ಸಿನಿವಾಣಿ

ಮಧ್ಯಾಹ್ನ ಊಟ ಮಾಡುತ್ತಿದ್ದ ಚಿರುಗೆ ದಿಢೀರ್ ಕಾಣಿಸಿಕೊಂಡಿತ್ತು ಎದೆನೋವು...

ಬೆಂಗಳೂರು: 2 ಗಂಟೆಗೆ ಕುಟುಂಬದೊಟ್ಟಿಗೆ ಊಟ ಮಾಡಲು ಕೂತಾಗ, ಎದೆ ನೋವು ಕಾಣಿಸಿಕೊಂಡಿದೆ. 2.15 ಅಷ್ಟೊತ್ತಿಗೆ ಜಯನಗರದ ಸಾಗರ್​ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಸ್ಪತ್ರೆಗೆ ಕರೆತಂದು ಕೆಲವೇ ನಿಮಿಷದಲ್ಲಿ ಹೃದಯಾಘಾತ ಸಂಭವಿಸಿ, ಸಾವನ್ನಪ್ಪಿದ್ದಾರೆ. ಉಸಿರಾಟದ ಸಮಸ್ಯೆಯೂ ಎದುರಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ, ನಿಧನ ಹೊಂದಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಅವರ ತಂದೆಯ ಜತೆ ಕುಳಿತು ಊಟ ಮಾಡುತ್ತಿರುವಾಗ ಅವರಿಗೆ ಲಘು ಹೃದಯಾಘಾತವಾಗಿತ್ತು. ಆಗಲೂ ಕೂಡ ಒಮ್ಮೆ ಆಸ್ಪತ್ರೆಗೆ ಹೋಗಿದ್ದರು. ಆದರೆ ಇಂದು ಮತ್ತೆ ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದಾರೆ.

2009ರಲ್ಲಿ ‘ವಾಯುಪುತ್ರ’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ಚಿರಂಜೀವಿ ಸರ್ಜಾ, ಬಳಿಕ ಗಂಡೆದೆ, ಚಿರು ಸಿನಿಮಾದಲ್ಲಿ ನಟಿಸಿದರು. ಮಹೇಶ್​ ಬಾಬು ಜತೆ ಚಿರು ಸಿನಿಮಾ ಮಾಡಿದ ಬಳಿಕ ಹತ್ತಾರು ಅವಕಾಶಗಳು ಅವರನ್ನು ಅರಸಿಕೊಂಡು ಬಂದಿದ್ದವು. ಅಲ್ಲಿಂದ ಇಲ್ಲಿಯವರೆಗೂ ಒಟ್ಟು 22 ಸಿನಿಮಾಗಳಲ್ಲಿ ಚಿರಂಜೀವಿ ನಟಿಸಿದ್ದಾರೆ. ಇನ್ನೂ ಐದಾರು ಸಿನಿಮಾಗಳ ಶೂಟಿಂಗ್​ ಸಹ ನಡೆಯುತ್ತಿದ್ದವು.