ತ್ರಿಷಾ ಜತೆ ವಿಜಯ್ ಕಾಣಸಿಕೊಂಡ ಬೆನ್ನಲ್ಲೇ ಬಾಡಿಗಾರ್ಡ್ ಮಾಡಿದ ಪೋಸ್ಟ್ ವೈರಲ್​: ಅಭಿಮಾನಿಗಳಿಗೆ ಮತ್ತಷ್ಟು ಗೊಂದಲ! Actor Vijay  
ಕಾಲಿವುಡ್

ತ್ರಿಷಾ ಜತೆ ವಿಜಯ್ ಕಾಣಸಿಕೊಂಡ ಬೆನ್ನಲ್ಲೇ ಬಾಡಿಗಾರ್ಡ್ ಮಾಡಿದ ಪೋಸ್ಟ್ ವೈರಲ್​: ಅಭಿಮಾನಿಗಳಿಗೆ ಮತ್ತಷ್ಟು ಗೊಂದಲ! Actor Vijay

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ನಟಿ ತ್ರಿಷಾ ಜತೆ ಕಾಣಿಸಿಕೊಂಡ ವಿಜಯ್​
  • ಡಿವೋರ್ಸ್​ ವದಂತಿ ಬೆನ್ನಲ್ಲೇ ತ್ರಿಷಾ ಜತೆ ಕಾಣಿಸಿಕೊಂಡಿರುವುದು ನಾನಾ ಚರ್ಚೆಗಳಿಗೆ ದಾರಿ
  • ವಿಜಯ್​ ಬಳಿ ವಿಚ್ಛೇದನ ಕೋರಿ ಅರ್ಜಿ ಅಲ್ಲಿಸಿರುವ ಪತ್ನಿ ಸಂಗೀತಾ ಸೋರ್ನಲಿಂಗಂ
Actor Vijay : ಕಾಲಿವುಡ್​ ಖ್ಯಾತ ನಿರ್ಮಾಪಕ ಕಲ್ಪತಿ ಸುರೇಶ್ ಅವರ ಮನೆಯಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭಕ್ಕೆ ನಟ ವಿಜಯ್ ಮತ್ತು ನಟಿ ತ್ರಿಷಾ ಒಂದೇ ಕಾರಲ್ಲಿ ಆಗಮಿಸಿ, ಕಾರ್ಯಕ್ರಮಕ್ಕೆ ಹಾಜರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ವಿಜಯ್ ಅವರ ಬಾಡಿಗಾರ್ಡ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಅಭಿಮಾನಿಗಳನ್ನು ಮತ್ತಷ್ಟು ಗೊಂದಲಕ್ಕೆ ದೂಡಿದೆ.
ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ವಿಜಯ್, ಎರಡು ದಿನಗಳ ಹಿಂದೆ ನಟಿ ತ್ರಿಷಾ ಜೊತೆಗೆ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿ ಭಾರಿ ಸಂಚಲನ ಸೃಷ್ಟಿಸಿದೆ. ಈ ವಿಡಿಯೋ ನೋಡಿದ ವಿಜಯ್ ಅಭಿಮಾನಿಗಳು ಕೂಡ ವಿಜಯ್ ಅವರ ವ್ಯಕ್ತಿತ್ವದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಕೆಲವರು ವಿಜಯ್​ ಪರ ನಿಂತರೆ, ಇನ್ನೂ ಕೆಲವರು ವಿಜಯ್​ ವಿರುದ್ಧ ಮಾತನಾಡಿದ್ದಾರೆ.
ಇದಕ್ಕೆಲ್ಲ ಕಾರಣ ಏನೆಂದರೆ, ವಿಜಯ್ ಅವರ ಪತ್ನಿ ಸಂಗೀತಾ ಈಗಾಗಲೇ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಜಯ್ ಅವರಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವುದು. ಈ ಸಮಸ್ಯೆ ಇನ್ನೂ ಬಗೆಹರಿದಿರಲಿಲ್ಲ. ಏಪ್ರಿಲ್​ 20ರಂದು ವಿಚಾರಣೆ ನಡೆಯಲಿದ್ದು, ಅಂದು ವಿಜಯ್​ ಖುದ್ದು ವಿಚಾರಣೆಗೆ ಹಾಜರಿರಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಸಂಗೀತಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ವಿಜಯ್ ಬಗ್ಗೆ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ವಿಜಯ್ ಅವರು ಓರ್ವ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಆ ಬಗ್ಗೆ ಪ್ರಶ್ನೆ ಮಾಡಿದರೂ ಕ್ಯಾರೆ ಎನ್ನದೇ ಆ ಸಂಬಂಧವನ್ನು ಮುಂದುವರಿಸಿದ್ದಾರೆ ಎಂದು ವಿಜಯ್ ವಿರುದ್ಧ ಪತ್ನಿ ಸಂಗೀತಾ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಈ ಡಿವೋರ್ಸ್​ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಸೃಷ್ಟಿಸುತ್ತಿರುವಾಗಲೇ, 2 ದಿನಗಳ ಹಿಂದೆ, ನಟ ವಿಜಯ್ ಕಲ್ಪತಿ ಸುರೇಶ್ ಅವರ ಮನೆಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ತ್ರಿಷಾ ಜೊತೆ ಹಾಜರಾಗಿದ್ದರು. ಈ ವಿಡಿಯೋ ಜಾಲತಾಣದಲ್ಲಿ ಕಾಣಿಸಕೊಂಡ ಬೆನ್ನಲ್ಲೇ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ. ಕೆಲವರು ವಿಜಯ್ ವಿರುದ್ಧವೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಭಾರೀ ಚರ್ಚೆಯ ನಡುವೆ ವಿಜಯ್ ಅವರ ಅಂಗರಕ್ಷಕ ಅರುಣ್ ಸುರೇಶ್, ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಮೊದಲು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಆ ಪೋಸ್ಟ್‌ನಲ್ಲಿ, "ಎಲ್ಲಾ ವದಂತಿಗಳನ್ನು ಮೀರಿ ಮೇಲೇರುವ ಸಮಯ" ಎಂದು ಬರೆದಿದ್ದರು ಮತ್ತು ಬೆಂಕಿಯ ಎಮೋಜಿಯನ್ನು ಸಹ ಸೇರಿಸಿದ್ದರು. ಅಲ್ಲದೆ, ವಿಜಯ್ ಮತ್ತು ತ್ರಿಷಾ ನಟಿಸಿದ 'ಗಿಲ್ಲಿ' ಚಿತ್ರದ 'ಕೊಕ್ಕರಕೊಕ್ಕರ ಕೋ' ಹಾಡನ್ನು ಸಹ ಸೇರಿಸಿದ್ದರು. ಇದನ್ನು ನೋಡಿದ ಅಭಿಮಾನಿಗಳು ಏನು ನಡೆಯುತ್ತಿದೆ ಮತ್ತು ಸತ್ಯ ಏನು ಎಂದು ತಿಳಿಯದೆ ಗೊಂದಲಕ್ಕೊಳಗಾಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಮೌನ ಮುರಿದ ವಿಜಯ್​

ತಮ್ಮ ಡಿವೋರ್ಸ್​ ವದಂತಿ ಕುರಿತು ಮೌನ ಮುರಿದಿರುವ ವಿಜಯ್, ಈ ಬಗ್ಗೆ ಚಿಂತೆ ಮಾಡಬೇಡಿ ಎಂದು ಅಭಿಮಾನಿಗಳು ಮತ್ತು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. ಚೆನ್ನೈನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ(ಮಾ. 07) ಮಾತನಾಡಿರುವ ಅವರು, ಇತ್ತೀಚೆಗೆ ಹಲವಾರು ಸಮಸ್ಯೆಗಳು ಹೊರಹೊಮ್ಮಿವೆ, ಇದು ಅವರ ಬೆಂಬಲಿಗರಲ್ಲಿ ಕಳವಳವನ್ನುಂಟುಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವಾಗ ಯಾರನ್ನು ನೋಯಿಸದಂತೆ ಮತ್ತು ಆತ್ಮವಿಶ್ವಾಸದಿಂದ ಇರಲು ತಮ್ಮ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಮುಂದುವರೆದು, ಈ ವಿಷಯವು ಪಕ್ಷದ ಬೆಂಬಲಿಗರನ್ನು ಚಿಂತೆಗೀಡು ಮಾಡಬಾರದು ಮತ್ತು ಅದನ್ನು ನಾನೇ ನಿಭಾಯಿಸುತ್ತೇನೆ. ನೀವು ನನಗಾಗಿ ಹೋರಾಡುತ್ತಿದ್ದೀರಿ ಮತ್ತು ನೋಯಿಸಿಕೊಳ್ಳುತ್ತಿದ್ದೀರಿ. ಅದನ್ನು ನೋಡುವುದು ನನಗೆ ನೋವುಂಟುಮಾಡುತ್ತದೆ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ. ದುಃಖಿಸಬೇಡಿ ಅಥವಾ ಚಿಂತಿಸಬೇಡಿ. ನನಗೆ ದುಃಖವಿಲ್ಲ. ಒಳ್ಳೆಯದು ಮಾತ್ರ ಸಂಭವಿಸುತ್ತದೆ ಎಂದಿದ್ದಾರೆ, (ಏಜೆನ್ಸೀಸ್​).