ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಹಾಗೂ ಎಸ್‌ಆರ್‌ಎಚ್ ಸಿಇಒ ಕಾವ್ಯಾ ಮಾರನ್
- ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಹಾಗೂ ಎಸ್‌ಆರ್‌ಎಚ್ ಸಿಇಒ ಕಾವ್ಯಾ ಮಾರನ್
- ನವೆಂಬರ್ 10, 2026ರಂದು ಗ್ರೀಸ್‌ನಲ್ಲಿ ಮದುವೆ?
- ಸೋಷಿಯಲ್ ಮೀಡಿಯಾನಲ್ಲಿ ಹರಿದಾಡುತ್ತಿರುವ ವೈರಲ್ ಸುದ್ದಿ
ಹೈದರಾಬಾದ್: ಸಂಗೀತ ಲೋಕದ ಮೋಡಿಗಾರ, ಯುವಕರ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಹಾಗೂ ಐಪಿಎಲ್‌ನ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಸಿಇಒ ಕಾವ್ಯಾ ಮಾರನ್ (Anirudh and Kavya Wedding) ಮದುವೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಈಗ ಹಾಟ್ ಟಾಪಿಕ್ ಆಗಿದೆ.
ಕಳೆದ ಕೆಲ ದಿನಗಳಿಂದ ಇವರಿಬ್ಬರ ಮದುವೆ ಬಗ್ಗೆ ಬಗೆಬಗೆಯ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಮದುವೆಯ ದಿನಾಂಕ ಮತ್ತು ಸ್ಥಳದ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಗ್ರೀಸ್‌ನಲ್ಲಿ ನಡೆಯಲಿದೆ ಡೆಸ್ಟಿನೇಶನ್ ವೆಡ್ಡಿಂಗ್?
ವರದಿ ಪ್ರಕಾರ, ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಬರುವ ನವೆಂಬರ್ 10 ರಂದು ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ, ಈ ಜೋಡಿಯ ಮದುವೆ ನಮ್ಮ ದೇಶದ ಬದಲು ಗ್ರೀಸ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅನಿರುದ್ಧ್ ಅಥವಾ ಕಾವ್ಯಾ ಮಾರನ್ ಅವರ ಕುಟುಂಬದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.
ಚಿಕ್ಕಪ್ಪ ಕೊಟ್ಟಿದ್ರು ದೊಡ್ಡ ಸುಳಿವು!
ಈ ಮದುವೆ ಸುದ್ದಿಗೆ ಅತಿ ದೊಡ್ಡ ಪುರಾವೆ ಸಿಕ್ಕಿದ್ದು ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ಹಿರಿಯ ನಟ ವೈ.ಜಿ. ಮಹೇಂದ್ರ ನೀಡಿದ ಹೇಳಿಕೆಯಿಂದ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ತಮ್ಮ ಸೋದರಳಿಯ ಅನಿರುದ್ಧ್ ಶೀಘ್ರದಲ್ಲೇ ಒಂದು ದೊಡ್ಡ ಮದುವೆ ಮಾಡಿಕೊಳ್ಳಲಿದ್ದಾರೆ ಎಂದು ಸುಳಿವು ನೀಡಿದ್ದರು.
ಮಾತನ್ನು ಮುಂದುವರಿಸಿದ ಅವರು, ಕಾವ್ಯಾ ಸಾಮಾನ್ಯ ಹುಡುಗಿಯಲ್ಲ, ಇಡೀ ಐಪಿಎಲ್ ಫ್ರಾಂಚೈಸ್ ತಂಡವನ್ನೇ ಅಷ್ಟು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅವರ ತಂದೆಯ ವಾಣಿಜ್ಯ ಬುದ್ಧಿಮತ್ತೆ ಅವರಿಗೂ ಬಂದಿದೆ. ಇವರಿಬ್ಬರ ಜೋಡಿ ನೋಡಲು ಬಹಳ ಚೆನ್ನಾಗಿದೆ ಎಂದೂ ಮುಕ್ತವಾಗಿ ಹೊಗಳಿದ್ದರು.
ಯಾರು ಈ ಕಾವ್ಯಾ ಮಾರನ್?
ದಕ್ಷಿಣ ಭಾರತದ ಪ್ರಭಾವಿ ಮಾಧ್ಯಮ ಸಾಮ್ರಾಜ್ಯ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿಯೇ ಈ ಕಾವ್ಯಾ ಮಾರನ್. ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಬಿಕಾಂ ಮುಗಿಸಿರುವ ಕಾವ್ಯಾ, ಯುಕೆಯ ಪ್ರತಿಷ್ಠಿತ ವಾರ್ವಿಕ್ ಬಿಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
2018ರಿಂದ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಸಿಇಒ ಆಗಿ ಜವಾಬ್ದಾರಿ ಹೊತ್ತುಕೊಂಡಿರುವ ಕಾವ್ಯಾ, ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ ಕ್ಯೂಟ್ ಎಕ್ಸ್‌ಪ್ರೆಶನ್ಸ್‌ಗಳಿಂದಲೇ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಜಕೀಯ ಹಾಗೂ ಬ್ಯುಸಿನೆಸ್ ಕುಟುಂಬದ ಹಿನ್ನೆಲೆ ಇರುವ ಕಾವ್ಯಾ, ಸನ್ ನೆಟ್‌ವರ್ಕ್ ವ್ಯವಹಾರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, (ಏಜನ್ಸೀಸ್).