ಜನ ನಾಯಗನ್​ ಸಿನಿಮಾ  
ಕಾಲಿವುಡ್

ಈತನ ಹುಚ್ಚಾಟಕ್ಕೆ ಚೂರಾಯ್ತು 'ಜನ ನಾಯಗನ್'! ವಿಜಯ್​ ಚಿತ್ರದ ದೃಶ್ಯಗಳ ಲೀಕ್ ಪ್ರಕರಣಕ್ಕೆ ಸಿಕ್ಕಿತು ಬಿಗ್ ಟ್ವಿಸ್ಟ್​ ​

ಪ್ರಮುಖ ಮುಖ್ಯಾಂಶಗಳು

  • 'ಜನ ನಾಯಗನ್'​ ಚಿತ್ರದ ಲೀಕ್​ ದೃಶ್ಯಗಳು ಆನ್​ಲೈನ್​ನಲ್ಲಿ ಲೀಕ್​
  • ಪ್ರಕರಣಕ್ಕೆ ಟ್ವಿಸ್ಟ್​, ಪ್ರಮುಖ ಆರೋಪಿ ಜೊತೆ ಇಬ್ಬರು ಅರೆಸ್ಟ್​
ಚೆನ್ನೈ: ಪ್ರಸ್ತುತ ತಮಿಳುನಾಡು ಚುನಾವಣಾ ಕಣದಲ್ಲಿರುವ ಟಿವಿಕೆ ಪಕ್ಷದ ನಾಯಕ ವಿಜಯ್​ಗೆ ತಮ್ಮ ಬಹುನಿರೀಕ್ಷಿತ ಚಿತ್ರ 'ಜನ ನಾಯಗನ್​' (Jana Nayagan) ದೃಶ್ಯಗಳು ಲೀಕ್ ಆಗಿರುವುದು ಸದ್ಯ ಅತೀವ ನೋವು ತಂದಿಟ್ಟಿದೆ. ನಟನ ಕೊನೆಯ ಸಿನಿಮಾಗೆ ಈಗಾಗಲೇ ಸಾಲು ಸಾಲು ಸಂಕಷ್ಟಗಳು ಹೆಗಲೇರಿದ್ದು, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಹುಮುಖ್ಯ ದೃಶ್ಯಗಳು ಲೀಕ್​ ಆಯಿತು. ಮೊದಲೇ ರಿಲೀಸ್​ಗೆ ಪರದಾಡುತ್ತಿರುವ ಚಿತ್ರತಂಡಕ್ಕೆ, ಆನ್​ಲೈನ್​ ಸೋರಿಕೆ ಬಹಳ ನೋವುಂಟು ಮಾಡಿದೆ. ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್​ವೊಂದು ಲಭಿಸಿದೆ.
ಆನ್‌ಲೈನ್ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಸದ್ಯ ಚೆನ್ನೈ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸೆನ್ಸಾರ್​ ಮಂಡಳಿಯಿಂದ ತೊಂದರೆಗೆ ಸಿಲುಕಿರುವ ವಿಜಯ್ ಚಿತ್ರವು ಕೆಲವು ತಿಂಗಳಿನಿಂದ ತೆರೆ ಕಾಣಲು ತೀರ ಪರದಾಡುತ್ತಿರುವ ಸಮಯದಲ್ಲೇ ಚಿತ್ರದ ದೃಶ್ಯಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟ ಕಿಡಿಗೇಡಿಗಳ ಕೆಲಸಕ್ಕೆ ಇಡೀ ತಮಿಳು ಚಿತ್ರರಂಗವೇ ಸಿಡಿದೆದ್ದಿತು. ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದಂತೆ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ ಖಾಕಿಗೆ ಇದೀಗ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಜನ ನಾಯಗನ್​ ಸೋರಿಕೆಯ ಪ್ರಮುಖ ಆರೋಪಿ ಓರ್ವ ಫ್ರೀಲ್ಯಾನ್ಸ್​ (ಪಾರ್ಟ್​ಟೈಮ್​) ಸಿನಿಮಾ ಎಡಿಟರ್​ ಎನ್ನಲಾಗಿದೆ. ಒಂದಷ್ಟು ಚಿತ್ರಗಳಲ್ಲಿ ಸಹಾಯಕ ಸಂಪಾದಕನಾಗಿಯೂ ಕೆಲಸ ಮಾಡಿರುವ ಈತ, ಕೇವಲ ಸಿನಿಮಾ ಟೆಕ್ನಿಷಿಯನ್​ಗಳಿರುವ ರೂಮ್​ನಲ್ಲಿ ಚಿತ್ರದ ಫೂಟೇಜ್​ ಹೊತ್ತೊಯ್ದ ಬಗ್ಗೆ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ. ಎಡಿಟಿಂಗ್ ವೇಳೆ ಸ್ಟುಡಿಯೋದಲ್ಲಿದ್ದ ಆರೋಪಿ, ಬಹುಮುಖ್ಯ ದೃಶ್ಯಗಳನ್ನು ಪೂರ್ತಿಯಾಗಿ ವೀಕ್ಷಿಸಿದ್ದ. ಎಲ್ಲರ ಸಮ್ಮುಖದಲ್ಲೇ, ಚಿತ್ರದ ದೃಶ್ಯಗಳನ್ನು ಸ್ಟುಡಿಯೋದಿಂದ ಕದ್ದ ಬೆನ್ನಲ್ಲೇ, ಅದನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಾಗಿ ಪೊಲೀಸರ ಬಳಿ ಹೇಳಿದ್ದಾನೆ ಎಂದು ವರದಿಯಾಗಿದೆ.
ಈತನೊಟ್ಟಿಗೆ ಇನ್ನೂ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಈತನೇ ಪ್ರಮುಖ ಆರೋಪಿ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನ ನಾಯಗನ್​ ಚಿತ್ರದ ಸುಮಾರು 300 ಲಿಂಕ್‌ಗಳನ್ನು ಪೊಲೀಸರು ಸದ್ಯ ತೆಗೆದುಹಾಕಿದ್ದಾರೆ. ದೂರಿನ ಆಧಾರದ ಮೇಲೆ, ರಾಜ್ಯ ಅಪರಾಧ ತನಿಖಾ ಕೇಂದ್ರವು ಪ್ರಕರಣ ದಾಖಲಿಸಿ, ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದೆ,(ಏಜೆನ್ಸೀಸ್).