ಕಾಲಿವುಡ್​ ನಟ ಧನುಷ್​ ಹಾಗೂ ಬಾಲಿವುಡ್​ ನಟಿ ಮೃನಾಲ್​ ಠಾಕೂರ್​ ( Mrunal Thakur ) 
ಕಾಲಿವುಡ್

ಧನುಷ್​ ನನ್ನ ಆ ಒಂದು ಬಯಕೆ ಈಡೇರಿಸಿದ್ರು... ಮೃನಾಲ್​ ಹೇಳಿಕೆಯಿಂದ ಮತ್ತೆ ಮುನ್ನೆಲೆಗೆ ಬಂತು ಮದ್ವೆ ಚರ್ಚೆ! Mrunal Thakur ​

ಪ್ರಮುಖ ಮುಖ್ಯಾಂಶಗಳು

  • ಧನುಷ್ ಮತ್ತು ಮೃನಾಲ್​ ಠಾಕೂರ್ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಲೇ ಇವೆ
  • ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆ ಆಗಲಿದೆ ಎಂಬ ಸುದ್ದಿಗಳು ವೈರಲ್ ಆಗುತ್ತಿವೆ
  • ಆದರೆ, ಮೃನಾಲ್ ಅವರು ಈ ಸುದ್ದಿಯನ್ನು ನಿರಾಕರಿಸಿ, ನಮ್ಮ ನಡುವೆ ಅಂತಹದ್ದೇನೂ ಇಲ್ಲ ಎಂದಿದ್ದಾರೆ
  • ಇತ್ತೀಚೆಗೆ ಧನುಷ್ ಬಗ್ಗೆ ಮೃನಾಲ್​ ಮಾಡಿದ ಕಾಮೆಂಟ್‌ಗಳು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ
Mrunal Thakur : ಕಳೆದ ಕೆಲವು ದಿನಗಳಿಂದ ಕಾಲಿವುಡ್​ ಸೂಪರ್​ ಸ್ಟಾರ್ ಧನುಷ್ ಮತ್ತು ಬಾಲಿವುಡ್ ಬ್ಯೂಟಿ ಮೃನಾಲ್​ ಠಾಕೂರ್ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಲೇ ಇವೆ. ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆ ಆಗಲಿದೆ ಎಂಬ ಸುದ್ದಿಗಳು ವೈರಲ್ ಆಗುತ್ತಿವೆ. ಈ ಸುದ್ದಿಗಳಿಗೆ ಪುಷ್ಠಿ ನೀಡುವಂತೆ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಸಹ ಹೊರಬಂದಿವೆ. ಫೋಟೋಗಳನ್ನು ನೋಡಿದವರು ಇಬ್ಬರ ನಡುವೆ ಲವ್​ ಇರುವುದು ನಿಜ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ, ಮೃನಾಲ್ ಅವರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ನಮ್ಮಿಬ್ಬರ ನಡುವೆ ಅಂತಹದ್ದೇನೂ ಇಲ್ಲ ಎಂದಿದ್ದಾರೆ. ಇಂತಹ ಸುದ್ದಿಗಳನ್ನು ಯಾರು ಸೃಷ್ಟಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಇವೆಲ್ಲ ಕೇವಲ ವದಂತಿಯಷ್ಟೇ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮೃನಾಲ್​ ಸ್ಪಷ್ಟನೆ ನೀಡಿದರು. ಇದರೊಂದಿಗೆ ಇಬ್ಬರ ವಿವಾಹದ ವದಂತಿಗಳಿಗೆ ತೆರೆ ಬಿದ್ದಿತು. ಆದರೆ, ಇತ್ತೀಚೆಗೆ ಧನುಷ್ ಬಗ್ಗೆ ಮೃನಾಲ್​ ಮಾಡಿದ ಕಾಮೆಂಟ್‌ಗಳು ಮತ್ತೊಮ್ಮೆ ಸಿನಿ ಉದ್ಯಮ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಧನುಷ್ ಬಗ್ಗೆ ಮಾತನಾಡಿದ ಮೃನಾಲ್​, ಧನುಷ್ ಅವರಂತಹ ನಟನನ್ನು ನಾನು ಎಂದಿಗೂ ನೋಡಿಲ್ಲ. ನಾನು ಧನುಷ್​ ಅವರ ಅಸುರನ್, ರಾಯನ್, ರಾಮಜಾನ್​, ಕ್ಯಾಪ್ಟನ್ ಮಿಲ್ಲರ್ ಹಾಗೂ ಮಾರಿ ಸೇರಿದಂತೆ ಮುಂತಾದ ಚಿತ್ರಗಳನ್ನು ನೋಡಿದ್ದೇನೆ. ಅಂದಿನಿಂದ, ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ನಾನು ಅಸುರನ್ ಅನ್ನು ಎಷ್ಟು ಬಾರಿ ನೋಡಿದ್ದೇನೆಂದು ತಿಳಿದಿಲ್ಲ. ಅವರು ಕೇವಲ ನಟನಲ್ಲ, ನಿರ್ದೇಶಕ, ಬರಹಗಾರ, ಗೀತರಚನೆಕಾರ ಮತ್ತು ಗಾಯಕ ಕೂಡ. ಇಷ್ಟೊಂದು ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿ ಇರುವುದು ಬಹಳ ಅಪರೂಪ ಎಂದು ಮೃನಾಲ್​ ಹೇಳಿದರು.
ಇತ್ತೀಚೆಗೆ ನಾನು ಅವರ ಹಿಂದಿ ಚಿತ್ರ ತೇರೆ ಇಷ್ಕ್ ಮೈ ಚಿತ್ರೀಕರಣಕ್ಕೆ ಹೋಗಿದ್ದೆ. ಅಲ್ಲಿ ಧನುಷ್ ಅವರನ್ನು ಭೇಟಿಯಾಗಿ ಒಂದು ಬಯಕೆಯನ್ನು ಅವರ ಮುಂದೆ ಹೇಳಿಕೊಂಡೆ. ನನ್ನ 'ಸನ್ ಆಫ್ ಸರ್ದಾರ್ 2' ಚಿತ್ರದ ವಿಶೇಷ ಪ್ರದರ್ಶನಕ್ಕೆ ಬರುವಂತೆ ಕೇಳಿಕೊಂಡೆ. ಧನುಷ್​ ಅವರು ದಿಢೀರನೇ ಬಂದು ನಮ್ಮನ್ನು ಅಚ್ಚರಿಗೊಳಿಸಿದರು ಎಂದು ಮೃನಾಲ್ ಹೇಳಿದ್ದಾತೆ. ಇದೀಗ ಮೃನಾಲ್ ಮಾಡಿದ ಕಾಮೆಂಟ್​ಗಳು ಕಾಲಿವುಡ್​ ಮತ್ತು ಬಾಲಿವುಡ್​ ವಲಯಗಳಲ್ಲಿ ಬಿಸಿ ಚರ್ಚೆಯ ವಿಷಯವಾಗುತ್ತಿವೆ.
ಅಂದಹಾಗೆ, ಮೃನಾಲ್ ಠಾಕೂರ್​ ನಟನೆಯ ಡು ದಿವಾನೆ ಶೆಹೆರ್​ ಮೇನ್​ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ ನಾಯಕನಾಗಿ ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದೆ. ಈ ಚಿತ್ರದ ಪ್ರಚಾರವಾಗಿ ಇತ್ತೀಚೆಗೆ ಸಂದರ್ಶನದಲ್ಲಿ ಭಾಗಿಯಾದ ಸಂದರ್ಭದಲ್ಲಿ ಮೃನಾಲ್​, ಧನುಷ್​ ಬಗ್ಗೆ ಈ ಮೇಲಿನಂತೆ ಮಾತನಾಡಿದ್ದಾರೆ, (ಏಜೆನ್ಸೀಸ್​).