ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ ಇದೀಗ 50ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಸಿನಿಘಮಾ ಸಂಸ್ಥೆಯ ಜತೆಗೂಡಿ ಹೊಸ ಸಾಹಸಕ್ಕೆ ಮುಂದಾಗಿದೆ. ಪ್ರತಿಭಾ ಸಂಪದ ಯೋಜನೆ ರೂಪಿಸಿದ್ದು, 100 ಕಿರುಚಿತ್ರಗಳನ್ನು ನಿರ್ವಿುಸುವ ಯೋಜನೆ ಹಮ್ಮಿಕೊಂಡಿದೆ. ಅದರಲ್ಲಿ 10 ಕಿರುಚಿತ್ರಗಳನ್ನು ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕರು ನಿರ್ದೇಶನ ಮಾಡಿದರೆ, ಇನ್ನುಳಿದ 90 ಶಾರ್ಟ್ ಸಿನಿಮಾಗಳನ್ನು ಇಬ್ಬಿಬ್ಬರಂತೆ ಒಟ್ಟು 45 ತಂಡಗಳನ್ನು ಮಾಡಿ ಅವರಿಂದ ಮಾಡಿಸುವ ಯೋಜನೆ ಇದು.
ಇವುಗಳಲ್ಲಿ ಆಯ್ದ 60 ಕಿರುಚಿತ್ರಗಳು ಜುಲೈನಲ್ಲಿ ನಡೆಯಲಿರುವ ಕಿರುಚಿತ್ರೋತ್ಸವದಲ್ಲಿ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಪ್ರದರ್ಶನವಾಗಲಿವೆ. ಇವುಗಳಲ್ಲಿ ಆಯ್ದ ಪ್ರತಿಭಾವಂತರನ್ನು ಬಳಸಿಕೊಂಡು 10 ಸಿನಿಮಾ ಘೋಷಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ಸಿನಿಘಮದ ಮುಖ್ಯಸ್ಥ ಎಂ.ಎಲ್ ಪ್ರಸನ್ನ.
ಚಾಮುಂಡೇಶ್ವರಿ ಸ್ಟುಡಿಯೋದ ಮುಖ್ಯಸ್ಥೆ ಶಡಗೋಪನ್ ಮಾತನಾಡಿ, ಒಂದೊಳ್ಳೆ ಪರಿಕಲ್ಪನೆ ಮೂಲಕ ಆಗಮಿಸುತ್ತಿದ್ದೇವೆ. ಕೇವಲ ಸಿನಿಮಾ ಅಷ್ಟೇ ಅಲ್ಲದೆ, ಉದ್ಯೋಗಾವಕಾಶ ಮತ್ತು ಸಿನಿಮಾ ಆಡಿಷನ್ಗಳ ಮಾಹಿತಿ ಇರಲಿದೆ ಎಂದರು. ನಿರ್ದೇಶಕ ಶಶಾಂಕ್, ವೆಂಕಟ್ಗೌಡ, ಸಿಹಿಕಹಿ ಚಂದ್ರು ಸೇರಿ ಹಲವರು ಕಾರ್ಯಕ್ರಮದಲ್ಲಿದ್ದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..