ಈ ಫೋಟೋದಲ್ಲಿರುವ ಬಾಲಕಿ ಯಾರೆಂದು ಗುರುತಿಸುವಿರಾ?
- ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇರುತ್ತದೆ
- ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿಯುವ ಬಯಕೆ ಇರುತ್ತೆ
- ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ ಅದನ್ನು ಮೇಲೆ ನೋಡಬಹುದು
- ಈ ಫೋಟೋದಲ್ಲಿರುವ ಬಾಲಕಿ ಇಂದು ಸೌತ್ ಸಿನಿರಂಗದ ಹಾಟ್ ಬ್ಯೂಟಿ
ctress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಅದೊಂದು ವೈಟ್ ಅಂಡ್ ಬ್ಲ್ಯಾಕ್ ಫೋಟೋ ಆಗಿದ್ದು, ಅದರಲ್ಲಿ ಪುಟ್ಟ ಬಾಲಕಿಯೊಬ್ಬಳು ತಲೆಯಲ್ಲಿ ಹೂ ಮುಡಿದುಕೊಂಡು ಗಾಂಭೀರ್ಯದಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾಳೆ. ಈಕೆ ಸಾಮಾನ್ಯ ಬಾಲಕಿ ಅಲ್ಲ ಒಂದು ಕಾಲದಲ್ಲಿ ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದ್ದರು. ಕನ್ನಡದಲ್ಲಿ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಕಿಚ್ಚ ಸುದೀಪ್ ಅವರ ಜೊತೆ ಟಾಲಿವುಡ್ನಲ್ಲಿ ತೆರೆಹಂಚಿಕೊಳ್ಳುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವ ಮೂಲಕವೂ ಸದ್ದು ಮಾಡಿದ್ದಾರೆ. ಇಷ್ಟೇ ಏಕೆ ಐಟಂ ಸಾಂಗ್ನಲ್ಲಿ ಸೊಂಟ ಬಳಕಿಸುವ ಮೂಲಕವೂ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ ನಟನೆ ಮಾತ್ರವಲ್ಲ ತಮ್ಮ ಸೌಂದರ್ಯದಿಂದಲೇ ಬಹುದೊಡ್ಡ ಅಭಿಮಾನಿ ಬಳಗವನ್ನು ಕಟ್ಟಿರುವ ಈ ನಟಿ ಇತ್ತೀಚೆಗೆ ಎರಡನೇ ವಿವಾಹ ಮಾಡಿಕೊಂಡರು. ಇದಕ್ಕೂ ಮುಂಚೆ ಅವರು ಟಾಲಿವುಡ್ನ ಸ್ಟಾರ್ ಹೀರೋ ಜತೆ ಮದುವೆಯಾಗಿದ್ದರು. ಇಷ್ಟೆಲ್ಲ ಸುಳಿವು ನೀಡಿದ ಬಳಿಕ ಆಕೆ ಯಾರೆಂದು ಎಲ್ಲರಿಗೂ ಗೊತ್ತಾಗಿರುತ್ತದೆ. ಇನ್ನೂ ಗೊತ್ತಾಗಿಲ್ಲ ಅಂದರೆ, ಮುಂದೆ ಓದಿ ಉತ್ತರ ಸಿಗಲಿದೆ.
ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಸೌತ್ ಬ್ಯೂಟಿ ಸಮಂತಾ ರುತು ಪ್ರಭು.
ಸಮಂತಾ ರುತ್ ಪ್ರಭು 1987ರ ಏಪ್ರಿಲ್ 28ರಂದು ಚೆನ್ನೈಯಲ್ಲಿ ತೆಲುಗು ಕುಟುಂಬದಲ್ಲಿ ಜನಿಸಿದರು. ತಂದೆ ಜೋಸೆಫ್ ಪ್ರಭು ಮತ್ತು ತಾಯಿ ನಿನೆಟ್ ಪ್ರಭು. ಸಮಂತಾ ಅವರು ಇಬ್ಬರು ಸಹೋದರರನ್ನು ಹೊಂದಿದ್ದಾರೆ. ಸ್ಟೆಲ್ಲಾ ಮ್ಯಾರಿಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿಗ್ರಿ ಪಡೆದ ನಂತರ, ಮಾಡೆಲಿಂಗ್‌ನಲ್ಲಿ ಆಸಕ್ತಿ ತೋರಿಸಿ ಚಿತ್ರರಂಗಕ್ಕೆ ಕಾಲಿಟ್ಟರು. ಸಮಂತಾರ ಮೊದಲ ಚಿತ್ರವೆಂದರೆ 2010 ರಲ್ಲಿ ಬಿಡುಗಡೆಯಾದ ಗೌತಮ್ ವಾಸುದೇವ್ ಮೇನನ್ ನಿರ್ದೇಶನದ ತೆಲುಗು ಚಿತ್ರ 'ಯೇ ಮಾಯ ಚೆಸಾವೆ' (ತಮಿಳಿನಲ್ಲಿ 'ವಿನ್ನೈತಾಂಡಿ ವರುವಾಯಾ').
ಈ ಚಿತ್ರದ ನಂತರ ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡರು. 45ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ನಾಲ್ಕು ಫಿಲ್ಮ್‌ಫೇರ್ ಅವಾರ್ಡ್‌ಗಳು, ಎರಡು ನಂದಿ ಅವಾರ್ಡ್‌ಗಳು ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಮಂತಾ ಜಯಿಸಿದ್ದಾರೆ. 2021ರಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ 'ದಿ ಫ್ಯಾಮಿಲಿ ಮ್ಯಾನ್' ಸೀರೀಸ್‌ನಲ್ಲಿ ತಮಿಳು ನಟಿಯಾಗಿ ಹಿಂದಿಯಲ್ಲಿ ಡೆಬ್ಯೂ ಮಾಡಿ, ಪ್ಯಾನ್-ಇಂಡಿಯಾ ಖ್ಯಾತಿ ಗಳಿಸಿದರು.