- ನಟಿ ಕೀರ್ತಿ ಸುರೇಶ್ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು
- ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ಕೀರ್ತಿ ನಟಿಸಿಲ್ಲ
- ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿವೆ
- ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ
ಚೆನ್ನೈ : ನಟಿ ಕೀರ್ತಿ ಸುರೇಶ್ ( Keerthy Suresh ) ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ನಟಿಸಿದ್ದಾರೆ. ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ತಮ್ಮ ವೃತ್ತಿಜೀವನದ ಆರಂಭದಲ್ಲಿ ಡಿಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ಈ ಸುಂದರಿ, ಈಗ ಗ್ಲಾಮರಸ್ ಪಾತ್ರಗಳಿಗೂ ಸೈ ಎನ್ನುತ್ತಿದ್ದಾರೆ. ಈ ಬ್ಯೂಟಿ ಬಾಲಿವುಡ್‌ನಲ್ಲಿ ಬಾಬಿ ಜಾನ್ ಚಿತ್ರವನ್ನು ಮಾಡಿದರು. ಇದರಲ್ಲಿ ಸಖತ್ ಬೋಲ್ಡ್ ಆಗಿ ನಟಿಸುವ ಮೂಲಕ ತನ್ನ ಗ್ಲಾಮರ್ ಗಡಿಗಳನ್ನು ಅಳಿಸಿಹಾಕಿದರು. ಇದೀಗ ಯಾವುದೇ ಪಾತ್ರದಲ್ಲೂ ನಟಿಸಲು ರೆಡಿಯಾಗಿದ್ದಾರೆ. ಇದರ ನಡುವೆ ತಮ್ಮ ಬಹುಕಾಲದ ಗೆಳೆಯ ಆಂಟೋನಿ ಥಟ್ಟಿಲ್ ಅವರನ್ನು ಮದುವೆಯಾಗಿಯೂ ಕೀರ್ತಿ ಸುದ್ದಿಯಾದರು. ಸದ್ಯ ದಾಂಪತ್ಯ ಜೀವನದ ಜೊತೆಗೆ ವೃತ್ತಿ ಜೀವನವನ್ನೂ ನಡೆಸುತ್ತಿದ್ದಾರೆ.
ತಾಜಾ ಸಂಗತಿ ಏನೆಂದರೆ, ಕೀರ್ತಿ ಸುರೇಶ್ ಅವರು ಆಹಾರ ಪ್ರಿಯೆ ಅಂತೆ! ಅವರು ಪ್ರತಿಯೊಂದು ಆಹಾರವನ್ನು ಬಹಳ ಪ್ರೀತಿಯಿಂದ ಮತ್ತು ಆನಂದದಿಂದ ಸವಿಯುತ್ತಾರಂತೆ. ಈ ಮಾತನ್ನು ಸ್ವತಃ ಕೀರ್ತಿ ಅವರೇ ಹೇಳಿಕೊಂಡಿದ್ದಾರೆ.
ಕೀರ್ತಿ ಅವರು ಆಹಾರ ಪ್ರಿಯೆಯಾಗಿರುವುದರಿಂದಲೇ ಚಿತ್ರರಂಗಕ್ಕೆ ಬಂದಾಗ, ಅವರು ತುಂಬಾ ದಪ್ಪವಾಗಿ ಕಾಣುತ್ತಿದ್ದರು. ಇತ್ತೀಚೆಗೆ, ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಆದರೆ, ಕೀರ್ತಿ ಸುರೇಶ್‌ಗೆ ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆಹಾರ ಪದ್ಧತಿ. ಈ ಸುಂದರಿ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಡಯೆಟ್ ಮಾಡುವುದು ತುಂಬಾ ಕಷ್ಟ ಎಂದು ಹೇಳಿಕೊಂಡಿದ್ದಾರೆ.
ಆಹಾರದ ಮೇಲಿನ ನನ್ನ ಪ್ರೀತಿಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಆ ವಿಷಯದಲ್ಲಿ ನಾನು ನನ್ನೊಂದಿಗೆ ಸದಾ ಜಗಳವಾಡುತ್ತೇನೆ. ನನ್ನ ದೇಹವನ್ನು ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುವುದು ನನಗೆ ದೊಡ್ಡ ಸವಾಲಾಗಿದೆ. ಆಹಾರ ಕಂಟ್ರೋಲ್ ಮಾಡುವುದು ನನ್ನಿಂದ ಸಾಧ್ಯವೇ ಇಲ್ಲ ಎಂದು ಕೀರ್ತಿ ಹೇಳಿದ್ದಾರೆ. ಸದ್ಯ ಕೀರ್ತಿ ಅವರು ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ, (ಏಜೆನ್ಸೀಸ್).