ತಮಿಳು ನಟ ವಿಜಯ್ ಮತ್ತು ನಟಿ ತ್ರಿಷಾ
- ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮಿಳು ನಟ ವಿಜಯ್ ಜೊತೆ ತ್ರಿಷಾ ಹೆಸರು ಟ್ರೆಂಡಿಂಗ್
- ವಿಜಯ್-ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿರುವ ನಡುವೆಯೇ ನಟನೊಂದಿಗೆ ತ್ರಿಷಾ ಪ್ರತ್ಯಕ್ಷ
- ಭಾರೀ ವಿವಾದದ ನಡುವೆಯೇ ಮದುವೆ ಸಮಾರಂಭದಲ್ಲಿ ವಿಜಯ್-ತ್ರಿಷಾ ಜೋಡಿ, ಒಂದೇ ಕಾರಿನಲ್ಲಿ ಎಂಟ್ರಿ
- ಮದುವೆ, ವಿಚ್ಛೇದನ ಬಗ್ಗೆ ನಟಿ ನೀಡಿದ್ದ ಹೇಳಿಕೆ ಈಗ ವೈರಲ್
ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ (Vijay-Trisha) ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಇವರಿಬ್ಬರ ಡಿವೋರ್ಸ್ಗೆ ಮೂಲ ಕಾರಣವೇ ನಟಿ ತ್ರಿಷಾ ಎಂಬ ಆರೋಪಗಳು ಇನ್ನೂ ಜೋರಾಗಿವೆ. ಇದಕ್ಕೆ ಸಂಬಂಧಿಸಿದಂತೆ ಹಲವು ಪೋಸ್ಟ್‌ಗಳು ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ.
ಇಲ್ಲಿಯವರೆಗೂ ಇದ್ಯಾವುದಕ್ಕೂ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದ ಸ್ಟಾರ್ ಜೋಡಿ, ಇದೀಗ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಪ್ರತ್ಯಕ್ಷವಾದಗಿನಿಂದ ಸದ್ಯ ವದಂತಿಗಳೇ ಸತ್ಯ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಮಧ್ಯೆ, ಮದುವೆ ಮತ್ತು ಡಿವೋರ್ಸ್ ಬಗ್ಗೆ ನಟಿ ಆಡಿದ್ದ ಮಾತುಗಳು ಈಗ ಮತ್ತೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಡಿವೋರ್ಸ್ ಪ್ರಕರಣ ಹೊರಬೀಳುತ್ತಿದ್ದಂತೆ ತ್ರಿಷಾ ಮತ್ತು ದಳಪತಿ ಸುತ್ತಾಟ ಬಹಿರಂಗವಾಗಿದೆ. ಸಾಕಷ್ಟು ಆರೋಪಗಳು, ವಿವಾದಗಳ ನಡುವೆಯೂ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಮತ್ತು ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮತ್ತು ಮೀನಾಕ್ಷಿ ಅವರ ಪುತ್ರನ ವಿವಾಹದ ಆರತಕ್ಷತೆಯಲ್ಲಿ ಕಾಣಿಸಿಕೊಂಡಿದ್ದೇ ಸದ್ಯ ಇವರಿಬ್ಬರ ಸಂಬಂಧದ ಬಗ್ಗೆಯಿರುವ ಅನುಮಾನಗಳನ್ನು ಹೆಚ್ಚಿಸಿವೆ.
ತ್ರಿಷಾ ಹಳೆಯ ಹೇಳಿಕೆ ವೈರಲ್
2016ರಲ್ಲಿ ತ್ರಿಷಾ ಕೃಷನ್, ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನಲ್ಲಿ, ನನಗೆ ಈ ಡಿವೋರ್ಸ್ನಲ್ಲಿ ನಂಬಿಕೆಯಿಲ್ಲ. ನಾನು ಯಾರಿಗೂ ನೋವು ಮಾಡೋಕೆ ಇಷ್ಟಪಡಲ್ಲ. ಅತೃಪ್ತ ಜೀವನ ಸಾಗಿಸೋದು ನನ್ನ ಹಾದಿಯಲ್ಲ. ಹೀಗಾಗಿ, ನಾನು ಮದುವೆಯಾಗುವ ಮುನ್ನ 100 ಬಾರಿ ಯೋಚನೆ ಮಾಡುತ್ತೇನೆ. ಜೀವನ ಪರ್ಯಂತ ಜೊತೆಗಿರುವ ವ್ಯಕ್ತಿ ನನ್ನ ಸಂಗಾತಿಯಾಗಲು ಯೋಗ್ಯನೇ ಎಂದು ನನನ್ನೇ ನಾನೇ ಪ್ರಶ್ನಿಸಿಕೊಳ್ಳುತ್ತೇನೆ. ಕಾರಣ, ದಾಂಪತ್ಯದ ಬಳಿಕ ಅವರನ್ನು ಬಿಟ್ಟು ದೂರವಾಗುವುದು ಅಥವಾ ಡಿವೋರ್ಸ್ ಪಡೆಯುವುದು ನನ್ನ ಉದ್ಧೇಶವಲ್ಲ ಎಂದರು.
ಮಾತು ಮುಂದುವರೆಸಿ, ನನ್ನ ಸುತ್ತಮುತ್ತಲು ಬದುಕುತ್ತಿರುವ ಸಾಕಷ್ಟು ಜನರನ್ನು ನೋಡುತ್ತಿದ್ದೇನೆ. ಸಾಕಷ್ಟು ಮಂದಿ ಮದುವೆಯಾಗಿ, ಇಷ್ಟವಿಲ್ಲದೇ ಇದ್ದರೂ ಸಹ ಯಾವುದೋ ಒಂದು ಕಾರಣಕ್ಕೆ ಅವರೊಟ್ಟಿಗೆ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ನನಗೆ ಅಂಥಾ ಜೀವನ ಬೇಕಾಗಿಲ್ಲ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ನನಗಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿರುವುದು ಈಗ ವೈರಲ್ ಆಗಿದೆ. ವಿಜಯ್ ಹೆಸರಿನಲ್ಲಿ ತ್ರಿಷಾ ಹೆಸರು ಕೇಳಿಬಂದಾಗಿನಿಂದ ಇಂತಹ ಹಲವು ವಿಷಯಗಳು ಮತ್ತೆ ಮುನ್ನೆಲೆಗೆ ಬರುತ್ತಿರುವುದು ಗಮನಾರ್ಹ,(ಏಜೆನ್ಸೀಸ್).