ನಟ ವಿಜಯ್ ಡಿವೋರ್ಸ್ ಪ್ರಕರಣ
- ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ವಿಚ್ಛೇದನ ಪ್ರಕರಣ
- ಡಿವೋರ್ಸ್ ಬೆನ್ನಲ್ಲೇ ನಟಿ ತ್ರಿಷಾ ಜೊತೆ ವಿಜಯ್ ಪ್ರತ್ಯಕ್ಷ
- ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡ ತ್ರಿಷಾ-ವಿಜಯ್
- ಡಿವೋರ್ಸ್ ಪ್ರಕರಣವನ್ನು ಕೋರ್ಟ್ನಿಂದ ಹೊರಗೆ ಸೆಟಲ್ ಮಾಡಿಕೊಳ್ಳಲು ದಳಪತಿ ಹೆಜ್ಜೆ
ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ (Vijay-Thrisha) ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದೆ. ಇವರಿಬ್ಬರ ಡಿವೋರ್ಸ್ಗೆ ಮೂಲ ಕಾರಣವೇ ನಟಿ ತ್ರಿಷಾ ಎಂಬ ಆರೋಪಗಳು ಕೇಳಿಬಂದಿದ್ದು, ಇದಕ್ಕೆ ಪುಷ್ಠಿ ಎನ್ನುವಂತೆ ಇತ್ತೀಚಿಗೆ ಮದುವೆ ಸಮಾರಂಭದಲ್ಲಿ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು. ದಾಂಪತ್ಯದಲ್ಲಿ ಬಿರುಕು ಮೂಡಿರುವ ಸಂದರ್ಭದಲ್ಲೇ ತ್ರಿಷಾ ಜೊತೆಗೆ ವಿಜಯ್ ಮದುವೆಗೆ ಕಾರಿನಲ್ಲಿ ಬಂದ ದೃಶ್ಯ ಸದ್ಯ ಊಹಾಪೋಹಗಳೇ ಸತ್ಯ ಎಂದು ಒತ್ತಿ ಹೇಳುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಹಲವು ಪೋಸ್ಟ್‌ಗಳು ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ. ಇಲ್ಲಿಯವರೆಗೂ ಇದ್ಯಾವುದಕ್ಕೂ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದ ಸ್ಟಾರ್ ಜೋಡಿ, ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರ ಮಧ್ಯೆ, ಮತ್ತೊಂದು ಸ್ಫೋಟಕ ಸಂಗತಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಕೋರ್ಟ್ ಹೊರಗೆ ಈ ಕೇಸ್ ಬಗೆಹರಿಸಿಕೊಳ್ಳಲು ವಿಜಯ್ ಮುಂದಾಗಿದ್ದಾರೆ ಎನ್ನಲಾಗಿದೆ.
250 ಕೋಟಿ ರೂ. ಸೆಟಲ್ಮೆಂಟ್?
ತಮ್ಮ ಪತ್ನಿ ಸಂಗೀತಾ ಹಾಗೂ ಮಕ್ಕಳಾದ ಜೇಸನ್ ಸಂಜಯ್ ಮತ್ತು ದಿವ್ಯಾ ಸಶಾ ಅವರಿಗೆ 250 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಮೊತ್ತವನ್ನು ಹೇಗೆ ಹಂಚಿಕೆ ಮಾಡಲಾಗುವುದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ, ಮೊದಲು ಸಂಗೀತಾ ಅವರು ಪತಿಯ ಈ ಆಫರ್ಗೆ ಒಪ್ಪುತ್ತಾರೋ ಅಥವಾ ತಿರಸ್ಕರಿಸುತ್ತಾರೋ ಎಂಬುದನ್ನು ತಿಳಿಯಬೇಕಿದೆ. ಈ ವರದಿ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಲಭಿಸಬೇಕಿದೆ,(ಏಜೆನ್ಸೀಸ್).
ಒಂದೇ ಕಾರಿನಲ್ಲಿ, ಜತೆಗೆ ಹೆಜ್ಜೆ
ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದೇ ತಡ ತ್ರಿಷಾ ಹೆಸರು ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಈ ಹಿಂದೆಯೂ ಹಲವರು ಬಾರಿ ದಳಪತಿ ಹೆಸರಿನೊಂದಿಗೆ ಕೇಳಿಬಂದ ಸ್ಟಾರ್ ನಟಿಯ ಹೆಸರು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದು ಸಾಕಷ್ಟು ಆರೋಪ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ಅಂದಹಾಗೆ, ವಿಜಯ್ ಮತ್ತು ತ್ರಿಷಾ ನಡುವೆ ಲವ್ ಅಫೇರ್ ಇದೆ ಅನ್ನೋ ಚರ್ಚೆ ಇಂದಿನದ್ದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ನಡೆಯುತ್ತಾ ಬರುತ್ತಿದೆ.
ಮದುವೆ ಸಮಾರಂಭದಲ್ಲಿ ತ್ರಿಷಾ-ವಿಜಯ್ ಮಿಂಚಿಂಗ್
ಇಬ್ಬರು ಜೊತೆಗೆ ನಿಂತು ತೆಗೆಸಿಕೊಂಡಿರುವ ಫೋಟೋ ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಊಹಾಪೋಹಗಳನ್ನು ಇನ್ನಷ್ಟು ಬಲಪಡಿಸುತ್ತಿದೆ. ತ್ರಿಷಾ ಅವರು ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಟಿ. ವಯಸ್ಸು 40 ದಾಟಿದರು ಕೂಡ ಇಂದಿಗೂ ಸ್ಟಾರ್ ನಾಯಕಿಯ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ತೆರೆಯ ಮೇಲೆ ವಿಜಯ್ ಮತ್ತು ತ್ರಿಷಾ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಕಳೆದ 20 ವರ್ಷಗಳಲ್ಲಿ ಅವರಿಬ್ಬರು 5 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿರುವುದು ಗಮನಾರ್ಹ.