ಪವನ್​ ಕಲ್ಯಾಣ್​ ವಿರುದ್ಧ ನೆಟ್ಟಿಗರಿಂದ ಟ್ರೋಲ್​​ 
ಸಿನಿವಾಣಿ

ಮದುವೆಗೂ ಮುನ್ನವೇ ಮಕ್ಕಳು, ರಾಜಕೀಯ ಒತ್ತಡಕ್ಕಾಗಿ ವಿವಾಹ ನಾಟಕ?; ಪವನ್​ ಕಲ್ಯಾಣ್ ವಿರುದ್ಧ ಹೆಚ್ಚಿದ ಟ್ರೋಲ್..Pawan Kalyan

  • ಪವನ್​ ಕಲ್ಯಾಣ್​-ಅನ್ನಾ ಕೊಣಿದಾಲಗೆ ಡಿವೋರ್ಸ್​​​, ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಟ್ರೋಲ್.​

  • ಈಗಾಗಲೇ ನಾಲ್ಕನೇ ಪತ್ನಿಯೂ ಇದ್ದಾರೆ ಎಂದು ಟ್ರೋಲ್​ ಮಾಡಿದ ನೆಟ್ಟಿಗರು.

  • ಮದುವೆಗೂ ಮುನ್ನವೇ ಮಕ್ಕಳು, ರಾಜಕೀಯ ಸಿಂಹಾಸನಕ್ಕಾಗಿ ಮದುವೆಯಾದರು ಎಂದು ಟ್ರೋಲ್​

  • ಮದುವೆ ವಿಚಾರದಲ್ಲಿ ಗಿನ್ನೆಸ್ ಗೆದ್ದಂತೆ, ನಾಲ್ಕನೇ ಪತ್ನಿ ಹುಡುಕಾಟ ಮಾಡುತ್ತಿರುವಂತೆ ಟ್ರೋಲ್ ಮಾಡಿದ ನೆಟ್ಟಿಗರು.

After Divorce with Anna Pawan kalyan troll: ತೆಲುಗು ಚಿತ್ರರಂಗದ 'ಪವರ್ ಸ್ಟಾರ್' ಹಾಗೂ ಜನಸೇನಾ ನಾಯಕ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ದೀಪಾವಳಿ ಹಬ್ಬದಂದೇ ತಮ್ಮ ಮೂರನೇ ಪತ್ನಿ ಅನ್ನಾ ಲೇಜ್ನೆವಾ ಅವರಿಂದ ಬೇರ್ಪಟ್ಟಿರುವುದಾಗಿ ಅವರು ಬಹಿರಂಗಪಡಿಸುತ್ತಿದ್ದಂತೆ, ಅವರ ಇಡೀ ಬದುಕಿನ ಮದುವೆ ಹಾಗೂ ಮಕ್ಕಳ ಟೈಮ್‌ಲೈನ್ ಅನ್ನು ನೆಟ್ಟಿಗರು ಜಾಲಾಡುತ್ತಿದ್ದಾರೆ. ಅಲ್ಲದೇ, ಈಗಾಗಲೇ ಅವರು ನಾಲ್ಕನೇ ಹೆಂಡತಿಯನ್ನು ಹುಡುಕಿಕೊಂಡಿರಬಹುದು ಎಂದು ಟ್ರೋಲ್​ ಮತ್ತು ಟೀಕ, ಮೀಮ್ಸ್​​ಗೆ ಗುರಿಯಾಗಿದ್ದಾರೆ.

2013ರಲ್ಲಿ ಪವನ್​ ಕಲ್ಯಾಣ್​​ ಅವರು ರಷ್ಯಾದ ಪ್ರಜೆಯಾದ ಅನ್ನಾ ಅವರನ್ನು ಮದುವೆಯಾದರು. 2026ರಲ್ಲಿ ಡಿವೋರ್ಸ್ ಕೊಟ್ಟಿದ್ದಾರೆ. ಇನ್ನೂ 1991ರಲ್ಲಿ ನಂದಿನಿ ಅವರನ್ನು ಮದುವೆಯಾದ ಅವರು 2008ರಲ್ಲಿ ದೂರವಾದರು. ನಿರ್ದೇಶಕಿ ರೇಣು ಅವರನ್ನು 2009 ಜನವರಿ 28ರಂದು ಮದುವೆಯಾದ ಅವರು, 2012ರಲ್ಲಿ ಡಿವೋರ್ಸ್​​​ ಬಗ್ಗೆ ಘೋಷಿಸಿದ್ದರು. ಅದಾದ ನಂತರ ಮದುವೆಯಾಗಿದ್ದೇ ಅನ್ನಾ ಅವರನ್ನು.

ನೆಟ್ಟಿಗರ ಆರೋಪವೇನು?

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಪವನ್​ ಕಲ್ಯಾಣ್ ಮದುವೆ ಮತ್ತು ಮಕ್ಕಳ ಜನನದ ಟೈಮ್‌ಲೈನ್ ಕುರಿತು ನೆಟಿಗರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ವನ್​ ಕಲ್ಯಾಣ್​ ಅವರ ಮದುವೆ ಚಾರ್ಟ್​ ನೋಡಿ, ಅವರ ಮದುವೆಯಾದ ದಿನ ಹಾಗೂ ಮಕ್ಕಳು ಜನಿಸಿದ ದಿನಾಂಕವನ್ನು ಸರಿಯಾಗಿ ಗಮನಿಸಿ...ಅವರು ಮದುವೆಗೂ ಮುನ್ನವೇ ಮಕ್ಕಳನ್ನು ಹೊಂದಿದ್ದರು, ನಂತರ ರಾಜಕೀಯ ಪ್ರವೇಶಕ್ಕಾಗಿ, ಒತ್ತಡಕ್ಕೆ ಮಣಿದು ಮದುವೆಯಾದರು ಎನ್ನುವುದು ತೋರುತ್ತದೆ ಎಂದು ಟ್ವೀಟ್ ಹಂಚಿಕೊಳ್ಳುತ್ತಿದ್ದಾರೆ.

ಇದರಲ್ಲಿ ಹಂಚಿಕೊಂಡಿರುವ ಪವನ್​ ಕಲ್ಯಾಣ್​ ಫ್ಯಾಮಿಲಿ ಚಾರ್ಟ್ ಪ್ರಕಾರ, ಪವನ್​ ಕಲ್ಯಾಣ್​ ಮತ್ತು ರೇಣು ದೇಸಾಯಿಗೆ ಮದುವೆಗೂ ಮುನ್ನವೇ ಮಗು ಇತ್ತು. 2004ರಲ್ಲಿ ಅಕೀರ ನಂದನ್ ಜನಿಸಿದ ನಂತರ 2009ರಲ್ಲಿ ಇವರು ಕಾನೂನುಬದ್ಧವಾಗಿ ವಿವಾಹವಾಗಿದ್ದರು. ನಂತರ 2010ರಲ್ಲಿ ಆದ್ಯ ಜನಿಸಿದರು.

ಇನ್ನೂ ಅನ್ನಾ ಲೆಜ್ನೆವಾ-ಪವನ್​ ಕಲ್ಯಾಣ್​ ದಾಂಪತ್ಯ ವಿಚಾರಕ್ಕೆ ಬಂದರೆ, ಪೋಲೆನಾ ಅಂಜನಾ ಪವನೋವಾ ಮಾರ್ಚ್​​ 2013ರಲ್ಲಿ ಹುಟ್ಟಿದ್ದಾರೆ. ಅದೇ ವರ್ಷ 30 ಸೆಪ್ಟೆಂಬರ್ 2013ರಲ್ಲಿ ಅವರನ್ನು ಮದುವೆ ಮಾಡಿಕೊಂಡಿದ್ದಾರೆ ಪವನ್​ ಕಲ್ಯಾಣ್​​. ಅದಾದ ನಂತರ ಜನಿಸಿದ್ದು, ಮಾರ್ಕ್ ಶಂಕರ್ ಪವನೋವಿಚ್.

ಪವನ್​ ಕಲ್ಯಾಣ್​ ಅವರಿಗೆ ಮದುವೆಗೂ ಮುನ್ನವೇ ಮಕ್ಕಳಿದ್ದವು. ಅವರು ರಾಜಕೀಯಕ್ಕೆ ಪ್ರವೇಶ ಪಡೆದುಕೊಳ್ಳುವ ವಿಚಾರವಾಗಿ, ತಮಗೆ ರಾಜಕೀಯ ಪಟ್ಟ ಬೇಕು ಎನ್ನುವುದಕ್ಕಾಗಿ ಈ ಮೂರು ಮದುವೆಗಳನ್ನು ಮಾಡಿಕೊಂಡಿದ್ದಾರೆ. ಇದು ಸ್ವತಃ ಇಷ್ಟದ ಮದುವೆಯಾಗಿರಲಿಲ್ಲ ಎನ್ನುವ ಸಾಧ್ಯತೆ ಇದೆ ಎನ್ನುವುದನ್ನು ಮುನ್ನೆಲೆಗೆ ತಂದಿದ್ದಾರೆ.

ಭಾರಿ ಟ್ರೋಲ್​​ಗೆ ಗುರಿಯಾದ ಪವನ್

ರೇಣು ದೇಸಾಯಿ ಅವರಿಗೆ ಡಿವೋರ್ಸ್ ನೀಡುವ ಮುನ್ನವೇ ಅನ್ನಾ ಗರ್ಭಿಣಿಯಾಗಿದ್ದರು ಎಂದು ಕಾಣುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಯಾವುದೇ ಮುಜುಗರವಿಲ್ಲದೆ ಅಪ್ಪಟ ಸನಾತನ ಧರ್ಮದ ಭಕ್ತ ಎನ್ನುವುದು, ಅಕ್ರಮ ಸಂಬಂಧ ಹೊಂದಿರುವುದು ಮತ್ತು ಮದುವೆಗೂ ಮುನ್ನವೇ ಮಗುವಾಗಿರುವುದು... ಆದರೂ ಈ ಕ್ಯಾರೆಕ್ಟರ್‌ಗೆ ಫ್ಯಾನ್ಸ್‌! ಎಂದು ಕೆಲವರು ಕಿಡಿಕಾರಿದ್ದಾರೆ.

ಇಷ್ಟೇ ಅಲ್ಲದೇ ಇನ್ನು ಕೆಲವರು ನಾಲ್ಕನೇ ಮದುವೆ ಮತ್ತು ಮಕ್ಕಳು ಲೋಡಿಂಗ್​ ಎಂದು ಪವನ್​ ಕಲ್ಯಾಣ್ ಅವರನ್ನು ಟ್ರೋಲ್ ಮಾಡಿದ್ದಾರೆ. ಮತ್ತೊಂದು ಮೀಮ್​ನಲ್ಲಿ ಪವನ್​ ಕಲ್ಯಾಣ್​ ವರನಂತೆ ನಿಂತಿದ್ದು ವಧುವಿನ ಜಾಗ ಖಾಲಿ ಇದೆ..ಹುದ್ದೆ ನೇಮಕಾತಿ ಇನ್ನೂ ವೇಟಿಂಗ್​ ಲಿಸ್ಟ್​ನಲ್ಲಿದೆ ಎಂದು ಲೇವಡಿ ಮಾಡಿದ್ದಾರೆ

"ಡಿವೋರ್ಸ್ ಆಗಿದೆ ಅಂತ ನೀವೇ ಹೇಳ್ತಿದ್ದೀರಾ, ಆದರೆ ನಾನು ಹೇಳ್ತಿರೋದು ಏನಂದ್ರೆ, ಆಗ್ಲೇ ಮತ್ತೊಬ್ಬಳನ್ನು ಸೆಟ್ ಮಾಡ್ಕೊಂಡು ಅವಳಿಗೆ ಪ್ರೆಗ್ನೆಂಟ್ ಮಾಡಿದ್ದಾನೆ ಅಂತ! ಎಂದು ಪವನ್​ ಕಲ್ಯಾಣ್​ ಹೌದು ಎನ್ನುತ್ತಾ ಸಮಾವೇಶದಲ್ಲಿರುವ ಹಳೆಯ ವಿಡಿಯೋವನ್ನು ಟ್ರೋಲಿಗರು ಹಂಚಿಕೊಂಡಿದ್ದಾರೆ

ಇತ್ತೀಚೆಗೆ ಅಸಮಾಧಾನ ಹೊರ ಹಾಕಿದ್ದ ರೇಣು

ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೇಣು, ತಮ್ಮ ಮತ್ತು ಪವನ್​ ಕಲ್ಯಾಣ್ ಮದುವೆ ಬಗ್ಗೆ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದರು. ಬದ್ರಿ ಸಿನಿಮಾಕ್ಕಾಗಿ ಮಾತ್ರ ನಾನು ಹುಟ್ಟಿಕೊಂಡೆ ಎನ್ನುವಂತೆ ನನ್ನನ್ನು ಬಿಂಬಿಸಲಾಗುತ್ತಿದೆ. 14 ವರ್ಷಗಳಾಯಿತು. ಶ್ರೀರಾಮಚಂದ್ರನೇ ಕೇವಲ 14 ವರ್ಷಗಳ ಕಾಲವಷ್ಟೇ ವನವಾಸದಲ್ಲಿದ್ದ. ಹಾಗಾದರೆ ನನ್ನ ಈ ವನವಾಸ ಎಂದಿಗೆ ಕೊನೆಗೊಳ್ಳುತ್ತದೆ?"

ಪವನ್ ಕಲ್ಯಾಣ್ ಅವರ ಜೊತೆಗಿನ ನಂಟು ಕಳಚಿಕೊಂಡ ಮೇಲೆ ತಮಗೆ ಬದುಕಲು ಯಾವುದೇ ಅರ್ಹತೆಯಿಲ್ಲ ಎಂಬ ರೀತಿಯಲ್ಲಿ ಕೆಲವರು ದ್ವೇಷ ಕಾರುತ್ತಾರೆ. ಎಷ್ಟೇ ಸಾಧನೆ ಮಾಡಿದರೂ ಸಹ ಪವನ್​ ಕಲ್ಯಾಣ್​ರ ಮಾಜಿ ಪತ್ನಿ ಎಂಬ ಪಟ್ಟವೇ ಮುಂದಿರುತ್ತದೆ ಎಂದು ರೇಣು ತಮ್ಮ ನೋವು ಹಂಚಿಕೊಂಡಿದ್ದರು, (ಏಜೆನ್ಸೀಸ್).