Tamil Nadu Elections 2026 (ಚಿತ್ರ X)
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ 2026 ರ (Tamil Nadu Elections 2026) ಮತದಾನ ಪ್ರಕ್ರಿಯೆಯು ಗುರುವಾರ (ಏ. 23) ರಾಜ್ಯಾದ್ಯಂತ ಬಿರುಸಿನಿಂದ ನಡೆಯಿತು. ಈ ಸಂದರ್ಭದಲ್ಲಿ ತಮಿಳು ನಟಿ ಅಕ್ಷಯಾ ಹರಿಹರನ್ ಮತ ಚಲಾಯಿಸಲು ಹೋದಾಗ ಅವರ ಮತವನ್ನು ಈಗಾಗಲೇ ಬೇರೊಬ್ಬರು ಚಲಾಯಿಸಿದ್ದಾರೆ ಎಂಬ ವಿಷಯ ತಿಳಿದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಟಿ ಹೇಳಿದ್ದೇನು?
ನಾನು ಈಗ ಹೇಳಲು ಬಂದಿರುವುದೇನೆಂದರೆ ಈಗಾಗಲೇ ನನ್ನ ಮತವನ್ನು ಬೇರೆಯವರು ಚಲಾಯಿಸಿದ್ದಾರೆ. ಇದು ನಿಜಕ್ಕೂ ಆಘಾತಕಾರಿ. ನಾನು ತಮಿಳುನಾಡಿನ ವೇಲಾಚೇರಿಯವಳು. ನನ್ನ ಮತ ಚೀಟಿ ಸಿಗಲಿಲ್ಲ ನಂತರ ನನ್ನ ಮತಗಟ್ಟೆ ಅಡಿಯಾರ್‌ನಲ್ಲಿದೆ ಎಂದು ತಿಳಿದುಬಂದಿತು. ನಂತರ ಅಲ್ಲಿಗೆ ಹೋಗಿ ಒಂದು ಗಂಟೆ ಕಾಯುತ್ತಿದ್ದೆ ನಂತರ ಬೇರೊಬ್ಬರು ಈಗಾಗಲೇ ನನ್ನ ಮತ ಚಲಾಯಿಸಿದ್ದರು.
24 ವರ್ಷ ವಯಸ್ಸಿನ ಮಹಿಳೆ ಎಂದು ಹೇಳಿಕೊಳ್ಳುವ ಮತ್ತೊಂದು ಫೋಟೋ ಇತ್ತು, ಮತ್ತು ಅವರು ಬೆರಳಚ್ಚು ಹಾಕಿದರು. ನನ್ನ ಎರಡನೇ ಹೆಸರು ಹರಿಹರನ್, ಆದ್ದರಿಂದ ಕಾಗದದಲ್ಲಿ ಎಲ್ಲವೂ ಸರಿಯಾಗಿದೆ. ಆದರೆ, ಫೋಟೋವೊಂದು ಮಾತ್ರ ವಿಭಿನ್ನವಾಗಿತ್ತು. ಆದಾಗ್ಯೂ, ಅವರು ಮೊದಲೇ ಪರಿಶೀಲಿಸಬೇಕಿತ್ತು ಏಕೆಂದರೆ ಬೇರೆಯವರು ನನಗೆ ಹೇಗೆ ಮತ ಚಲಾಯಿಸಬಹುದು? ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇಷ್ಟು ಸಮಯ ಕಾಯುತ್ತಿದ್ದ ನಂತರ ನನಗೆ ಟೆಂಡರ್ ಬ್ಯಾಲೆಟ್ ವೋಟ್ ಮಾಡಲು ಅವಕಾಶ ಮಾಡಿಕೊಟ್ಟರು. ಆದರೆ, ಈ ಬಗ್ಗೆ ನನಗೆ ಖಚಿತವಿಲ್ಲ. ಅದು ಕೇವಲ ಒಂದು ಕಾಗದವಾಗಿತ್ತು. ಅದನ್ನು ನನ್ನ ಮುಂದೆ ಸೀಲ್ ಮಾಡಲಿಲ್ಲವಾದ್ದರಿಂದ ನನಗೆ ಅದು ಸೂಕ್ತ ಅನಿಸಲಿಲ್ಲ. ನೀವು ಮೊದಲು ಈ ರೀತಿಯ ವಿಷಯಗಳು ನಡೆಯಲು ಹೇಗೆ ಬಿಡುತ್ತೀರಿ? ಎಂದು ಕೇಳಿದರೆ ಅದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಈ ರೀತಿಯ ವಿಚಾರಗಳು ನಡೆಯುತ್ತಿರುವುದು ನಿಜಕ್ಕೂ ನಿರಾಶಯದಾಯಕವಾಗಿದೆ.
ಕೆಲವು ವಕೀಲರು ಈಗಾಗಲೇ ನನ್ನನ್ನು ಸಂಪರ್ಕಿಸಿದ್ದಾರೆ, ಆದ್ದರಿಂದ ನಾನು ಪರ್ಯಾಯ ಮತವನ್ನು ತೆಗೆದುಕೊಂಡೆ. ನಾನು ಮಾಡಿದ್ದು ಸರಿಯಾದ ಕೆಲಸ. ನಾನು ಹತ್ತಿರದ ಆರ್ಒ ಕಚೇರಿಗೆ ದೂರು ನೀಡಿದ್ದೇನೆ ಎಂದು ಹೇಳಿದರು.
ಎಕ್ಸ್ನಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿರುವ ಅವರು, ಸಾಮಾನ್ಯ ಮತ ಚಲಾಯಿಸುವ ಅನುಭವ ಈ ಅನುಭವಕ್ಕೆ ಸಮಾನವಾಗಿಲ್ಲ ಎಂದು ಹೇಳಿದ್ದಾರೆ. ನಾನು ನಿಜವಾಗಿಯೂ ಮತ ಚಲಾಯಿಸಿದ್ದೇನೆ ಎಂದು ಅನಿಸುತ್ತಿಲ್ಲ. ಇದು ಯಂತ್ರದಲ್ಲಿ ಚಲಾಯಿಸಿದ್ದಲ್ಲ. ಬದಲಾಗಿ ಒಂದು ಕಾಗದದಲ್ಲಿ. ದಯವಿಟ್ಟು ಈ ಮತವನ್ನು ವ್ಯರ್ಥ ಮಾಡಬೇಡಿ ನಿಮಗೆ ಇನ್ನೂ ಸಮಯವಿದೆ ಎಂದು ಹೇಳಿದರು.
2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಚಿತ್ರರಂಗದ ಹಲವಾರು ಪ್ರಮುಖ ಹೆಸರುಗಳು ರಾಜ್ಯಾದ್ಯಂತ ಮತಗಟ್ಟೆಗಳಲ್ಲಿ ಕಾಣಿಸಿಕೊಂಡವು. ಆರಂಭಿಕ ಮತದಾರರಲ್ಲಿ ರಜನಿಕಾಂತ್ ಇದ್ದರು, ವಿಜಯ್ ಸೇತುಪತಿ, ಧನುಷ್, ವಿಕ್ರಮ್, ಖುಷ್ಬು ಸುಂದರ್, ಆರ್‌ಜೆ ಬಾಲಾಜಿ, ಶಿವಕಾರ್ತಿಕೇಯನ್, ಕಮಲ್ ಹಾಸನ್, ಶ್ರುತಿ ಹಾಸನ್, ಅಟ್ಲಿ, ರಾಧಿಕಾ ಶರತ್‌ಕುಮಾರ್, ಶರತ್‌ಕುಮಾರ್, ಇಳಯರಾಜ, ತ್ರಿಶಾ ಕೃಷ್ಣನ್, ವಿಶಾಲ್, ಆರ್ ಪಾರ್ತಿಬನ್, ಅರ್ಜುನ್ ಸರ್ಜಾನಾಥನ್, ಪ್ರದೀಪ್ ರಂಗನಾಥನ್ ಸಹ ಮತ ಚಲಾಯಿಸಿದರು (ಏಜೆನ್ಸೀಸ್).