ಹನ್ಸಿಕಾ ಮೋಟ್ವಾನಿ ವಿಚ್ಛೇದನ ವಿಚಾರ 
ಕಾಲಿವುಡ್

ತಪ್ಪಾದ ರೈಲನ್ನು ಏರಿ ಬಿಟ್ಟಿದ್ದೆ: ನನಗೆ ಅದರ ಬಗ್ಗೆ ಯಾವುದೇ ವಿಷಾದವಿಲ್ಲ; ವಿಚ್ಛೇದನದ ಬಗ್ಗೆ ಮೌನ ಮುರಿದ ಹನ್ಸಿಕಾ ಮೋಟ್ವಾನಿ! Hansika Motwani on Divorce

ಪ್ರಮುಖ ಮುಖ್ಯಾಂಶಗಳು

  • ಹನ್ಸಿಕಾ ಮೋಟ್ವಾನಿ ವಿಚ್ಛೇದನ ವಿಚಾರ
  • ಡಿವೋರ್ಸ್​ ಬಗ್ಗೆ ಮೌನ ಮುರಿದ ಸೌತ್​ ಬ್ಯೂಟಿ
  • ನನಗೆ ಆ ವಿಚಾರದಲ್ಲಿ ಯಾವುದೇ ವಿಷಾದವಿಲ್ಲ ಎಂದ ನಟಿ
ಮುಂಬೈ: ಇತ್ತೀಚಿನ ದಿನಗಳಲ್ಲಿ ಮದುವೆಗಿಂತ ವಿಚ್ಛೇದನದ ಸುದ್ದಿಗಳೇ ಸಾಕಷ್ಟು ಸದ್ದು ಮಾಡುತ್ತಿದ್ದು, ಕೆಲ ತಿಂಗಳ ಹಿಂದೆ ವಿಚ್ಛೇದನ ಪಡೆದಿದ್ದ ಸೌತ್​ ಬ್ಯೂಟಿ ಹನ್ಸಿಕಾ ಮೋಟ್ವಾನಿ (Hansika Motwani on Divorce) ಈಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೌನ ಮುರಿದ್ದಿದ್ದಾರೆ.

ಡಿವೋರ್ಸ ಬಗ್ಗೆ ನಟಿ ಹೇಳಿದ್ದೇನು?

ಇತ್ತೀಚೆಗೆ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಹನ್ಸಿಕಾ, ಕೆಲವೊಬ್ಬರಿಗೆ ಕ್ಲಿಕ್​ ಬೈಟ್​ ಬೇಕಿತ್ತು, ಇನ್ನು ಕೆಲವರಿಗೆ ಮುಖ್ಯಾಂಶ ಬೇಕಿತ್ತು, ಆದರೆ ನಾನು ಅವರ್ಯಾರಿಗೂ ನಾನು ಸ್ಪಷ್ಟಿಕರಣ ನೀಡಿಲ್ಲ, ನೀಡುವುದು ಇಲ್ಲ. ಏಕೆಂದರೆ ನನಗೆ ಯಾವುದೇ ವಿಷಯದ ಬಗ್ಗೆ ವಿಷಾದವಿಲ್ಲ. ನೀವು ತಪ್ಪಾದ ರೈಲನ್ನು ಹತ್ತಿದರೆ ಮೊದಲ ನಿಲ್ದಾಣದಲ್ಲಿ ಇಳಿದುಕೊಳ್ಳುವುದೇ ಉತ್ತಮ ಎಂದು ಅವರು ಹೇಳಿದ್ದಾರೆ.
ಜೀವನಾಂಶ ಬೇಡ ಎಂದ ನಟಿ!
ಈ ವಿಚ್ಛೇದನದ ವಿಶೇಷವೆಂದರೆ, ಹನ್ಸಿಕಾ ಯಾವುದೇ ರೀತಿಯ ಜೀವನಾಂಶವನ್ನು (Alimony) ಕೇಳಿಲ್ಲ. ಈ ಬಗ್ಗೆ ವಕೀಲರು ಸ್ಪಷ್ಟನೆ ನೀಡುತ್ತಾ, ನಮ್ಮ ಕಕ್ಷಿದಾರರು ಯಾವುದೇ ಹಣಕಾಸಿನ ಹಕ್ಕುಗಳನ್ನು ಅಥವಾ ಜೀವನಾಂಶವನ್ನು ಕೇಳಿಲ್ಲ. ಅವರ ಏಕೈಕ ಉದ್ದೇಶ ಗೌರವಯುತವಾಗಿ ಮತ್ತು ಶಾಂತಿಯುತವಾಗಿ ಈ ಸಂಬಂಧವನ್ನು ಮುಕ್ತಾಯಗೊಳಿಸುವುದಾಗಿತ್ತು. ಅವರು ಈಗ ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾಗಳತ್ತ ಗಮನಹರಿಸಲು ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಐಫೆಲ್ ಟವರ್ ಮುಂದೆ ಪ್ರಪೋಸ್​; ನಂತರ ಡಿವೋರ್ಸ್​

ಹನ್ಸಿಕಾ ಮತ್ತು ಸೊಹೇಲ್ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು. ಡಿಸೆಂಬರ್ 2022ರಲ್ಲಿ ಜೈಪುರದ ಸುಂದರ ಮುಂಡೋಟಾ ಫೋರ್ಟ್‌ನಲ್ಲಿ ಇವರ ಮದುವೆ ಸಂಭ್ರಮದಿಂದ ಜರುಗಿತ್ತು. ಅದಕ್ಕೂ ಮುನ್ನ, ಪ್ಯಾರಿಸ್‌ನ ಐಫೆಲ್ ಟವರ್ ಎದುರು ಸೊಹೇಲ್ ಅವರು ಹನ್ಸಿಕಾಗೆ ಪ್ರಪೋಸ್ ಮಾಡಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಹನ್ಸಿಕಾ ಕೂಡ ಈಗ ಮತ್ತು ಎಂದೆಂದಿಗೂ ಎಂದು ಹೇಳುತ್ತಾ ತಮ್ಮ ಪ್ರೀತಿಯನ್ನು ಜಗತ್ತಿಗೆ ಸಾರಿದ್ದರು.
ಆದರೆ, ಕಾಲಕ್ರಮೇಣ ದಂಪತಿಗಳ ನಡುವೆ ಬಿರುಕು ಮೂಡಿದ್ದು, ಇತ್ತೀಚೆಗೆ ಹನ್ಸಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ಅವರ ವಿಚ್ಛೇದನದ ವದಂತಿಗಳಿಗೆ ಪುಷ್ಟಿ ನೀಡಿತ್ತು. ಇದೀಗ ಕಾನೂನುಬದ್ಧವಾಗಿ ಬೇರ್ಪಟ್ಟಿರುವ ಈ ಜೋಡಿ, ಈದೀಗ ಪ್ರತ್ಯೇಕ ದಾರಿಯಲ್ಲಿ ಸಾಗಲು ನಿರ್ಧರಿಸಿದ್ದಾರೆ, (ಏಜನ್ಸೀಸ್​).