ನಟಿ ಅಂಜಲಿ 
ಕಾಲಿವುಡ್

ಅವರಿಗೋಸ್ಕರ ನಾನೇಕೆ ಮದುವೆಯಾಗಲಿ? ಈ ಮಾತುಗಳನ್ನಾಡಿದ್ದೇಕೆ ಅಂಜಲಿ? ಅಷ್ಟಕ್ಕೂ ಏನಾಯ್ತು? Actress Anjali

ಸಿನಿಮಾರಂಗದಲ್ಲಿ ಇನ್ನೂ ಮದುವೆಯಾಗದ ನಟಿಯರ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಗಾಸಿಪ್‌ಗಳು ಹರಿದಾಡುವುದು ಸಾಮಾನ್ಯ. ಅದರಲ್ಲೂ ಸ್ಟಾರ್​ ನಟಿಯಾಗಿರುವ ಅಂಜಲಿ ಅವರ ಮದುವೆಯ ವಿಚಾರ ಹೆಚ್ಚು ಚರ್ಚೆಯಾಗುತ್ತಿರುತ್ತದೆ.

ಚೆನ್ನೈ: ಹೋದಲೆಲ್ಲ ಮದುವೆ ಯಾವಾಗ ಎಂಬ ಸಾಮಾನ್ಯ ಪ್ರಶ್ನೆಗಳನ್ನು ಕೇಳಿ ಬೇಸರಗೊಂಡಿರುವ ನಟಿ ಅಂಜಲಿ ( Actress Anjali ), ಇತ್ತೀಚಿನ ಸಂದರ್ಶನವೊಂದರಲ್ಲಿ ಮದುವೆ ಕುರಿತು ನೀಡಿರುವ ಖಡಕ್​ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ತಮ್ಮ ಮದುವೆಯ ಕುರಿತು ನಿರಂತರವಾಗಿ ಕೇಳಿಬರುತ್ತಿರುವ ವದಂತಿಗಳು ಹಾಗೂ ತಮ್ಮ ಸ್ನೇಹಿತರ ಕುತೂಹಲಕ್ಕೆ ನಟಿ ಅಂಜಲಿ ತೆರೆಎಳೆದಿದ್ದಾರೆ.

ಸಿನಿಮಾರಂಗದಲ್ಲಿ ಇನ್ನೂ ಮದುವೆಯಾಗದ ನಟಿಯರ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಗಾಸಿಪ್‌ಗಳು ಹರಿದಾಡುವುದು ಸಾಮಾನ್ಯ. ಅದರಲ್ಲೂ ಸ್ಟಾರ್​ ನಟಿಯಾಗಿರುವ ಅಂಜಲಿ ಅವರ ಮದುವೆಯ ವಿಚಾರ ಹೆಚ್ಚು ಚರ್ಚೆಯಾಗುತ್ತಿರುತ್ತದೆ. ಅಂಜಲಿ ಹೋದ ಕಡೆಯಲೆಲ್ಲ ಮಾಧ್ಯಮಗಳು ಹಾಗೂ ನೆಟ್ಟಿಗರಿಂದ ಮದುವೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮದುವೆ ಯಾವಾಗ ಎಂಬ ಪ್ರಶ್ನೆಗೆ ಅಂಜಲಿ ಅತ್ಯಂತ ತಮಾಷೆಯಾಗಿ ಉತ್ತರಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಸಂದರ್ಶನದ ವೇಳೆ 'ಮದುವೆ ಯಾವಾಗ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮಗೆ ಹೇಗೆನಿಸುತ್ತದೆ?' ಎಂದು ಆ್ಯಂಕರ್ ಪ್ರಶ್ನಿಸಿದಾಗ, ಅಂಜಲಿ ನೇರವಾಗಿ ಉತ್ತರಿಸಿದರು. ಅದು ನನ್ನ ಮದುವೆ, ನಾನು ಯಾವಾಗ ಬೇಕಾದರೂ ಮದುವೆಯಾಗುತ್ತೇನೆ ಎಂದು ಖಡಕ್​ ಆಗಿ ಹೇಳಿದರು. ಅಲ್ಲದೆ, ಮದುವೆ ಎಂಬುದು ಸಂಪೂರ್ಣವಾಗಿ ತನ್ನ ವೈಯಕ್ತಿಕ ವಿಷಯವಾಗಿದ್ದು, ಅದಕ್ಕೆ ಯಾರೂ ಕಾಲಮಿತಿ ನಿಗದಿಪಡಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಮದುವೆ ವಿಚಾರದಲ್ಲಿ ನನ್ನ ಸ್ನೇಹಿತರು ಮಾತ್ರ ತುಂಬಾ ಉತ್ಸುಕರಾಗಿದ್ದಾರೆ. ಅವರಿಗೆ ಮದುವೆಯಲ್ಲಿ ಒಳ್ಳೆಯ ಬಟ್ಟೆ ಧರಿಸಿ, ಎಂಜಾಯ್ ಮಾಡಿ ಫೋಟೋಶೂಟ್ ಮಾಡಿಕೊಳ್ಳುವ ಆಸೆಯಿದೆ. ಹಾಗಾಂತ ಸ್ನೇಹಿತರ ಖುಷಿಗಾಗಿ ನಾನು ಮದುವೆಯಾಗಬೇಕೇ? ಒಮ್ಮೆ ನೀವೇ ಯೋಚಿಸಿ! ಎಂದು ನಗುತ್ತಲೇ ಅಂಜಲಿ ಪ್ರಶ್ನಿಸಿದರು. ಅಲ್ಲದೆ, ನನ್ನ ಸ್ನೇಹಿತರಿಗೆ ನೀವೇ ಮದುವೆಯಾಗಿ, ನಾನು ಬಂದು ಅಂದವಾಗಿ ಡ್ರೆಸ್ ಮಾಡಿಕೊಂಡು ಫೋಟೋ ತೆಗೆಸಿಕೊಳ್ಳುತ್ತೇನೆ ಎಂದು ತಮಾಷೆಯಾಗಿ ಹೇಳಿರುವುದಾಗಿ ತಿಳಿಸಿದ್ದಾರೆ.

ಇನ್ನೂ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಅಂಜಲಿ ಕೊನೆಯದಾಗಿ ವಿಶಾಲ್ ಜೋಡಿಯಾಗಿ 'ಮಗುಡಮ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಿರ್ದೇಶಕ ರಾಮ್ ಅವರ ನಿರ್ದೇಶನದಲ್ಲಿ ನಿವಿನ್ ಪಾಲಿ ಮತ್ತು ಸೂರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ 'ಏಳು ಕಡಲ್ ಏಳು ಮಲೈ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಅಕ್ಟೋಬರ್ 1 ರಂದು ತೆರೆಗೆ ಬರಲಿದೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಕಾರಣ ಅಂಜಲಿ ತಮ್ಮ ಮದುವೆಯ ಯೋಚನೆಯನ್ನು ಸದ್ಯಕ್ಕೆ ಬದಿಗಿರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ, (ಏಜೆನ್ಸೀಸ್​).