ಸಿನಿವಾಣಿ

ಅಮೆಜಾನ್​ನಲ್ಲಿ ಸಿನಿಮೋತ್ಸವ; ತಿಂಗಳು ಪೂರ್ತಿ ಸಿನಿಮಾ ಹಬ್ಬ

Webdesk - Ravikanth

ಬೆಂಗಳೂರು: ಕನ್ನಡದ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ತೆರೆಕಾಣುವುದು ತುಂಬ ಅಪರೂಪ. ಈ ಹಿಂದೆ ಪುನೀತ್ ರಾಜಕುಮಾರ್ ನಿರ್ವಣದ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳು ಅಮೆಜಾನ್​ನಲ್ಲಿ ಬಿಡುಗಡೆಯಾಗಿದ್ದನ್ನು ಬಿಟ್ಟರೆ, ಮತ್ಯಾವ ಚಿತ್ರಗಳೂ ಆ ಸಾಹಸಕ್ಕೆ ಕೈ ಹಾಕಿರಲಿಲ್ಲ. ಇದೀಗ ‘ಇಕ್ಕಟ್’ ಚಿತ್ರ ನೇರವಾಗಿ ಒಟಿಟಿ ಹಾದಿ ಹಿಡಿದಿದೆ. ಇದೇ ತಿಂಗಳು 21ರಂದು ಸ್ಟ್ರೀಮಿಂಗ್ ಆರಂಭಿಸಲಿದೆ. ‘ಇಕ್ಕಟ್’ ಸಿನಿಮಾ ಶೀರ್ಷಿಕೆಗೆ ತಕ್ಕಂತೆಯೇ ಕಥಾಹಂದರ ಹೊಂದಿದೆ. ವಿಚ್ಛೇದನ ಬಯಸುವ ದಂಪತಿ, ಇನ್ನೇನು ಡಿವೋರ್ಸ್​ಗೆ ಮುಂದಾಗುತ್ತಾರೆ ಎಂದಾದಾಗ ಲಾಕ್​ಡೌನ್ ಘೋಷಣೆ ಆಗುತ್ತದೆ. ಆಗ ಆ ಜೋಡಿಯ ವ್ಯಥೆ ಎಂಥದ್ದು ಎಂಬುದನ್ನು ಹಾಸ್ಯದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರಾದ ಇಶಮ್ ಮತ್ತು ಹಸೀನ್ ಖಾನ್. ನಾಗಭೂಷಣ್ ಮತ್ತು ‘ಬಿಗ್​ಬಾಸ್’ ಖ್ಯಾತಿಯ ನಟಿ ಭೂಮಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಸುಂದರ್ ವೀಣಾ, ಆನಂದ್ ನೀನಾಸಂ ಇನ್ನುಳಿದ ಪಾತ್ರ ವರ್ಗ ದಲ್ಲಿದ್ದಾರೆ. ‘ಲೂಸಿಯಾ’ ಪವನ್ ಕುಮಾರ್ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

ಬರುತ್ತಿವೆ ಸಾಲು ಸಾಲು ಚಿತ್ರಗಳು: ಕನ್ನಡದಲ್ಲಿ ‘ಇಕ್ಕಟ್’ ಚಿತ್ರ 21ರಂದು ಬಿಡುಗಡೆ ಆಗುತ್ತಿದ್ದರೆ, ಪರಭಾಷೆಯ ಹಲವು ಸಿನಿಮಾಗಳೂ ಸಾಲಿನಲ್ಲಿವೆ. ಆ ಪೈಕಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿರುವ, ಟೀಸರ್ ಮೂಲಕ ಸದ್ದು ಮಾಡಿರುವ ‘ತೂಫಾನ್’ ಚಿತ್ರ 16ಕ್ಕೆ ಪ್ರಸಾರ ಆರಂಭಿಸಲಿದೆ. ಮಲಯಾಳಂನಲ್ಲಿ ಫಹಾದ್ ಫಾಸಿಲ್ ನಟಿಸಿರುವ ‘ಮಲಿಕ್’ ಜುಲೈ 15 ಮತ್ತು ಆರ್ಯ ನಟಿಸಿರುವ ತಮಿಳಿನ ‘ಸರ್​ಪಟ್ಟ’ ಚಿತ್ರ 22ಕ್ಕೆ ಸ್ಟ್ರೀಮ್ ಆಗಲಿದೆ. 24ಕ್ಕೆ ವೆಂಕಟೇಶ್ ಅಭಿನಯದ ‘ನಾರಪ್ಪ’, ಇದರ ಜತೆಗೆ ‘ಹಾಸ್ಟೆಲ್ ಡೇಸ್’, ‘ಟಾಮ್ ಆಂಡ್ ಜೆರ್ರಿ’ ಸೇರಿ ಹಲವು ಇಂಗ್ಲಿಷ್ ಸಿನಿಮಾಗಳೂ ಇದೇ ತಿಂಗಳಲ್ಲಿ ಅಮೆಜಾನ್​ನಲ್ಲಿ ರಿಲೀಸ್ ಆಗಲಿವೆ.

ಇವೆಲ್ಲ ಬಿಡುಗಡೆಯಾಗಲಿಕ್ಕಿರುವ ಹೊಸ ಚಿತ್ರಗಳ ಪಟ್ಟಿಯಾದರೆ, ಎರಡು ವರ್ಷಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಭುವನ್ ಪೊನ್ನಣ್ಣ ಅಭಿನಯದ ‘ರಾಂಧವ’ ಈಗಾಗಲೇ ಸದ್ದಿಲ್ಲದೆ ಅಮೆಜಾನ್​ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಭುವನ್​ಗೆ ನಾಯಕಿಯಾಗಿ ಅಪೂರ್ವ ಶ್ರೀನಿವಾಸನ್ ನಟಿಸಿದ್ದು, ಮಿಕ್ಕಂತೆ ಜಹಾಂಗೀರ್, ಯಮುನಾ ಶ್ರೀನಿಧಿ ಮುಂತಾದವರು ನಟಿಸಿದ್ದಾರೆ.