- ನಟಿ ಆಂಡ್ರಿಯಾ ಜರೆಮಿಯಾ, ಕಾಲಿವುಡ್ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯವಿರುವ ಹೆಸರು
- ನಾಯಕಿ ಮತ್ತು ಖಳನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಂಡ್ರಿಯಾ
- ನಟಿ ಆಂಡ್ರಿಯಾ ನಟಿಸಿರುವ ಪಿಸಾಸು 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ
- ಸರಸಸಲ್ಲಾಪದ ದೃಶ್ಯಗಳಿವೆ ಹೊರತು ಯಾವುದೇ ನಗ್ನ ದೃಶ್ಯಗಳಿಲ್ಲ ಎಂದ ಆಂಡ್ರಿಯಾ
Andrea Jeremiah : ನಟಿ ಆಂಡ್ರಿಯಾ ಜರೆಮಿಯಾ, ಕಾಲಿವುಡ್ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯವಿರುವ ಹೆಸರು. ನಾಯಕಿ ಮತ್ತು ಖಳನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಂಡ್ರಿಯಾ, ತಮ್ಮ ಬೋಲ್ಡ್ ಲುಕ್ನಿಂದಲೇ ತುಂಬಾ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಆಂಡ್ರಿಯಾ ಗಾಯಕಿಯೂ ಹೌದು. ಸಾಕಷ್ಟು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ತಮಿಳಿನಲ್ಲಿ ಆಯಿರತಿ ಒರುವನ್, ಮಂಗಾತ, ವಿಶ್ವರೂಪಂ, ವಾಡಚೆನ್ನೈ, ತುಪ್ಪರಿವಾಲನ್, ಅನಲ್ ಮೇಲೆ ಪಣಿತುಳಿ, ಅರಮನೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಆಂಡ್ರಿಯಾ ನಟಿಸಿದ್ದಾರೆ.
ತಾಜಾ ಸಂಗತಿ ಏನೆಂದರೆ, ನಟಿ ಆಂಡ್ರಿಯಾ ನಟಿಸಿರುವ ಪಿಸಾಸು 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದು 'ಪಿಸಾಸು' ಚಿತ್ರದ ಎರಡನೇ ಭಾಗವಾಗಿದೆ. ಮೊದಲ ಭಾಗ 2014ರಲ್ಲಿ ಬಿಡುಗಡೆಯಾಗಿ, ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿತು. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಮೈಸ್ಕಿನ್ ನಿರ್ದೇಶಿಸಿದ್ದಾರೆ. ಎರಡನೇ ಭಾಗದ ಚಿತ್ರಕ್ಕೂ ಅವರೇ ನಿರ್ದೇಶಕರು.
ಸದ್ಯ ಎರಡನೇ ಭಾಗ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಸಾಕಷ್ಟು ನಗ್ನ ದೃಶ್ಯಗಳಿವೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಈ ಸಂಬಂಧ ನಟಿ ಆಂಡ್ರಿಯಾ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಸರಸಸಲ್ಲಾಪದ ದೃಶ್ಯಗಳಿವೆ ಹೊರತು ಯಾವುದೇ ನಗ್ನ ದೃಶ್ಯಗಳಿಲ್ಲ ಎಂದು ಸಂದರ್ಶನವೊಂದರಲ್ಲಿ ಆಂಡ್ರಿಯಾ ಸ್ಪಷ್ಟನೆ ನೀಡಿದ್ದಾರೆ.
ಮೈಸ್ಕಿನ್ ಅವರು ಪಿಸಾಸು 2 ಸಿನಿಮಾವನ್ನು ಓರ್ವ ಮಹಿಳೆಯನ್ನು ಕೇಂದ್ರ ಪಾತ್ರವನ್ನಾಗಿಟ್ಟುಕೊಂಡು ಬರೆದಿದ್ದಾರೆ. ಸಿನಿಮಾ ರಂಗಕ್ಕೆ ಅವರೇನು ಹೊಸಬರೇನಲ್ಲ, ಅನುಭವಿ ನಿರ್ದೇಶಕರು. ಬೇರೆ ದಾರಿ ಇಲ್ಲದ ಕಾರಣ ಅವರು ಆ ಇಂಟಿಮಸಿ ದೃಶ್ಯಗಳನ್ನು ಬರೆದಿಲ್ಲ. ಅದು ಉದ್ದೇಶಪೂರ್ವಕವಾಗಿಯೇ ಬರೆಯಲಾಗಿದೆ. ಏಕೆಂದರೆ, ಸಿನಿಮಾಗೆ ಅದು ಬೇಕಿದೆ. ಸಿನಿಮಾಗೆ ಸಂಬಂಧಿಸಿದಂತೆ ಅವರು ಏನೇ ಹೇಳಿದರು ನಾನು ನಂಬಬೇಕಾಗುತ್ತದೆ ಎಂದು ಆಂಡ್ರಿಯಾ ಸ್ಪಷ್ಟಪಡಿಸಿದರು.
ಮೈಸ್ಕಿನ್ ಅವರು ಚಿತ್ರಕಥೆ ಬರೆದಾಗ, ಬಹಳಷ್ಟು ನಗ್ನ ದೃಶ್ಯಗಳಿದ್ದವು. ಆದರೆ, ಚಿತ್ರೀಕರಣದ ಸಮಯದಲ್ಲಿ, ಯಾವುದೋ ಒಂದು ಕಾರಣಕ್ಕಾಗಿ ಅವುಗಳನ್ನು ಕೈಬಿಟ್ಟರು. ಚಿತ್ರದಲ್ಲಿ ಸರಸಸಲ್ಲಾಪಕ್ಕೆ ಸಂಬಂಧಿಸಿದ ಬಹಳಷ್ಟು ದೃಶ್ಯಗಳಿವೆ ಆದರೆ, ಯಾವುದೇ ನಗ್ನತೆ ಇಲ್ಲ ಎಂದು ನಟಿ ಹೇಳಿದರು.
ಅಂದಹಾಗೆ, ಪಿಸಾಸು ಸಿನಿಮಾದ ಮೊದಲ ಭಾಗದಲ್ಲಿ ನಾಗ ಮತ್ತು ಪ್ರಯಾಗ ಮಾರ್ಟಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವು ಭಾರಿ ಹಿಟ್ ಆಗಿತ್ತು. ಕಾನೂನು ಸಮಸ್ಯೆಗಳಿಂದಾಗಿ 'ಪಿಸಾಸು 2' ಸಿನಿಮಾದ ಬಿಡುಗಡೆ ವಿಳಂಬವಾಗುತ್ತಿದೆ, (ಏಜೆನ್ಸೀಸ್).