Anupama Parameswaran's Old Podcast Clip With Dhruv Vikram viral  
ಕಾಲಿವುಡ್

ನನ್ನ ಇನ್​ಸ್ಟಾ ಪೋಸ್ಟ್​ಗೆ ಫೋಟೋಸ್ ಸೆಲೆಕ್ಟ್​ ಮಾಡೋದು ಧ್ರುವ್​...; ಅನುಪಮಾ ಇಂಟರ್​ವ್ಯೂ ಹಳೆ ವಿಡಿಯೋ ವೈರಲ್

Anupama Parameswaran's Old Podcast Clip With Dhruv Vikram viral : 'ನನ್ನ ಮಾಜಿ ಸಂಗಾತಿ ನಾರ್ಸಿಸಿಸ್ಟ್​​ ಸ್ವಭಾವದವರು. ನನ್ನ ಸೋಶಿಯಲ್​ ಮೀಡಿಯಾ, ವೈಯಕ್ತಿಕ ವಿಚಾರಗಳ ಮೇಲೆ ಹಿಡಿತ ಸಾಧಿಸುತ್ತಿದ್ದರು' ಎಂದು ಅನುಪಮಾ ಪರಮೇಶ್ವರನ್​ ಅವರು ಇತ್ತೀಚೆಗೆ ಮಾತನಾಡಿದ್ದರು. ಆ ಬೆನ್ನಲ್ಲೇ 2025ರಲ್ಲಿ ನಿಖಿಲ್ ವಿಜಯೇಂದ್ರ ಸಿಂಹರ ಸಂದರ್ಶನದಲ್ಲಿ ನಟ ಧ್ರುವ್ ವಿಕ್ರಂ ಬಗ್ಗೆ

ನಟಿ ಅನುಪಮಾ ಪರಮೇಶ್ವರನ್​ ಹೇಳಿದ್ದ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತಿದೆ.

ಹಳೆ ವಿಡಿಯೋ ವೈರಲ್ ಯಾಕೆ?

ಧನ್ಯಾ ವರ್ಮಾ ಅವರ ಪಾಡ್​ಕಾಸ್ಟ್​ನಲ್ಲಿ ಅನುಪಮಾ ಅವರ ಇನ್​ಸ್ಟಾ ಪೋಸ್ಟ್​ ಬಗ್ಗೆ ಮಾತನಾಡಿದ್ದರು. ನನ್ನ ಮಾಜಿ ಸಂಗಾತಿ ಸ್ವಭಾವವು ವಿಕ್ರಂ ಅವರ ಅನ್ನಿಯನ್​ ಸಿನಿಮಾದ ಪಾತ್ರದಂತಿದೆ. ಆತ ನನ್ನ ಸೋಶಿಯಲ್​ ಮೀಡಿಯಾ, ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಹಿಡಿತ ಸಾಧಿಸುತ್ತಿದ್ದ. ಹಲವಾರು ಆಫರ್​ ಬಿಟ್ಟೆ. ಎರಡು ವರ್ಷಗಳ ಕಾಲ ಮಾನಸಿಕವಾಗಿ ಕುಗ್ಗಿದ್ದೆ. ಕೊನೆಗೆ ಎಂಗೇಜ್ಮೆಂಟ್​ ರಿಜೆಕ್ಟ್​ ಮಾಡಿದೆ ಎಂದು ಹೇಳಿದ್ದರು. ಇಲ್ಲಿ ಧ್ರುವ್​ ಹೆಸರನ್ನು ಅವರು ಉಲ್ಲೇಖ ಮಾಡಿರಲಿಲ್ಲ.
ಅನುಪಮಾ ಅವರ ಈ ಹೇಳಿಕೆಯು..ಸದ್ಯ ವೈರಲ್ ಆಗ್ತಿರೋದಕ್ಕೆ ಕಾರಣ ಏನಂದರೆ, 2025ರಲ್ಲಿ ಬೈಸನ್​ ಸಿನಿಮಾ ರಿಲೀಸ್​ ನಂತರ ಅನುಪಮಾ ಪರಮೇಶ್ವರನ್​ ಮತ್ತು ಧ್ರುವ್​ ವಿಕ್ರಂ ಅವರು ನಿಖಿಲ್ ವಿಜಯೇಂದ್ರ ಸಿಂಹರ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಸೋಶಿಯಲ್​ ಮೀಡಿಯಾ ಹ್ಯಾಂಡಲ್​ ಮಾಡುವ ಬಗ್ಗೆ ಹೇಳಿದ್ದರು. ಹೀಗಾಗಿ ಹಳೆಯ ಹೇಳಿಕೆ ಮತ್ತು ಹೊಸ ಆರೋಪವನ್ನು ಟ್ಯಾಗ್​ ಮಾಡಲಾಗುತ್ತದೆ. ಅಲ್ಲದೇ ಧ್ರುವ್​ ಅವರ ಕ್ಯಾರೆಕ್ಟರ್​​ ಅನ್ನು ಮ್ಯಾಚ್​ ಮಾಡಿ ಟೀಕೆ ಮಾಡಲಾಗುತ್ತಿದೆ.

ಅನುಪಮಾ ಏನು ಹೇಳಿದ್ದರು?

2025ರಲ್ಲಿ ನಿಖಿಲ್ ವಿಜಯೇಂದ್ರ ಸಿಂಹ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ, ಅನುಪಮಾ ಧ್ರುವ್ ಬಗ್ಗೆ ಮಾತನಾಡಿ, ಬೈಸನ್ ಕಾಲಮಾಡನ್ ಸೆಟ್‌ಗಳಲ್ಲಿ ಧ್ರುವ್​ ವಿಕ್ರಂ, ನಿರ್ದೇಶಕ ಮಾರಿ ಸೆಲ್ವರಾಜ್‌ರ ನೆಚ್ಚಿನ ನಟ. ಸಿನಿಮಾ ನಟ ಮತ್ತು ನಟಿಯರು ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಫೋಟೋಗಳನ್ನು ಧ್ರುವ್ ಆಯ್ಕೆ ಮಾಡುತ್ತಿದ್ದರು ಎಂದರು.
ಈ ಬಹಿರಂಗವನ್ನು ಕೇಳಿ ನಿರೂಪಕ ಆಶ್ಚರ್ಯಚಕಿತರಾದಾಗ, ಅನುಪಮಾ ತಕ್ಷಣವೇ ಸ್ಪಷ್ಟನೆ ಕೊಟ್ಟರು. 'ಅಲ್ಲ ಅದೇನೆಂದರೆ, ಈ ಆಯ್ಕೆ ಮುಖ್ಯವಾಗಿ ಪ್ರಚಾರದ ವಿಷಯಕ್ಕೆ ಸಂಬಂಧಿಸಿದ್ದು, ಕಾಸ್ಟ್ ಮತ್ತು ಕ್ರೂ ತಾವಾಗಿಯೇ ಫೋಟೋಗಳನ್ನು ಆಯ್ಕೆ ಮಾಡುತ್ತಿರಲಿಲ್ಲ ಮತ್ತು ಯಾವುದನ್ನು ಪೋಸ್ಟ್ ಮಾಡಬೇಕೆಂದು ಧ್ರುವ್ ಆಯ್ಕೆ ಮಾಡುತ್ತಿದ್ದರು' ಎಂದು ವಿವರಿಸಿದರು.

ಆತನೇ ನನ್ನ ಫೋಟೋ ಆಯ್ಕೆ ಮಾಡೋದು


'ಇಲ್ಲ ಸಿನಿಮಾ ಪ್ರಮೋಷನ್​ಗಾಗಿ ನಾವು ಬಹಳಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತೇವೆ. ಅದರಲ್ಲಿ ಯಾವುದು ಚೂಸ್ ಮಾಡಬೇಕು. ಯಾವುದು ಅಪ್ಲೋಡ್ ಮಾಡಬೇಕು ಎನ್ನುವ ಬಗ್ಗೆ ನನಗೆ ಯಾವುದೇ ಅಭಿಪ್ರಾಯವಿರಲಿಲ್ಲ. ಹೀಗಾಗಿ ಆತ ಆಯ್ಕೆ ಮಾಡ್ತಿದ್ದ. ಹೆಚ್ಚಿನ ಫೋಟೋಸ್​ನಲ್ಲಿ ನಾನು ಚೆನ್ನಾಗಿಯೇ ಕಾಣುತ್ತಿರಲಿಲ್ಲ. ಹೀಗಾಗಿ ಆತ ನಾನು ಚೆನ್ನಾಗಿ ಕಾಣುವ ಫೋಟೋವನ್ನು ಆಯ್ಕೆ ಮಾಡುತ್ತಿದ್ದ ನಂತರ ಅಪ್ಲೋಡ್ ಮಾಡ್ತಿದ್ದೆ' ಎಂದು ಹೇಳಿದ್ದರು.
ಲಾಂಗ್​ ಗ್ಯಾಪ್​ ಬಳಿಕ ಅನುಪಮಾ ಪರಮೇಶ್ವರನ್​ ಅವರು ಇನ್​ಸ್ಟಾ ಪೋಸ್ಟ್​ ಹಂಚಿಕೊಂಡಿದ್ದರು. ಅದರಲ್ಲಿ ಯಾರದ್ದೋ ಅನುಮತಿ, ಹಾಡಿನ ಆಯ್ಕೆ ಅಥವಾ ಕ್ಯಾಪ್ಷನ್‌ಗಾಗಿ ಕಾಯುವ ಅಗತ್ಯವಿಲ್ಲದಿದ್ದಾಗ ಪೋಸ್ಟ್ ಮಾಡುವುದು ತುಂಬಾ ಖುಷಿಕೊಡುತ್ತದೆ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಇತ್ತೀಚೆಗೆ ಧನ್ಯಾ ವರ್ಮಾ ಬಳಿ ಮಾತನಾಡಿದ್ದ ಅವರು, ಆ ಪೋಸ್ಟ್​ ನ ಹಿಂದೆ ಎರಡು ವರ್ಷಗಳ ನೋವು, ದೈಹಿಕ ಮತ್ತು ಭಾವನಾತ್ಮಕ ಅಂಶವಿದೆ ಎಂದಿದ್ದರು.

ನೆಟ್ಟಿಗರು ಏನಂದ್ರು?

ಅನೊನ್​ ಎಂಬುವವರು ಪೋಸ್ಟ್ ಹಂಚಿಕೊಂಡಿದ್ದು, ಒಂದು ಸೆಕೆಂಡ್​ ಅನ್ನಿಯನ್​ ಸಿನಿಮಾದ ರೆಮೋ ಕ್ಯಾರೆಕ್ಟರ್​ ಬಂದು ಹೋದಂತಾಯ್ತು. ಪಾಪಾ ಅನುಪಮಾ ಎಂದಿದ್ದಾರೆ,

(ಏಜೆನ್ಸೀಸ್).