಾದಗಳ ಬೆನ್ನಲ್ಲೇ ತಮಿಳು ಚಿತ್ರರಂಗಕ್ಕೆ ತ್ರಿಷಾ ಕೃಷ್ಣನ್ ಗುಡ್​ಬೈ!?

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣದಲ್ಲಿ ವಿಜಯ್​-ತ್ರಿಷಾ ದೊಡ್ಡ ಬಿರುಗಾಳಿ
  • ವದಂತಿಗಳ ಭರಾಟೆಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿದ ನಟಿ ತ್ರಿಷಾ
  • ಸೂರ್ಯ ಕರುಪ್ಪು ತ್ರಿಷಾ ಕೃಷ್ಣನ್​ ಅವರ ಕೊನೆಯ ಸಿನಿಮಾ ಎನ್ನಲಾಗಿದೆ
  • ಟ್ರೋಲ್​ರ್​ಗಳಿಗೆ ಚಮಕ್​ ಕೊಟ್ಟ ಸೌತ್ ಬ್ಯೂಟಿ
ಚೆನ್ನೈ: ತಮಿಳು ಚಿತ್ರರಂಗದ​ ಸೂಪರ್​ ಸ್ಟಾರ್​ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ (Vijay-Thrisha) ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸುತ್ತಿದೆ. ಇವರಿಬ್ಬರ ಡಿವೋರ್ಸ್​ಗೆ ಮೂಲ ಕಾರಣವೇ ನಟಿ ತ್ರಿಷಾ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಪೋಸ್ಟ್‌ಗಳು ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ. ಇಲ್ಲಿಯವರೆಗೂ ಇದ್ಯಾವುದಕ್ಕೂ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದ ಸ್ಟಾರ್​ ಜೋಡಿ, ಇದೀಗ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಪ್ರತ್ಯಕ್ಷವಾಗಿರುವುದು ಸದ್ಯ ವದಂತಿಗಳೇ ಸತ್ಯ ಎಂಬುದನ್ನು ಒತ್ತಿ ಹೇಳುತ್ತಿವೆ.

ಒಂದೇ ಕಾರಿನಲ್ಲಿ, ಜತೆಗೆ ಹೆಜ್ಜೆ

ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದೇ ತಡ ತ್ರಿಷಾ ಹೆಸರು ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಈ ಹಿಂದೆಯೂ ಹಲವರು ಬಾರಿ ದಳಪತಿ ಹೆಸರಿನೊಂದಿಗೆ ಕೇಳಿಬಂದ ಸ್ಟಾರ್ ನಟಿಯ ಹೆಸರು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದು ಸಾಕಷ್ಟು ಆರೋಪ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ಅಂದಹಾಗೆ, ವಿಜಯ್​ ಮತ್ತು ತ್ರಿಷಾ ನಡುವೆ ಲವ್​ ಅಫೇರ್​ ಇದೆ ಅನ್ನೋ ಚರ್ಚೆ ಇಂದಿನದ್ದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ನಡೆಯುತ್ತಾ ಬರುತ್ತಿದೆ.

ಟ್ರೋಲ್​ಗಳಿಗೆ ಕ್ಯಾರೇ ಎನ್ನದ ಚೆಲುವೆ

ಸಂಗೀತ ವಿಚ್ಛೇದನ ನೀಡಲು ತ್ರಿಷಾನೇ ಕಾರಣ ಎಂಬ ಆರೋಪಗಳ ಬೆನ್ನಲ್ಲೇ ತ್ರಿಷಾ ಮತ್ತು ವಿಜಯ್​ ಮದುವೆ ಸಮಾರಂಭಕ್ಕೆ ಒಟ್ಟಿಗೆ ಕಾರಿನಲ್ಲಿ ಬಂದಿಳಿದಿದ್ದಲ್ಲದೇ, ಜೊತೆಯಲ್ಲೇ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಇಷ್ಟೆಲ್ಲ ಬೆಂಕಿ ಹತ್ತಿ ಉರಿಯುತ್ತಿರುವ ಮಧ್ಯೆಯೇ ಅವರಿಬ್ಬರು ಜೊತೆಯಲ್ಲಿ ಪ್ರತ್ಯಕ್ಷವಾಗಿರುವುದು ಹರಿದಾಡುತ್ತಿರುವ ವಿಷಯಗಳು ಸತ್ಯ ಎಂಬುದನ್ನು ಸ್ಪಷ್ಟಪಡಿಸುತ್ತಿವೆ ಎಂದು ನೆಟ್ಟಿಗರು ಅಭಿಪ್ರಾಯಿಸುತ್ತಿದ್ದಾರೆ. ಇದರಿಂದ ಕೆಲವರು, ನಟಿಯನ್ನು ಜಾಲತಾಣಗಳಲ್ಲಿ ಟ್ರೋಲ್​ ಮಾಡಿದ್ದಾರೆ.

'ಕರುಪ್ಪು' ಕೊನೆಯ ಚಿತ್ರ

ಇದೆಲ್ಲದರ ನಡುವೆ ತ್ರಿಶಾ ಶೀಘ್ರದಲ್ಲೇ ಚಿತ್ರರಂಗದಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಗಳೂ ಕೇಳಿಬಂದಿವೆ. ಇದಕ್ಕೆ ನಟ, ನಿರ್ದೇಶಕ ಮತ್ತು ಪತ್ರಕರ್ತ ಲಕ್ಷ್ಮಣನ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಮಾತನಾಡಿರುವ ಅವರು, ನಟಿಯ ಮುಂದಿನ ಚಿತ್ರ ಸೂರ್ಯ ಅಭಿನಯದ ಬಹುನಿರೀಕ್ಷಿತ 'ಕರುಪ್ಪು'. ಈ ಚಿತ್ರ ಮೇ.14ರಂದು ತೆರೆಗೆ ಬರಲಿದೆ. ಪ್ರಸ್ತುತ, ತ್ರಿಷಾ ಯಾವುದೇ ಹೊಸ ಚಿತ್ರಗಳಿಗೆ ಸಹಿ ಹಾಕುತ್ತಿಲ್ಲ ಎಂಬ ಮಾತುಗಳು ಒಂದಷ್ಟು ನಿರ್ಮಾಪಕರಿಂದ ಕೇಳಿಬಂದಿರುವುದು ನಿಜವಿರಬಹುದು ಎಂದು ಹೇಳಿದ್ದಾರೆ.

ಟ್ರೋಲರ್​ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ

ನಾನು ಚಿತ್ರರಂಗಕ್ಕೆ ಗುಡ್​ಬೈ ಹೇಳಿದ್ದೀನಿ. ಒಬ್ಬ ಶ್ರೀಮಂತ ಉದ್ಯಮಿಯನ್ನು ಮದುವೆ ಆಗಿದ್ದೀನಿ. ನಾಲ್ವರು ಮಕ್ಕಳಿದ್ದಾರೆ. ಅವರಿಗೆ ನಿನ್ನೆಯಷ್ಟೇ ಎರಡು ವರ್ಷ ತುಂಬಿದೆ. ಇದು ಸರಿ ಇದ್ಯಾ? ಅಥವಾ ಇನ್ನೂ ಏನಾದರೂ ಸೇರಿದೆ ಬಿಟ್ಟಿದ್ದೀವಾ? ನೋಡಿ ಹೇಳಿ ಎಂದು ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಥೆ ಕಟ್ಟುವ ಟ್ರೋಲರ್​ಗಳಿಗೆ ತ್ರಿಷಾ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರುವ ತ್ರಿಷಾ, ಇತ್ತೀಚೆಗೆ ಊಹಾಪೋಹಗಳು ಖಂಡಿತ ನಿಜ ಎಂದು ಹೇಳುವುದಕ್ಕೆ ಹೊಸ ಪೋಸ್ಟ್​ವೊಂದನ್ನು ಹಂಚಿಕೊಂಡರು. ಪ್ರೀತಿಯೇ ಎಲ್ಲ ಅಲ್ಲದಿದ್ದರೂ, ಅದಿಲ್ಲದೆ ಜೀವನ ಶೂನ್ಯ ಎಂಬ ಅವರ ಪೋಸ್ಟ್​ ಸದ್ಯ ನೆಟ್ಟಿಗರ ಹುಬ್ಬೇರಿಸಿದೆ. ಪ್ರಸ್ತುತ, ವಿಜಯ್​ ದಾಂಪತ್ಯ ಜೀವನ ಮುರಿದುಬಿದ್ದಿದ್ದು, ತಮಿಳುನಾಡು ಚುನಾವಣೆಯಲ್ಲಿ ಸಖತ್ ಬಿಜಿಯಾಗಿದ್ದಾರೆ. ಈ ಮಧ್ಯೆ, ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದು, ಇದು ಯಾವ ಹಂತಕ್ಕೆ ಹೋಗಿ ತಲುಪಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).