ನಟಿ ತ್ರಿಷಾ ಕೃಷ್ಣನ್ ಮತ್ತು ದಳಪತಿ ವಿಜಯ್
- ಕಳೆದ ಕೆಲವು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮಿಳು ನಟ ವಿಜಯ್ ಜೊತೆ ತ್ರಿಷಾ ಹೆಸರು ಚರ್ಚೆಗೆ
- ವಿಜಯ್-ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿರುವ ನಡುವೆಯೇ ನಟನೊಂದಿಗೆ ತ್ರಿಷಾ ಪ್ರತ್ಯಕ್ಷ
- ಭಾರೀ ವಿವಾದ ನಡುವೆ ಮತ್ತೊಂದು ಅಚ್ಚರಿ ಪೋಸ್ಟ್ ಹಂಚಿಕೊಂಡ ನಟಿ
ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಇವರಿಬ್ಬರ ಡಿವೋರ್ಸ್ಗೆ ಮೂಲ ಕಾರಣವೇ ನಟಿ ತ್ರಿಷಾ ಎಂಬ ಆರೋಪಗಳು ಇನ್ನೂ ಜೋರಾಗಿವೆ. ಇದಕ್ಕೆ ಸಂಬಂಧಿಸಿದಂತೆ ಹಲವು ಪೋಸ್ಟ್‌ಗಳು ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವುದು ಬಹುತೇಕರಿಗೆ ಗೊತ್ತಿದೆ. ಈ ಮಧ್ಯೆಯೇ, ಇತ್ತೀಚಿಗೆ ನಟಿ ತ್ರಿಷಾ ಕೃಷ್ಣನ್ ಮಾಡಿರುವ ಪೋಸ್ಟ್ವೊಂದು ಹೊಸ ಸಂಚಲನ ಹುಟ್ಟುಹಾಕಿದೆ.
ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಡಿವೋರ್ಸ್ ಪ್ರಕರಣ ಹೊರಬೀಳುತ್ತಿದ್ದಂತೆ ತ್ರಿಷಾ ಮತ್ತು ದಳಪತಿ ಸುತ್ತಾಟ ಬಹಿರಂಗವಾಗಿದೆ. ಸಾಕಷ್ಟು ಆರೋಪಗಳು, ವಿವಾದಗಳ ನಡುವೆಯೂ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಮತ್ತು ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮತ್ತು ಮೀನಾಕ್ಷಿ ಅವರ ಪುತ್ರನ ವಿವಾಹದ ಆರತಕ್ಷತೆಯಲ್ಲಿ ಕಾಣಿಸಿಕೊಂಡಿದ್ದೇ ಸದ್ಯ ಇವರಿಬ್ಬರ ಸಂಬಂಧದ ಬಗ್ಗೆಯಿರುವ ಅನುಮಾನಗಳನ್ನು ಹೆಚ್ಚಿಸಿವೆ.
ವಿಜಯ್ ಜೊತೆಗೆ ತ್ರಿಷಾ ಪ್ರೀತಿಯ ಸಂಬಂಧ ಹೊಂದಿದ್ದಾರೆ. ಇವರಿಬ್ಬರ ನಡುವೆ ಬಹು ವರ್ಷಗಳಿಂದ ಲವ್ವಿಡವ್ವಿ ನಡೆಯುತ್ತಿದೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾವನ್ನು ಸುತ್ತುವರೆದಿವೆ. ಆದರೆ, ಇದ್ಯಾವುದಕ್ಕೂ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದ ಸ್ಟಾರ್ ಜೋಡಿ, ಕಳೆದ ತಿಂಗಳು ಮದುವೆ ಸಮಾರಂಭದಲ್ಲಿ ಒಟ್ಟಿಗೆ ಪ್ರತ್ಯಕ್ಷವಾದಗಿನಿಂದ ಇಂತಹ ಹಲವಾರು ವದಂತಿಗಳೇ ಸತ್ಯ ಎಂಬ ಮಾತುಗಳೂ ಕೇಳಿಬರುತ್ತಿವೆ. ಈಗ ನಟಿ ಮಾಡಿರುವ ಪೋಸ್ಟ್ವೊಂದು ವಿಜಯ್-ತ್ರಿಷಾ 100ಕ್ಕೆ 100 ಪ್ರೀತಿಯಲ್ಲಿರುವುದು ಖಚಿತ ಎನ್ನುವಂತೆ ಮಾಡಿದೆ.
ಪ್ರೀತಿಯೇ ಎಲ್ಲ ಅಲ್ಲದಿದ್ದರೂ, ಅದಿಲ್ಲದೆ ಜೀವನ ಶೂನ್ಯ. ಎಂಬ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಸದ್ಯ ಊಹಾಪೋಹ, ಟೀಕೆಗಳಿಗೆ ಇನ್ನಷ್ಟು ಪುಷ್ಠಿ ನೀಡಿವೆ. ನಟಿಯ ಇನ್ಸ್ಟಾಗ್ರಾಮ್ ಸ್ಟೋರಿ ಹೊರಬಿದ್ದ ಬೆನ್ನಲ್ಲೇ ಹಲವರು ಇದನ್ನು ತಮಗೆ ಹೇಗೇ ಬೇಕೋ ಹಾಗೆ ವಿವರಿಸುವಲ್ಲಿ ಮುಂದಾಗಿದ್ದಾರೆ. ಪ್ರಸ್ತುತ, ತಮಿಳುನಾಡಿನ ಚುನಾವಣಾ ಅಖಾಡದಲ್ಲಿರುವ ವಿಜಯ್ಗೆ ಇದು ಯಾವ ರೀತಿ ಎಫೆಕ್ಟ್ ಮಾಡಲಿದೆ ಎಂಬ ಪ್ರಶ್ನೆಗಳು ಕೂಡ ಕೆಲವರಲ್ಲಿ ಕಾಡತೊಡಗಿದೆ ಎಂದೇ ಹೇಳಬಹುದು,(ಏಜೆನ್ಸೀಸ್).