ಸಾಯಿ ಧನ್ಸಿಕಾ ಮತ್ತು ನಟ ವಿಶಾಲ್​ 
ಕಾಲಿವುಡ್

ಆತ ಕುಡಿದು ಬಂದು ಶೂಟಿಂಗ್​ ಸಮಯದಲ್ಲಿ ಜಗಳ ಆಡಿದ್ದ: ನಟ ವಿಶಾಲ್​ ಭಾವಿ ಪತ್ನಿಯಿಂದ ಶಾಕಿಂಗ್​ ಹೇಳಿಕೆ! Actress Sai Dhanshika

ಪ್ರಮುಖ ಮುಖ್ಯಾಂಶಗಳು

  • ಕಹಿ ಅನುಭವವನ್ನು ಬಿಚ್ಚಿಟ್ಟ ನಟ ವಿಶಾಲ್​ ಅವರ ಭಾವಿ ಪತ್ನಿ ಹಾಗೂ ನಟಿ ಸಾಯಿ ಧನ್ಶಿಕಾ
  • ಯೂಟ್ಯೂಬ್ ಚಾನೆಲ್ ಗಲಾಟ್ಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಧನ್ಸಿಕಾ ಹೇಳಿಕೆ
  • ಆ ವ್ಯಕ್ತಿ ನನ್ನ ಕೇರ್​ಟೇಕರ್​ ಮೇಲೆ ಹಲ್ಲೆ ಮಾಡಿ ಓಡಿಹೋದನು ಎಂದು ಧನ್ಸಿಕಾ
Actress Sai Dhanshika : ಕೇರಳದಲ್ಲಿ ಸಿನಿಮಾವೊಂದರ ಚಿತ್ರೀಕರಣದ ವೇಳೆ ತಮಗಾದ ಕಹಿ ಅನುಭವವನ್ನು ನಟ ವಿಶಾಲ್​ ಅವರ ಭಾವಿ ಪತ್ನಿ ಹಾಗೂ ನಟಿ ಸಾಯಿ ಧನ್ಶಿಕಾ ಹಂಚಿಕೊಂಡಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು ಫೋಟೋ ತೆಗೆಯಲು ಕೇಳಿದಾಗ, ಅದನ್ನು ನಿರಾಕರಿಸಿದ ನನ್ನ ಕೇರ್‌ಟೇಕರ್‌ಗೆ ಹೊಡೆದಿದ್ದರು ಎಂದು ತಮಿಳು ಯೂಟ್ಯೂಬ್ ಚಾನೆಲ್ ಗಲಾಟ್ಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಧನ್ಸಿಕಾ ಹೇಳಿದ್ದಾರೆ.
ಚಿತ್ರೀಕರಣದ ಸಮಯದಲ್ಲಿ, ಒಬ್ಬ ವ್ಯಕ್ತಿ ನನ್ನ ಕೇರ್‌ಟೇಕರ್ ಬಳಿ ಬಂದು ಫೋಟೋ ತೆಗೆಯಲು ಕೇಳಿದ. ಆತ ಕುಡಿದಿದ್ದಾನೆಂದು ಅರಿತುಕೊಂಡ ನಂತರ, ನನ್ನ ಕೇರ್​ಟೇಕರ್​ ಆತನ ವಿನಂತಿಯನ್ನು ನಿರಾಕರಿಸಿದರು. ಆದರೆ, ಆ ವ್ಯಕ್ತಿ ನನ್ನ ಕೇರ್​ಟೇಕರ್​ ಮೇಲೆ ಹಲ್ಲೆ ಮಾಡಿ ಓಡಿಹೋದನು. ನಾನು ಕಣ್ಣಾರೆ ಆ ಘಟನೆಯನ್ನು ನೋಡುತ್ತಿದ್ದೆ. ನಾನು ನೋಡಿದಾಗ, ಅವನೊಂದಿಗೆ ಏಳು ಜನರಿದ್ದರು. ಸುಮಾರು ಹತ್ತು ನಿಮಿಷಗಳ ಕಾಲ ಹಲ್ಲೆ ಮಾಡಿದರು.
ನನಗೆ ಕೋಪ ಬಂದಿತ್ತು. ಆದರೆ, ನಿರ್ದೇಶಕರು ನನ್ನ ಕೈ ಹಿಡಿದಿದ್ದರು. ಆ ದಿನ ನಾನು ತುಂಬಾ ಕೋಪಗೊಂಡಿದ್ದೆ. ನನ್ನ ಜೊತೆ ಇರುವವರಿಗೆ ನೋವಾಗುತ್ತಿದ್ದರೆ ನಾನು ಸುಮ್ಮನೆ ನಿಂತು ನೋಡಲಾರೆ. ಅಂದು ನನ್ನ ಕೈಬಿಟ್ಟಿದ್ದರೆ ಖಂಡಿತ ನಾನು ಆತನನ್ನು ಬಿಡುತ್ತಿರಲಿಲ್ಲ ಎಂದು ಧನ್ಸಿಕಾ ತಿಳಿಸಿದರು.
ಅಂದಹಾಗೆ, ನಟಿ ಸಾಯಿ ಧನ್ಸಿಕಾ ಅವರು ನಟ ವಿಶಾಲ್​​ ಅವರನ್ನು ಮದುವೆ ಆಗಲಿದ್ದಾರೆ. ಅನೇಕ ದಿನಗಳಿಂದ ಪ್ರೀತಿ ಮಾಡುತ್ತಿದ್ದ ಇಬ್ಬರು ಕಳೆದ ವರ್ಷ ತಮ್ಮ ಮದುವೆ ಸುದ್ದಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಈ ವಿಚಾರವಾಗಿ ಮಾತನಾಡಿದ ಧನ್ಸಿಕಾ, ನಾಡಿಗರ್ ಸಂಘದ ಕಟ್ಟಡ ಕಾಮಗಾರಿ ಮುಗಿದ ತಕ್ಷಣ ನಟ ವಿಶಾಲ್ ಅವರನ್ನು ಮದುವೆಯಾಗುವುದಾಗಿ ಹೇಳಿದರು, (ಏಜೆನ್ಸೀಸ್​).