ತಮಿಳು ಸಿನಿಮಾ  
ಕಾಲಿವುಡ್

ಸಿನಿಪ್ರಿಯರ ಟೀಕೆಗೆ ಗುರಿಯಾದರೂ ಈ ವರ್ಷ ಕಾಲಿವುಡ್​ಗೆ​ ಹೆಚ್ಚು ಆದಾಯ ತಂದುಕೊಟ್ಟ ಏಕೈಕ ಚಿತ್ರವಿದು!

ಪ್ರಮುಖ ಮುಖ್ಯಾಂಶಗಳು

  • ಈ ವರ್ಷ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಿತ್ರವಿದು
  • ಹಲವು ಸೂಪರ್​ಹಿಟ್​ ಸಿನಿಮಾಗಳ ಪೈಕಿ ಸ್ಟಾರ್​ ನಟನ ಚಿತ್ರವೇ ಅಗ್ರ
  • ನಟ ಅಜಿತ್ ಕುಮಾರ್​​ ಮತ್ತು ರಜಿನಿಕಾಂತ್​ ಚಿತ್ರಗಳು ಮೊದಲ ಎರಡು ಸ್ಥಾನಗಳಲ್ಲಿ
ತಮಿಳುನಾಡು: ಇನ್ನೇನು 2025 ಕಳೆದು ಹೊಸ ವರ್ಷ ಆಗಮನಕ್ಕೆ ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಈ ಮಧ್ಯೆ, 2025ರಲ್ಲಿ ನಡೆದ ಹಲವು ಸಿಹಿ-ಕಹಿ ಕ್ಷಣಗಳನ್ನು ಮೆಲಕು ಹಾಕುತ್ತಿರುವ ಜನರು, 365 ದಿನಗಳಲ್ಲಿ ಏನೆಲ್ಲ ಆಯಿತು? ನಾವೇನು ಕಂಡೆವು ಎಂಬುದನ್ನು ಒಮ್ಮೆ ತಿರುಗಿ ನೋಡುತ್ತಿದ್ದಾರೆ. ಹೀಗಿರುವಾಗ, ಭಾರತೀಯ ಚಿತ್ರೋದ್ಯಮದಿಂದ ಹಲವಾರು ಸಿನಿಮಾಗಳು ಬ್ಲಾಕ್​ಬಸ್ಟರ್​ ಸಾಲಿಗೆ ಸೇರಿದ್ದು, ಒಂದಷ್ಟು ಚಿತ್ರಗಳು ಮಾತ್ರ ಆಯಾ ಚಿತ್ರರಂಗಕ್ಕೆ ಲಾಭ ತಂದುಕೊಟ್ಟಿವೆ. 
ಈ ವರ್ಷ ತಮಿಳು ಚಿತ್ರರಂಗದಲ್ಲಿ ಸ್ಟಾರ್​ ನಟರಿಂದ ಹಿಡಿದು ಹೊಸ ಹೀರೋಗಳ ಚಿತ್ರಗಳು ಉತ್ತಮ ಓಪನಿಂಗ್ ಪಡೆದಿವೆ. ಆದರೆ, ಗಳಿಕೆ ವಿಷಯದಲ್ಲಿ ಹೋಲಿಸಿಕೊಂಡರೆ ಅಷ್ಟಾಗಿ ಕಮಾಲ್​ ಮಾಡಿಲ್ಲ. ಅತಿ ಹೆಚ್ಚು ಲಾಭ ಗಳಿಸಿದ ಸಿನಿಮಾಗಳ ಪೈಕಿ ಕಾಲಿವುಡ್​ನ ಸೂಪರ್​ಸ್ಟಾರ್​ ಚಿತ್ರ ಮಾತ್ರ ಟೀಕೆ, ನೆಗೆಟಿವ್​ ಮಾತುಗಳ ನಡುವೆಯೂ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್​ ಕಂಡಿತು. ಅಷ್ಟಕ್ಕೂ ಆ ಸಿನಿಮಾ ಬೇರಾವುದೂ ಅಲ್ಲ, 'ತಲೈವಾ' ಅಭಿನಯದ 'ಕೂಲಿ'.
ರಜಿನಿಕಾಂತ್ ನಟಿಸಿದ, ಲೋಕೇಶ್ ಕನಕರಾಜ್ ನಿರ್ದೇಶಿಸಿದ 'ಕೂಲಿ', ಜಾಗತಿಕವಾಗಿ 500 ಕೋಟಿ ರೂ.ಗೂ ಹೆಚ್ಚು ಲಾಭ ಗಳಿಸಿತು. ಸಕ್ನಿಲ್ಕ್ ಸಿನಿ ವರದಿ ಪ್ರಕಾರ, ಈ ಸಿನಿಮಾ 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ನಟ ಅಜಿತ್ ಕುಮಾರ್ ಅಭಿನಯದ ಹಾಗೂ ಅಧಿಕ್ ರವಿಚಂದ್ರನ್ ನಿರ್ದೇಶಿಸಿದ 'ಗುಡ್ ಬ್ಯಾಡ್ ಅಗ್ಲಿ' ಇದೆ.
ತಮಿಳಿನ 'ತಲಾ' ಅಭಿನಯದ ಚಿತ್ರವು ಜಾಗತಿಕವಾಗಿ ಬಾಕ್ಸ್ ಆಫೀಸ್‌ನಲ್ಲಿ 248.25 ಕೋಟಿ ರೂ. ಗಳಿಸಿದೆ. ನಿರ್ದೇಶಕ ಅಶ್ವಥ್ ಮಾರಿಮುತ್ತು ಮತ್ತು ಯುವ ನಟ ಪ್ರದೀಪ್ ರಂಗನಾಥನ್ ನಟಿಸಿದ 'ಡ್ರ್ಯಾಗನ್' ಕೂಡ ಸೂಪರ್​ಹಿಟ್​ ಸಾಲಿಗೆ ಸೇರಿದೆ. ಈ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆಗಳಿಂದ ಕೂಡಿರದೆ ಹೋದರೂ, ಕಥಾಹಂದರ, ಸಂಗೀತ ಮತ್ತು ನಟ ಪ್ರದೀಪ್​ ಸೇರಿ ಹಲವರ ಅಭಿನಯದಿಂದ ಯಶಸ್ವಿ ಪ್ರದರ್ಶನ ಕಂಡಿತು,(ಏಜೆನ್ಸೀಸ್).