ಸಿನಿವಾಣಿ

ಮಗ ಜೇಸನ್ ಸಂಜಯ್ ಜೊತೆಗಿನ ಫೋಟೋ​ ಫ್ರೇಮ್ ಎತ್ತಿ ಹಿಡಿದ CM Vijay; 'ಸಿಗ್ಮಾ' ಚಿತ್ರಕ್ಕೆ ಪರೋಕ್ಷ ಬೆಂಬಲ

  • ಪುತ್ರನ ಸಿಗ್ಮಾ ಸಿನಿಮಾಕ್ಕೆ ಪರೋಕ್ಷವಾಗಿ ಬೆಂಬಲ ಕೊಟ್ಟ ಸಿಎಂ ವಿಜಯ್​

  • ಮಧುರಾಂಧಗಂನಲ್ಲಿ ನಡೆದ ರೋಡ್ ಶೋ ವೇಳೆ ಅಭಿಮಾನಿ ಕೊಟ್ಟ ಫ್ರೇಮ್​ ಎತ್ತಿ ಹಿಡಿದ ವಿಜಯ್​

  • ಮಗ ಜೇಸನ್​ನೊಂದಿಗಿನ ಫೋಟೋ ಎತ್ತಿ ಹಿಡಿಯುವ ಮೂಲಕ ಸಿಗ್ಮಾಗೆ ಬೆಂಬಲ

CM Vijay Holds son Jason Sanjay’s photo: ತಮಿಳುನಾಡಿನ ಸಿಎಂ ವಿಜಯ್​ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಅವರ ಪುತ್ರ ಜೇಸನ್​ ಸಂಜಯ್​ ನಿರ್ದೇಶನದ ಸಿಗ್ಮಾ ಸಿನಿಮಾವು ರಿಲೀಸ್ ಆಗಿದೆ. ಇದಕ್ಕೆ ಬೆಂಬಲ ಕೊಡ್ತಾರಾ? ಸಿನಿಮಾ ಬಗ್ಗೆ ವಿಮರ್ಶೆ ನೀಡುತ್ತಾರಾ ಎನ್ನುವ ಸಾಕಷ್ಟು ಗೊಂದಲಗಳು ಅವರ ಅಭಿಮಾನಿಗಳಲ್ಲಿ ವ್ಯಕ್ತವಾಗುತ್ತಿದೆ. ಆ ಮಧ್ಯೆ, ವಿಜಯ್​ ಅವರು ರೋಡ್​ಶೋ ವೇಳೆ ತಾವು ಮತ್ತು ಮಗ ಇರುವ ಫೋಟೋ ಫ್ರೇಮ್​​ ಎತ್ತಿ ಹಿಡಿದು ಪ್ರದರ್ಶಿಸುವ ಮೂಲಕ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.

ಹೌದು, ಸಿಎಂ ವಿಜಯ್​ ಅವರು ಮಧುರಾಂಧಗಂನಲ್ಲಿ ಚುನಾವಣಾ ಪ್ರಚಾರದ ರೋಡ್ ಶೋನಲ್ಲಿದ್ದಾಗ, ಅಭಿಮಾನಿಯೊಬ್ಬರು ಅವರಿಗ ಗಿಫ್ಟ್​ ಆಗಿ, ಮಗ ಜೇಸನ್ ಹಾಗೂ ಸಿಎಂ ಇರುವ ಚಿತ್ರದ ಫ್ರೇಮ್​ ಅನ್ನು ಕೊಟ್ಟರು. ಅದಲ್ಲಿ ಸಿಗ್ಮಾ ಎಂದು ಸಹ ಉಲ್ಲೇಖಿಸಲಾಗಿದೆ. ಆ ಫ್ರೇಮ್​ ಅನ್ನು ಸಿಎಂ ವಿಜಯ್​ ಅವರು ಎಲ್ಲರಿಗೂ ಕಾಣುವಂತೆ ರೋಡ್​ಶೋನಲ್ಲಿ​ ಎತ್ತಿ ಹಿಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಸಿಗ್ಮಾ ಸಿನಿಮಾ

ಜೇಸನ್​ ಸಂಜಯ್​ ಆಕ್ಷನ್​ ಕಟ್ ಹೇಳಿರುವ ಸಿಗ್ಮಾ ಸಿನಿಮಾ ಅಕ್ಟೋಬರ್​ 2ರಂದು ರಿಲೀಸ್​ ಆಗಿದೆ. ಈ ಸಿನಿಮಾದಲ್ಲಿ ಸುದೀಪ್​ ಕಿಶನ್​, ಫರಿಯಾ ಅಬ್ದುಲ್ಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಪತ್​ ರಾಜ್​, ರಾಜು ಸುಂದರಂ, ಶೀಲಾ ರಾಜ್​ ಕುಮಾರ್​ ಸಿನಿಮಾದಲ್ಲಿದ್ದಾರೆ. ಭೂಗತ ಲೋಕ ಹಾಗೂ ಡ್ರಗ್​ ಮಾಫಿಯಾ ನಿಧಿ ಹುಡುಕಾಟದ ಸುತ್ತ ಸಿನಿಮಾದ ಕತೆ ಸುತ್ತುತ್ತದೆ.

ಸಿಗ್ಮಾದ ಪ್ರೀಮಿಯರ್​ ಶೋ ವೇಳೆ ಜೇಸನ್​ ಸಂಜಯ್​ ಅವರ ತಾಯಿ ಸಂಗೀತಾ ಸ್ವರ್ಣಲಿಂಗಂ ಹಾಗೂ ತಂದಿ ದಿವ್ಯಾ ಸಾಶಾ ಸಿನಿಮಾಕ್ಕೆ ಬಂದಿದ್ದರು. ರಾಜಕೀಯದಲ್ಲಿ ಬ್ಯುಸಿಯಾಗಿರುವ ಸಿಎಂ ವಿಜಯ್​ ಅವರು ಚಿತ್ರದ ಮೊದಲ ಪ್ರದರ್ಶನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇನ್ನೂ ಇಡೀ ಕುಟುಂಬವು ಸಿಗ್ಮಾ ಟಿ ಶರ್ಟ್​ ಧರಿಸಿ ಸಂಭ್ರಮಿಸಿದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸ್ಟಾರ್​ಗಳ ಸಿನಿಮಾ ಮಧ್ಯೆ ಉತ್ತಮ ರೆಸ್ಪಾನ್ಸ್

ಸಿಗ್ಮಾ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಭಾರತದಲ್ಲಿ 2.3 ಕೋಟಿ ಗಳಿಗೆ ಕಂಡಿದೆ. ತಮಿಳುನಾಡಿನಾದ್ಯಂತ 1,813 ಶೋಗಳು ಪ್ರದರ್ಶನ ಕಾಣುತ್ತಿದೆ. ಹೊಸದಾಗಿ ಸಿನಿಮಾ ನಿರ್ದೇಶಿಸಿರುವ ನಿರ್ದೇಶಕನಿಗೆ ಇದೊಂದು ಉತ್ತಮ ರೆಸ್ಪಾನ್ಸ್​ ಅಂತಲೇ ಹೇಳಬಹುದುಆಗಿದೆ.

ವಿಜಯ್​ ಸೇತುಪತಿ ಅವರ ಬತಾತ ಹಾಗೂ ಫಹಾದ್​ ಫಾಸಿಲ್ ಅವರ ಡೋಂಟ್​ ಟ್ರಬಲ್​ ದಿ ಟ್ರಬಲ್​ ಸಿನಿಮಾ ರಿಲೀಸ್​ ಆಗಿದೆ. ಈ ಚಿತ್ರದ ಮಧ್ಯೆ ಸಿಗ್ಮಾಗೆ ಪ್ರೇಕ್ಷಕರಿಗೆ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಸವಾಲುಗಳ ಮಧ್ಯೆ ಸಿಗ್ಮಾ ಸಿನಿಮಾವು ಬಾಕ್ಸ್​​ ಆಫೀಸ್​​​​ನಲ್ಲಿ ಧೂಳೆಬ್ಬಿಸುವ ಎಲ್ಲ ಸಾಧ್ಯತೆ ಇದೆ.

ತಂದೆ ಬಗ್ಗೆ ಹೀಗಂದಿದ್ರು ಜೇಸನ್​

ಇತ್ತೀಚೆಗೆ ಸಿಗ್ಮಾ ಪ್ರಚಾರದ ಸಲುವಾಗಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅವರು ಸಿಎಂ ವಿಜಯ್​ ಅವರ ಬಗ್ಗೆ ಹೇಳಿಕೊಂಡಿದ್ದು ಹೀಗೆ. 'ನನ್ನ ತಂದೆ ಬಹಳ ತಾಳ್ಮೆ ಹಾಗೂ ಶಾಂತರೂಪದವರು. ನಾನು ಒಂದು ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ ನೀಡಲು 10 ಸೆಕೆಂಡ್​ ತೆಗೆದುಕೊಳ್ಳುತ್ತಾರೆ. ಅವರಿಗೆ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಚಿತ್ರ ನೋಡಿದ ನಂತರ ನನ್ನ ಬಗ್ಗೆ ಹೆಮ್ಮೆ ಪಡುತ್ತಾರೆ ಅದಂತೂ ನಿಜ' ಎಂದು ಹೇಳಿದ್ದರು.

'ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದಾಗ ತಂದೆ ಮೊದಲು ಬೆಂಬಲ ಕೊಟ್ಟರು. ನನ್ನ ತಂದೆ ಸಿನಿಮಾ ಪ್ರಚಾರ ಮಾಡೋದಿಲ್ಲ. ಸಿನಿಮಾ ಪ್ರಚಾರ ಚಿತ್ರಕ್ಕಷ್ಟೇ ಸೀಮಿತವಾಗಿರಬೇಕು. ಅದನ್ನೂ ಮೀರಿ ಬೇರೆ ಅನಾವಶ್ಯಕ ಚರ್ಚೆಗೆ ಎಡೆಮಾಡಿಕೊಡುವುದು ನನಗೆ ಇಷ್ಟವಿಲ್ಲ' ಎಂದು ಹೇಳಿದ್ದರು, (ಏಜೆನ್ಸೀಸ್).