ಸಿನಿವಾಣಿ

VIDEO| ಚಿರು ಲಾಸ್ಟ್ ಟಿಕ್​ಟಾಕ್​ ಇದು; ನಿಧನದ ಬಳಿಕ ಫಾಲೋವರ್ಸ್ ದ್ವಿಗುಣ!

ಬೆಂಗಳೂರು: ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ, ನಿಧನದ ಬೆನ್ನಲ್ಲೇ ಅವರ ಹಳೇ ಫೋಟೋಗಳು ಮತ್ತು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಅವರ ಟಿಕ್​ಟಾಕ್​ ವಿಡಿಯೋಗಳನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಅದ್ಯಾವ ಮಟ್ಟಿಗೆ ಅಂದರೆ, ಅವರ ನಿಧನದ ಸುದ್ದಿ ಗೊತ್ತಾಗುವುದಕ್ಕೂ ಮುನ್ನ ಇದ್ದ ಟಿಕ್​ಟಾಕ್​ ಫಾಲೋವರ್ಸ್​ ಮತ್ತು ಆ ವಿಡಿಯೋ ವೀಕ್ಷಣೆ ನಿಧನದ ಸುದ್ದಿ ಗೊತ್ತಾದ ಬಳಿಕ ಭಾರೀ ಏರಿಕೆ ಕಂಡಿದೆ.

ಹೌದು, 2019 ಮೇ ತಿಂಗಳಲ್ಲಿ ಟಿಕ್​ಟಾಕ್​ಗೆ ಎಂಟ್ರಿಕೊಟ್ಟಿದ್ದ ಚಿರು ಸರ್ಜಾ, ಕಳೆದ ಒಂದು ವರ್ಷದ ಅವಧಿಯಲ್ಲಿ ಒಟ್ಟು 14 ವಿಡಿಯೋಗಳನ್ನು ಮಾಡಿದ್ದಾರೆ. 2ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಚಿರು ಹೊಂದಿದ್ದರು. ವಿಡಿಯೋ ವೀಕ್ಷಣೆಯ ವಿಚಾರದಲ್ಲೂ ಅಷ್ಟಕಷ್ಟೇ. ಆದರೆ, ಯಾವಾಗ ಚಿರು ಸಾವು ಬರಸಿಡಿಲಿನಂತೆ ಅಪ್ಪಳಿಸಿತೋ, ಟಿಕ್​ಟಾಕ್​ನಲ್ಲಿ ಅವರನ್ನು ಫಾಲೋ ಮಾಡುವವರ ಸಂಖ್ಯೆ ದ್ವಿಗುಣವಾಗಿದೆ. ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಟಿಕ್​ಟಾಕ್​ ಬಳಕೆದಾರರು ಅವರನ್ನು ಹಿಂಬಾಲಿಸುತ್ತಿದ್ದಾರೆ.

ಹೌದು, ನಾಲ್ಕೈದು ಲಕ್ಷ ವೀಕ್ಷಣೆಗಷ್ಟೇ ಸೀಮಿತವಾಗಿದ್ದ ಅವರ ಟಿಕ್​ಟಾಕ್​ ವಿಡಿಯೋಗಳು, ಇದೀಗ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿವೆ. ಅದರಲ್ಲೂ ಅವರ ಕೊನೆಯ ವಿಡಿಯೋವನ್ನು ಮೂರೂವರೆ ಮಿಲಿಯನ್​ (35ಲಕ್ಷ) ಬಾರಿ ವೀಕ್ಷಣೆಗೊಳಪಟ್ಟಿದೆ. ಕುಟುಂದ ಜತೆಗಿನ ವಿಡಿಯೋವನ್ನು 54 ಲಕ್ಷ ಬಾರೀ ವೀಕ್ಷಣೆ ಆಗಿದೆ.